ನೀನು ಯಾವುದಕ್ಕೂ ಯೋಗ್ಯನಲ್ಲ ಎಂದು ಬಿಟ್ಟು ಹೋದ ಪ್ರಿಯತಮೆ, ರಾಜ್ ಬಿ ಶೆಟ್ಟಿ ವೇದಿಕೆಯಲ್ಲಿ ಕಂಗಾಲು

 | 
ಹಹಬ

ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ರಾಜ್ ಬಿ ಶೆಟ್ಟಿ, ಆಭಿನಯದ ಬಹು ನಿರೀಕ್ಷಿತ, ಅಪಾರ ವೆಚ್ಚದ ಅದ್ದೂರಿ ಸಿನಿಮಾ 'ಟೋಬಿ'. ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ವೀಕ್ಷಕರ ಮನಸ್ಸು ಗೆದ್ದಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. 

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಚಿತ್ರ ಒಂದು ಮಿಲಿಯನ್ ವೀಕ್ಷಣೆಯಾಗಿದೆ. ಹೌದು ಇದೇ ತಿಂಗಳ 25ಕ್ಕೆ ಚಿತ್ರ ಬಿಡುಗಡೆ ಆಗುತ್ತಿರುವ ಕುರಿತಾಗಿ ಸಂದರ್ಶನ ಒಂದರಲ್ಲಿ ಮಾತನಾಡಿದ ರಾಜ್ ಬಿ ಶೆಟ್ಟಿ ಅವರು ತನಗೂ ಈ ಮೊದಲು ಲವ್ ಆಗಿತ್ತು. ಅವಳಿಗೆ ನಾನು ಸರಿಯಾಗಿ ಸಮಯ ಕೊಡಲು ಸಾಧ್ಯವಾಗದ ಕಾರಣದಿಂದ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತು. ಕೊನೆಗೊಂದು ದಿನ ನಾವಿಬ್ಬರು ಬೇರೆ ಆಗುವ ಪ್ರಸಂಗ ಬಂತು. 

ಅಂದಿನಿಂದ ನಾನು ನನ್ನ ವೃತ್ತಿಯನ್ನು ಪ್ರೀತಿಸಿದೆ. ಹಾಗೆ ಇತ್ತೀಚೆಗೆ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದೇನೆ. ಅವಳಿಗೂ ನನ್ನಂತೆ ಜೀವನದಲ್ಲಿ ಜವಾಬ್ದಾರಿ ಹಾಗೂ ಗುರಿಯಿದೆ ಆ ಕಾರಣದಿಂದ ನಾವಿಬ್ಬರೂ ನಮ್ಮ ಗುರಿಯ ಕಡೆಗೆ ಸಾಗುತ್ತಿದ್ದೇವೆ. ಒಂದು ದಿನ ಇಬ್ಬರೂ ಮದುವೆ ಆಗುತ್ತೇವೆ ಎಂದಿದ್ದಾರೆ. ಆದರೆ ಈ ವರೆಗೂ ತಮ್ಮ ಮೊದಲ ಹುಡುಗಿ ಯಾರು ಹಾಗೂ ಈಗಿರುವ ಹುಡುಗಿ ಯಾರು ಎನ್ನುವ ಸತ್ಯವನ್ನು ಮಾತ್ರ ಎಲ್ಲಿಯೂ ಹೇಳಿಕೊಂಡಿಲ್ಲ.

ಚಿತ್ರದಲ್ಲಿ ರಾಜ್ ಬಿ ಶೆಟ್ಟಿಯ ಜೊತೆಗೆ ಚೈತ್ರಾ ಜೆ ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ, ಇನ್ನಷ್ಟು ಕಲಾವಿದರ ತಾರಾಬಳಗವಿದ್ದು, ಬಾಸಿಲ್ ಅಲ್ಚಾಲಕ್ಕಲ್ ನಿರ್ದೇಶನ ಮಾಡಿದ್ದಾರೆ. ಮಿಧುನ್ ಮುಕುಂದನ್ ಅವರ ಹಿನ್ನಲೆ ಸಂಗೀತ, ಮತ್ತು ಪ್ರವೀಣ್ ಶೀಯಾನ್ ಅವರ ಛಾಯಾಗ್ರಹಣ ಟ್ರೈಲರ್‌ಗೆ ಮತ್ತಷ್ಟು ಕೌತುಕತೆಯನ್ನು ನೀಡಿದೆ.

ಚಿತ್ರವನ್ನು ಲೈಟರ್ ಬುದ್ದ ಫಿಲಂಮ್ಸ್, ಆಗಸ್ತ್ಯ ಫಿಲಂಮ್ಸ್, ಕಾಫೀ ಗ್ಯಾಂಗ್ ಸ್ಟುಡಿಯೋ ಮತ್ತು ಸ್ಮೂತ್ ಸೈಲರ್ಸ್ ಜಂಟಿಯಾಗಿ ನಿರ್ಮಿಸಿದ್ದು ಇದೇ ಆಗಸ್ಟ್ 25 ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ, ರಿಷಭ್ ಶೆಟ್ಟಿ ಹಲವಾರು ಜನ ಸಿನಿಮಾಕ್ಕೆ ಶುಭ ಕೋರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.