ಬಡಪಾಯಿಯ goods ವಾಹನಕ್ಕೆ ರಾಹುಲ್ ದ್ರಾವಿಡ್ ಕಾರು ಡಿಕ್ಕಿ, ಬಡವನ ಮೇಲೆ ಅವಾಜ್ ಹಾಕಿದ ದ್ರಾವಿಡ್
Feb 6, 2025, 12:24 IST
|

ಆದರೆ ಗೂಡ್ಸ್ ಆಟೋ ಚಾಲಕ ವಾಗ್ವಾದಕ್ಕೆ ಇಳಿದ ಘಟನೆ ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ನಡೆದಿದೆ.ಕೆಲಸದ ಮುಗಿಸಿ ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ರಾಹುಲ್ ದ್ರಾವಿಡ್ ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದರು. ಟ್ರಾಫಿಕ್ ಸಿಗ್ನಲ್‌ನಲಿ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ವಾಹನಗಳು ನಿಂತಿತ್ತು. ಆದರೆ ಗೂಡ್ಸಸ್ ಆಟೋ ಚಾಲಕ ನಿಂತಿದ್ದ ರಾಹುಲ್ ದ್ರಾವಿಡ್ ಕಾರಿಗೆ ಗುದ್ದಿದ್ದಾನೆ. ಇದರಿಂದ ರಾಹುಲ್ ದ್ರಾವಿಡ್ ಕಾರಿನ ಲೈಟ್ ಪುಡಿಯಾಗಿದೆ.
ಹಾಗೂ ಇತರ ಭಾಗಗಳು ಸ್ಕ್ರಾಚ್ ಬಿದ್ದಿದೆ. ಗೂಡ್ಸ್ ಆಟೋ ಕಾರಿಗೆ ಡಿಕ್ಕಿಯಾಗುತ್ತಿದ್ದಂತೆ ರಾಹುಲ್ ದ್ರಾವಿಡ್ ಕಾರಿನಿಂದ ರಸ್ತೆಗೆ ಇಳಿದಿದ್ದಾರೆ. ರಾಹುಲ್ ದ್ರಾವಿಡ್ ಇಳಿದು ಬಂದು ಗೂಡ್ಸ್ ಆಟೋ ಚಾಲಕನ ನಡೆಯನ್ನು ಪ್ರಶ್ನಿಸಿದ್ದರೆ. ನಿಲ್ಲಿಸಿದ್ದ ಕಾರಿಗೆ ಬಂದು ಗುದ್ದಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಗೂಡ್ಸ್ ಆಟೋ ಚಾಲಕ ವಾಗ್ವಾದಕ್ಕೆ ಇಳಿದಿದ್ದಾರೆ. ರಾಹುಲ್ ದ್ರಾವಿಡ್ ವಿರುದ್ಧ ತನ್ನದೇನು ತಪ್ಪಿಲ್ಲ ಎಂದು ಗೂಡ್ಸ್ ಆಟೋ ಚಾಲಕ ವಾದಿಸಲು ಮುಂದಾಗಿದ್ದಾರೆ. ಆದರೆ ದ್ರಾವಿಡ್ ಮಾತುಗಳನ್ನು ಕೇಳಿಸಿಕೊಳ್ಳದ ಆಟೋ ಚಾಲಕ ರಸ್ತೆಯಲ್ಲಿ ಭಾರಿ ವಾಗ್ವಾದಕ್ಕೆ ಇಳಿದಿದ್ದಾರೆ.
ಗೂಡ್ಸ್ ಆಟೋ ಚಾಲಕನ ಬಳಿ ಮಾತನಾಡಿ ಪ್ರಯೋಜನವಿಲ್ಲ ಎಂದು ಆರಿತ ರಾಹುಲ್ ದ್ರಾವಿಡ್ ತೆರಳಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಆದರೆ ರಾಹುಲ್ ದ್ರಾವಿಡ್ ಜೊತೆ ಆಟೋ ಚಾಲಕ ವಾಗ್ವಾದ ನಡೆಸುತ್ತಿರುವ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ರಸ್ತೆಯಲ್ಲಿ ಜನಸಾಮಾನ್ಯರಂತೆ ರಾಹುಲ್ ದ್ರಾವಿಡ್ ಗೂಡ್ಸ್ ಆಟೋ ಚಾಲಕನ ಜೊತೆ ಮಾತನಾಡುತ್ತಿರುವುದು ಹಾಗೂ ವಾಗ್ವಾದದ ದೃಶ್ಯಗಳು ಹರಿದಾಡುತ್ತಿದೆ. ಭಾರಿ ಕಮೆಂಟ್ ಕೂಡ ವ್ಯಕ್ತವಾಗುತ್ತಿದೆ. ಇದೀಗ ದ್ರಾವಿಡ್ ಜೊತೆ ವಾಗ್ವಾದ ಮಾಡುವ ವ್ಯಕ್ತಿ ಜೀವನದಲ್ಲಿ ನೋಡಿದ್ದು ಇದೇ ಮೊದಲು ಎಂದು ಹಲವರು ಕಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025