ಅಮ್ಮ ಇಲ್ಲದೆ ರಾಘು ಮಗ ಶೌರ್ಯ ಊಟ ಮಾಡಲು ಹಿಂದೆಮುಂದೆ ನೋಡುತ್ತಿದ್ದಾನೆ, ಅಯ್ಯೋ ಕಂದ

 | 
Bc

ಹೃದಯಾಘಾತದಿಂದ ನಿಧನರಾದ ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಉತ್ತರ ಕ್ರಿಯೆ ಇಂದು ನಡೆದಿವೆ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯಿತು. ಶ್ರೀಮುರಳಿ ಪತ್ನಿ ವಿದ್ಯಾ ಅವರು ಶೌರ್ಯನ ಜೊತೆ ನಿಂತು ಕಾಳಜಿ ವಹಿಸಿದ್ದಾರೆ. ಸ್ಪಂದನಾ ವಿಜಯ್​ ರಾಘವೇಂದ್ರ ಅವರು ಹೃದಯಾಘಾತದಿಂದ ನಿಧನರಾಗಿದ್ದು ಬಹಳ ನೋವಿನ ಸಂಗತಿ. 

ಸ್ಪಂದನಾ ಅವರ ಅಗಲಿಕೆ ಬಳಿಕ ವಿಜಯ್​ ರಾಘವೇಂದ್ರ ಅವರ ಕುಟುಂಬದಲ್ಲಿ ದುಃಖ ಆವರಿಸಿದೆ. ವಿಜಯ್​ ರಾಘವೇಂದ್ರ ಮತ್ತು ಸ್ಪಂದನಾ ದಂಪತಿಯ ಮಗ ಶೌರ್ಯ ಕೂಡ ಕಣ್ಣೀರು ಹಾಕುತ್ತಿದ್ದಾನೆ. ಇಂದು ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆದಿವೆ. ಈ ವೇಳೆ ಶೌರ್ಯನ ಜೊತೆ ನಿಂತು ಕಾಳಜಿ ವಹಿಸಿದ್ದಾರೆ ಶ್ರೀಮುರಳಿ ಪತ್ನಿ ವಿದ್ಯಾ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯಿತು. 

ಬಳಿಕ ಮಲ್ಲೇಶ್ವರದ ಮೈದಾನದಲ್ಲಿ ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಯಿತು. ಆಗ ಅಮ್ಮ ಬೇಕೆಂದು ಶೌರ್ಯ ಹಟ ಮಾಡಿದ್ದಾನೆ. ಆಗ ಶ್ರೀ ಮುರಳಿ ಅವರ ಪತ್ನಿ ವಿದ್ಯಾ ಅವನಿಗೆ ಸಮಾಧಾನ ಮಾಡಿ ಅವನಿಗೆ ಊಟ ಮಾಡಿಸಿದ್ದಾರೆ. ಇನ್ನು ಈ ಹಿಂದೆ ಪುತ್ರ ಶೌರ್ಯ ಮುದ್ದು ಅಮ್ಮನ ಕೊನೇ ಕ್ಷಣದ ಕಾರ್ಯಗಳಲ್ಲಿ ಪಾಲ್ಗೊಂಡು ಈಡಿಗ ಸಂಪ್ರದಾಯದಂತೆ ವಿಧಿ ವಿಧಾನ ನೆರವೇರಿಸಿದ್ದರು. ಪತ್ನಿಯ ಮುಖವನ್ನೇ ನೋಡುತ್ತ ನಿಂತಿದ್ದ ವಿಜಯ್‌ ರಾಘವೇಂದ್ರ ಅಕ್ಷರಶಃ ಮೌನಕ್ಕೆ ಜಾರಿದ್ದರು. 

ಕಳೆದ ಕೆಲ ದಿನಗಳ ಹಿಂದಷ್ಟೇ ಸ್ನೇಹಿತರ ಜತೆಗೆ ಬ್ಯಾಂಕಾಕ್‌ ಪ್ರವಾಸಕ್ಕೆಂದು ಹೋದಾಗ, ರಾತ್ರಿ ವೇಳೆ ಹೃದಯಾಘಾತವಾಗಿ ನಿಧನರಾಗಿದ್ದರು. ಅವರ ನಿಧನದ ಸುದ್ದಿ ಇಡೀ ಕರ್ನಾಟಕವನ್ನೇ ಅಳಿಸಿತ್ತು. ಆಗಸ್ಟ್‌ 8ರ ರಾತ್ರಿ ಥಾಯ್ಲೆಂಡ್‌ನಿಂದ ಬೆಂಗಳೂರಿಗೆ ತರಲಾಗಿತ್ತು. ಅದಾದ ಬಳಿಕ ಮಧ್ಯಾಹ್ನದ ವರೆಗೂ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಇದನ್ನೆಲ್ಲ ನೋಡಿ ಶೌರ್ಯ ಕಂಗಾಲಾಗಿದ್ದಾನೆ. ಊಟ ನಿದ್ದೆಯ ಮರೆತಂತೆ ಇರುವಂತೆ ಕಾಣುತ್ತಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.