ಏಕಾಏಕಿ ಕಾಂತಾರ ಚಿತ್ರತಂಡದಿಂದ ಹೊರಬಂದ ರಾಜ್ ಬಿ ಶೆಟ್ಟಿ, ಜೀವ ಭಯಕ್ಕೆ ಎದರಿದ ರಾಜ್ ಬಿ ಶೆಟ್ಟಿ

 | 
ಕಂ
ವೀಕ್ಷಕರೇ...ಮೂರು ವರ್ಷಗಳ ಹಿಂದೆ ಕಾಂತಾರ ಸಿನಿಮಾ ರಿಲೀಸ್ ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಆ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ದೈವದ ಪ್ರಮುಖ ದೃಶ್ಯಗಳನ್ನು ನಿರ್ದೇಶಿಸಿದ್ದರು. ಆದರೆ, 'ಕಾಂತಾರ ಚಾಪ್ಟರ್ 1' ಒಂದರಿಂದ ರಾಜ್ ಬಿ ಶೆಟ್ಟಿ ಹೊರ ಬಂದಿದ್ದಾರೆ. 
ಆ ಸಿನಿಮಾದಲ್ಲಿ ಅವರು ಕೆಲಸ ಮಾಡದೇ ಇರುವ ನಿರ್ಧಾರ ತೆಗೆದುಕೊಂಡಿದ್ದರು.ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಸಹಾಯ ಹಸ್ತ ಚಾಚುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, ರಾಜ್ ಬಿ ಶೆಟ್ಟಿ 'ಕಾಂತಾರ ಚಾಪ್ಟರ್‌ 1'ರಲ್ಲಿ ಯಾವುದೇ ರೀತಿ ಭಾಗವಹಿಸಿಲ್ಲ. 
ರಾಜ್ ಬಿ ಶೆಟ್ಟಿ ಯಾಕೆ ಹೊರ ಬಂದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. 'ಕಾಂತಾರ' ಸಿನಿಮಾ ಮಾಡಿದಾಗ, ಅಲ್ಲಿನ ಜನರು ಮಾಡಬೇಡಿ ಎಂದು ರಾಜ್ ಬಿ ಶೆಟ್ಟಿಗೆ ಹೇಳಿದ್ದರಂತೆ. ಹೀಗಾಗಿ ಆ ಸಿನಿಮಾದಿಂದ ಹೊರ ಬಂದಿದ್ದಾಗಿ ರಿವೀಲ್ ಮಾಡಿದ್ದಾರೆ. ಮೊದಲನೇ ಸಿನಿಮಾ ಬಂದಾಗ ಇದನ್ನು ಮಾಡಬೇಡಿ ಅಂದರು. 
ನಾನು ಆಗಲೇ ಮನಸ್ಸಿನಲ್ಲಿ ಆಯ್ತು ಇನ್ಮುಂದೆ ಇದನ್ನು ಮಾಡುವುದಿಲ್ಲ ಅಂದುಕೊಂಡೆ. ಹೀಗೆ ಒಂದು ಸಲ ಅಂದ್ಕೊಂಡ ಮೇಲೆ ಮತ್ತೆ ಮಾಡುವುದಕ್ಕೆ ಮನಸ್ಸಾಗಲಿಲ್ಲ. ಆದ್ದರಿಂದ ಕಥೆ ಯಾವ ರೀತಿ ಆಗಿದೆ. ಸಿನಿಮಾದಲ್ಲಿ ದೈವ ಇದೆಯಾ? ಇಲ್ವಾ? ಅದೇನು ಗೊತ್ತಿಲ್ಲ. ಜೊತೆ ನಾನು ಪ್ರೊಡಕ್ಷನ್‌ನಲ್ಲಿ ಆಕ್ಟಿಂಗ್‌ನಲ್ಲಿ ತುಂಬಾನೇ ಬ್ಯುಸಿಯಾಗಿದ್ದ ಕಾರಣ ಆ ಕಡೆಗೆ ಹೋಗುವುದಕ್ಕೆ ಆಗಲಿಲ್ಲ.ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
News Hub