ಮಹಡಿ ಮೇಲೆ ಬಟ್ಟೆ ಒಣ ಹಾಕಲು ಬಂದಿದ್ದ ಹುಡುಗಿಯನ್ನೇ ಲವ್ ಮಾಡಿದ್ದ ರಜತ್, ಎಂತಹ ಟ್ಯಾಲೆಂಟ್‌ ಎಂದ ನೆಟ್ಟಿಗರು

 | 
Jd
ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದು ವಾರವೇ ಕಳೆದು ಹೋಗಿದೆ. ಹನುಮಂತ ವಿನ್ನರ್ ಆಗಿದ್ರೆ, ತ್ರಿವಿಕ್ರಂ ಹಾಗೂ ರಜತ್ ಕಿಶನ್ ರನ್ನರ್ ಅಪ್ ಆಗಿದ್ದಾರೆ. ರಜತ್ ಮಾತುಗಳು ಬಾಲನ್ನು ಎತ್ತಿ ಗೋಡೆಗೆ ಹೊಡೆದಂತೆ ಇರುತ್ತವೆ. ಬಿಗ್ ಬಾಸ್ ಮನೆಗೆ ರಜತ್ ಬಂದದ್ದು ವೈಲ್ಡ್ ಕಾರ್ಡ್ ಮೂಲಕ. ರಜತ್ ಜೊತೆಗೆ ಶೋಭಾ ಶೆಟ್ಟಿ ಕೂಡ ಬಂದಿದ್ದರು. ಆದರೆ ಅವರು ನಿರೀಕ್ಷೆ ಮಾಡಿದಷ್ಟು ದಿನ ಮನೆಯಲ್ಲಿ ಉಳಿಯಲಿಲ್ಲ. ಅನಾರೋಗ್ಯದ ಕಾರಣಕ್ಕೆ ಹೊರಗೆ ಬಂದರು.
ರಜತ್ ಯಾವುದಕ್ಕೂ ಬಗ್ಗದೆ ಇರುವ ವ್ಯಕ್ತಿ. ಅವರು ಆಡುವ ಮಾತಿನಿಂದ ಎದುರು ಇರುವ ವ್ಯಕ್ತಿಗೆ ಹರ್ಟ್ ಆಗಬಹುದು ಎಂಬುದನ್ನು ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ. ಸೀದಾ ಸಾದಾ ಮಾತಾಡ್ತಾ ಇದ್ರು. ರಜತ್ ವೈಫ್ ಕೂಡ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದವರು. ಇಬ್ಬರದ್ದು ಲವ್ ಮ್ಯಾರೇಜ್. ಆದರೆ ಇಬ್ಬರ ನಡುವೆ ಲವ್ ಆಗಿದ್ದೇಗೆ. ತಿಳಿದ್ರೆ ಆಶ್ಚರ್ಯ ಪಡ್ತೀರಿ.
ರಜತ್ ಕಿಶನ್ ಅವರನ್ನ ಬುಜ್ಜಿ ಅಂತ ಕೂಡ ಕರೆಯುತ್ತಾರೆ. ರಜತ್‌ಗೆ ಒಂದು ಮುದ್ದಾದ ಕುಟುಂಬವಿದೆ. ಪ್ರೀತಿಸಿ ಮದುವೆಯಾದ ಅಕ್ಷತಾ, ಇಬ್ಬರು ಮಕ್ಕಳು. ಸೋಷಿಯಲ್ ಮೀಡಿಯಾದಲ್ಲಿ ಅಕ್ಷತಾ ಹಾಗೂ ರಜತ್ ಇಬ್ಬರು ಆಕ್ಟೀವ್ ಆಗಿನೆ ಇರುತ್ತಾರೆ. ಫ್ಯಾಮಿಲಿ ಫೋಟೋಶೂಟ್‌ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಾ ಇರುತ್ತಾರೆ. ಒಂದು ಗಂಡು, ಒಂದು ಹೆಣ್ಣು ಮಗು. ಇಬ್ಬರು ಕೂಡ ರಜತ್‌ಗೆ ಇನ್ನಿಲ್ಲದ ಪ್ರೀತಿ.
ತಮ್ಮ ಪ್ರೀತಿ ಬಗ್ಗೆ ಮಾತನಾಡಿರುವ ರಜತ್, ಅಕ್ಷತಾಗೂ ತನಗೂ ಲವ್ ಆಗಿದ್ದೇಗೆ ಎಂಬುದನ್ನು ತಿಳಿಸಿದ್ದಾರೆ. ಆಕ್ಚುಲಿ ಅಕ್ಷತಾ ಸಿಕ್ಕಿರುವುದು ನಿನ್ನೆ ಮೊನ್ನೆಯಲ್ಲ. ಚೈಲ್ಡ್ ವುಡ್ ಲೈಫ್‌ನಿಂದಾನೂ ಅಕ್ಷತಾ ರಜತ್ ಕ್ಲೋಸ್ ಇದಾರೆ. ಒಂದೇ ಏರಿಯಾದಲ್ಲಿದ್ದವರು. ರಜತ್ ಮನೆಯ. ಟೆರೆಸ್ ಮೇಲೆ ನಿಂತು ನೋಡಿದ್ರೆ ಅಕ್ಷತಾ ಕಾಣಿಸ್ತಾ ಇದ್ರಂತೆ. ಬಟ್ಟೆ ಒಣಗಿ ಹಾಕಲು ಬರುವಾಗ ನೋಡ್ತಾ ಇದ್ರಂತೆ ರಜತ್. 
ಎಸ್ಎಸ್ಎಲ್ಸಿನಲ್ಲಿ ಅಕ್ಷತಾ ನೋಡುವುದಕ್ಕೆ ಅಷ್ಟೊಂದು ಚೆನ್ನಾಗಿ ಇರಲಿಲ್ಲವಂತೆ. ಆದರೆ ಪಿಯುಸಿಗೆ ಬಂದ ಮೇಲೆ ಅಕ್ಷತಾ ದಿಢೀರನೇ ಸಖತ್ತಾಗಿ ಕಾಣಿಸಿಕೊಂಡರಂತೆ. ಇದೇ ಹುಡುಗಿ ಅಲ್ವಾ ನಮ್ಮ ಮನೆ ಹತ್ರ ಇರೋದು ಅಂತ ಬುಜ್ಜಿ ಆಶ್ಚರ್ಯ ಪಟ್ಟಿದ್ದರಂತೆ. ಲವ್ ಪ್ರಪೋಸ್ ಮಾಡಿ ಮದುವೆ ಮಾಡಿಕೊಂಡರಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.