ಮಾಜಿ ಲವರ್ ಜೊತೆ ರಾತ್ರಿ ಆಟದ ದೃ.ಶ್ಯ ಬಿಡುಗಡೆ ಮಾಡಿದ ರಾಖಿ ಸಾವಂತ್; ಬಾಲಿವುಡ್ ಡವಡವ

 | 
Hj

ತಮ್ಮ ಮಾತು ಮತ್ತು ವರ್ತನೆಗಳಿಂದ ಅಖಂಡ ಎರಡೂವರೆ ದಶಕಗಳಿಂದ ಬಾಲಿವುಡ್ ನಲ್ಲಿ ಚಾಲ್ತಿಯಲ್ಲಿರುವವರು ರಾಖಿ ಸಾವಂತ್. ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುವ ರಾಖಿ ಸಾವಂತ್ ಮದುವೆ ವಿಚಾರದಲ್ಲಿ ಮಾಡಿಕೊಂಡ ರಂಕಲುಗಳು ಒಂದೆರಡಲ್ಲ. ಇಂಥ ರಾಖಿ ಸಾವಂತ್ ಪಾಲಿಗೆ ಈಗ ಆ ಮದುವೆಯೇ ಮುಳ್ಳಾಗಿದೆ. ಬಂಧನದ ಭೀತಿ ಎದುರಾಗಿದೆ.

ಹೌದು ..ಆದಿಲ್ ದುರಾನಿ ಜೊತೆ ಬರೋಬ್ಬರಿ ಒಂದು ತಿಂಗಳು ಸಂಸಾರ ಮಾಡಿ ಸುಸ್ತಾದ ರಾಖಿ ಸಾವಂತ್,ಆ ನಂತರ ಪತಿಯ ವಿರುದ್ಧ ತಿರುಗಿ ಬಿದ್ದಿದ್ದಳು. ರಂಪ ರಾಮಾಯಣ ಮಾಡಿಕೊಂಡಿದ್ದಳು. ಇದು ಸಾಲದು ಎಂಬಂತೆ ವಾಹಿನಿಯೊಂದರಲ್ಲಿ ಆದಿಲ್ ಅವರ ಅಶ್ಲೀಲ ವಿಡಿಯೋವನ್ನು ಅತ್ಯಂತ ಹೆಮ್ಮೆಯಿಂದ ಹಂಚಿಕೊಂಡಿದ್ದಳು ರಾಖಿ ಸಾವಂತ್.

ಈ ಕಾರಣಕ್ಕೆ ಕೆರಳಿ ಕೆಂಡ ವಾಗಿದ್ದ ಆದಿಲ್, ತಮ್ಮ ವಿಡಿಯೋಗಳನ್ನ ರಾಖಿ ಸಾವಂತ್ ಊರ್ ತುಂಬಾ ಹಂಚುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಪ್ರಕರಣವನ್ನೂ ದಾಖಲಿಸಿದ್ದರು. ಆದಿಲ್ ದೂರಿನ ಮೇರೆಗೆ ರಾಖಿ ವಿರುದ್ಧ ಐಪಿಸಿ ಸೆಕ್ಷನ್ 500, 34 ಮತ್ತು ಸೆಕ್ಷನ್ 67ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು ಪೊಲೀಸರು.

ಆದಿಲ್ ನ ಈ ಅನಿರೀಕ್ಷಿತ ನಡೆಯಿಂದ ಹೈರಾಣಾಗಿದ್ದ ರಾಖಿ ಸಾವಂತ್, ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನ ಸಲ್ಲಿಸಿದ್ದಳು. ಆದಿಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಂತೆ ಕೇಳಿದ್ದಳು. ಆದರೆ ರಾಖಿ ದುರಾದೃ‍ಷ್ಟ. ಬಾಂಬೆ ಹೈಕೋರ್ಟ್ ರಾಖಿ ಸಾವಂತ್ ಮನವಿಯನ್ನು ವಜಾಗೊಳಿಸಿತ್ತು.

ಆದರೂ ನಂಬಿಕೆಯನ್ನ ಕಳೆದುಕೊಳ್ಳದ ರಾಖಿ ಸಾವಂತ್ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೇರಿದ್ದಳು. ಅರ್ಜಿಯಲ್ಲಿ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ರಾಖಿ ಹೇಳಿದ್ದಳು. ಅಷ್ಟೇ ಅಲ್ಲ, ಆದಿಲ್ ತಾನು ಹಂಚಿಕೊಂಡ ವೀಡಿಯೊಗಳನ್ನು ಶೂಟ್ ಮಾಡಿದ್ದಾನೆ. ಆದ್ದರಿಂದ ಅವನು ತನ್ನಂತೆಯೇ ಅಪರಾಧಿ ಎಂದಿದ್ದಳು ರಾಖಿ ಸಾವಂತ್. 

ಇನ್ನೂ ಈ ವೀಡಿಯೋಗಳು ಕೇವಲ ಅಶ್ಲೀಲವಲ್ಲ ಆದರೆ ಆಕ್ಷೇಪಾರ್ಹವಾಗಿವೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಳು. ಅದನ್ನು ಕೋರ್ಟ್ ತಳ್ಳಿ ಹಾಕಿದ ಕಾರಣ ರಾಖಿ ಸಾವಂತ್ ಅಪರಾಧಿ ಸ್ಥಾನದಲ್ಲಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.