ವಿಶೇಷ ವಿಮಾನದಲ್ಲಿ ರಾಘು ಪತ್ನಿಯ ಮೃ.ತ ದೇಹ ರವಾನೆ, ಜೊತೆಯಲ್ಲಿ ಯಾರೆಲ್ಲ ಇರುತ್ತಾರೆ ಗೊತ್ತಾ

 | 
Nd

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟ ವಿಜಯ್ ರಾಘವೇಂದ್ರ ಧರ್ಮ ಪತ್ನಿ ಸ್ಪಂದನಾ ಅವರು ಇದೀಗ ಬ್ಯಾಂಕಾಕ್ ನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೌದು, ಕೆಲಸದ ನಿಮಿತ್ತ ಬ್ಯಾಂಕಾಕ್ ಗೆ ತೆರಳಿದ್ದ ಸ್ಪಂದನಾ ಅವರಿಗೆ ಎದೆನೋವು ಕಾಣಿಸಿಕೊಂಡು ಇಹಲೋಕ ತ್ಯಜಿಸಿದ್ದಾರೆ. 

ಸ್ಪಂದನಾ ಅವರ ಮೃತ ದೇಹವನ್ನು ಬ್ಯಾಂಕಾಕ್ ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮರಣ ಪರೀಕ್ಷೆ ಮಾಡಲಾಗಿದೆ. ನಂತರದಲ್ಲಿ ಅಲ್ಲಿನ ಎಲ್ಲಾ ಕಾನೂನು ವ್ಯವಸ್ಥೆ ಮುಗಿಸಿದ ಬಳಿಕ ವಿಶೇಷ ವಿಮಾನದಲ್ಲಿ ಸ್ಪಂದನಾ ಅವರ ಮೃತ ದೇಹವನ್ನು ಭಾರತಕ್ಕೆ ಕರೆತರಲಾಗುವುದು. 

ಈಗಾಗಲೇ ಸ್ಪಂದನಾ ಅವರ ದೇಹವನ್ನು ವಿಶೇಷ ವಿಮಾನದಲ್ಲಿ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ಇಂದು ಸಂಜೆ 8 ಗಂಟೆಗೆ ಬೆಂಗಳೂರು ಅಥವಾ ದಕ್ಷಿಣ ಕನ್ನಡದ ಬೆಳ್ತಂಗಡಿಗೆ ಸ್ಪಂದನಾ ಅವರ ಮೃತ ದೇಹ ತರಲಾಗುವುದು ಎನ್ನಲಾಗಿದೆ. 

ಇನ್ನು ಪತ್ನಿಯ ಜೊತೆ ವಿಜಯ್ ರಾಘವೇಂದ್ರ ಕೂಡ ಇದ್ದಾರೆ. ಪತ್ನಿಗೆ ಎದೆನೋವು ಕಂಡುಬಂದ ನಂತರ ವಿಜಯ್ ರಾಘವೇಂದ್ರ ಅವರು ಜೊತೆಯಲ್ಲೇ ಇದ್ದಾರೆ ಎಂಬ ಮಾಹಿತಿ ಇದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.