ಬಿಗ್ ಬಾಸ್ ಮನೆಯಿಂದ ರಜತ್ ಔಟ್, ಚೈತ್ರ ಕುಂದಾಪುರಗೆ ಅಸಹ್ಯ ಪದಬಳಕೆ
Jan 7, 2025, 09:45 IST
|
ಕನ್ನಡಿಗರ ಮೆಚ್ಚಿನ ಶೋ ಬಿಗ್ ಬಾಸ್ ಕನ್ನಡ 11ನೇ ಸೀಸನ್ ಮುಗಿಯಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈ ಭಾನುವಾರದ ವಾರದ ಕಥೆ ಕಿಚ್ಚನ ಜೊತೆ ಪ್ರೋಮೋ ಬಿಡುಗಡೆಯಾಗಿದ್ದು, ಈ ಜರ್ನಿಯಲ್ಲಿ ಡೇಂಜರ್ ಯಾರು ಹಾಗೂ ಜೋಕರ್ ಯಾರು ಎನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ. ಇದೇ ವೇಳೆ ಕಪ್ ಎತ್ತಿಕೊಂಡು ನಾನು ಮನೆಗೆ ಹೋಗುತ್ತೇನೆ ಎಂದು ಸ್ಪರ್ಧಿಯೊಬ್ಬರು ಹೇಳುತ್ತಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಈ ಬಾರಿಯ ಸೀಸನ್ 11 97ನೇ ದಿನಕ್ಕೆ ಬಂದು ತಲುಪಿದೆ. ಅದರಲ್ಲೂ ಎಲ್ಲಾ ಸೀಸನ್‌ಗಿಂತಲೂ ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರದ್ದೇ ದರ್ಬಾರ್ ಆಗಿಬಿಟ್ಟಿದೆ. ಇವರ ಬಿಗ್ ಬಾಸ್ ಮನೆಯಲ್ಲಿನ ಆಟಕ್ಕೆ ವೀಕ್ಷಕರು ಸೈ ಎನ್ನುತ್ತಿದ್ದಾರೆ.
ಈ ವಾರ ಡೇಂಜರ್ ಯಾರು ಹಾಗೂ ಜೋಕರ್ ಯಾರು ಎನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ. ಇದೇ ವೇಳೆ ಭವ್ಯಾ ಅವರು ತಲೆಯಲ್ಲಿ ತುಂಬಾ ವಿಚಾರಗಳನ್ನು ಓಡಿಸುತ್ತಿರುತ್ತಾರೆ ಎಂದು ಕಾರಣ ನೀಡುವ ಮೂಲಕ ಡೇಂಜರ್ ಅನ್ನುವುದನ್ನು ತ್ರಿವಿಕ್ರಂಗೆ ಕೊಡುತ್ತಾರೆ. ಇನ್ನು ಬಹುತೇಕ ಸ್ಪರ್ಧಿಗಳು ಚೈತ್ರಾಗೆ ಜೋಕರ್ ಎನ್ನುವ ಪಟ್ಟ ಕೊಡುತ್ತಾರೆ.
ಇದೇ ವೇಳೆ ರಜತ್ ಚೈತ್ರಾಗೆ ಜೋಕರ್ ಎನ್ನುವ ಪಟ್ಟವನ್ನು ಕೊಟ್ಟಿದ್ದಲ್ಲದೆ, ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಜೋಕರ್ ಚೈತ್ರಾ ಎಂದು ಹೇಳುವ ಮೂಲಕ ಅವರು ಬಿಗ್ ಬಾಸ್ ಮನೆಗೆ ಬಂದು ವಾರ ವಾರಗಳನ್ನು ಕಳೆದಿದ್ದಾರೆ. ಇಷ್ಟು ದಿನ ಅವರು ಸಂಪಾದನೆ ಮಾಡಿರೋದು ಇಷ್ಟು. ಅದಕ್ಕೆ ಅವರನ್ನು ಜೋಕರ್ ಥರಾ ನೋಡುತ್ತಿದ್ದೇನೆ ಎಂದು ಹೇಳುತ್ತಾರೆ. ಇದರಿಂದ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಆಗಬಹುದು ಅಥವಾ ಮುಂದಿನ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಯಾವಾಗ ಬೇಕಾದರೂ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ. ಇದರಿಂದ ಮನೆಯ ಸ್ಪರ್ಧಿಗಳು ಹೈ ಅಲರ್ಟ್ ಆಗಿದ್ದಾರೆ. ಇನ್ನು ಚೈತ್ರಾ ಕುಂದಾಪುರ ಜೊತೆ ಜಗಳವಾಡಿದ ಕಾರಣ ರಜತ್ ಅವರು ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.