ರಕ್ಷಕ್ ಬುಲೆಟ್ ಗೆ 'ಅದೇ' ಇಲ್ಲ, ಸಂದಶ೯ನವೊಂದರಲ್ಲಿ ಸತ್ಯ ಬಾಯ್ಬಿಟ್ಟ ಗೆಳತಿ ರಮೋಲಾ
| Aug 9, 2025, 21:42 IST
ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನ ಈ ಸೀಸನ್‌ನಲ್ಲಿ ರಕ್ಷಕ್ ಬುಲೆಟ್ ಹಾಗೂ ರಮೋಲಾ ಜೋಡಿ ಸಖತ್ ಮೋಡಿ ಮಾಡಿತ್ತು. ಕೊನೆಯಲ್ಲಿ ರಕ್ಷಕ್ ಜೋಡಿನೇ ಗೆಲ್ಲೋದು ಎಂಬ ನಿರೀಕ್ಷೆಯೂ ಸಾಕಷ್ಟಿತ್ತು. ಇನ್ನು ಈ ಜೋಡಿಯ ಫನ್ನಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ರನ್ನರ್ ಅಪ್ ರಕ್ಷಕ್ ಬುಲೆಟ್ ಹಾಗೂ ರಮೋಲಾ ಇತ್ತೀಚಿನ ಸಂದರ್ಶನದಲ್ಲಿ ಅಚ್ಚರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ರಕ್ಷಕ್‌ಗೆ ರಸಿಕತೆ ಇಲ್ಲ, ಹುಡುಗಿಯರ ಮೇಲೆ ಆಸಕ್ತಿ ಇಲ್ಲ ಎಂದು ರಮೋಲಾ ಹೇಳಿಕೊಂಡಿದ್ದಾರೆ.
ನಿಜ ಹೇಳಬೇಕು ಅಂದ್ರೆ ನಮ್ಮಿಬ್ಬರ ನಡುವೆ ಬಾಂಡಿಂಗ್ ಚೆನ್ನಾಗಿತ್ತು. ರಕ್ಷಕ್ ಹೊರಗೆ ಮಾಸ್ ಆದ್ರೂ ತುಂಬಾ ಮುಗ್ಧ. ಮೊದಲೇ ನಾನು ಈ ಶೋನಲ್ಲಿ ರಕ್ಷಕ್ ಪಾರ್ಟ್‌ನರ್ ಆಗಿ ಬರಬೇಕು ಅಂತಿದ್ದೆ. ಅದೇ ನಿಜವಾಯ್ತು, ಇವನಿಗೆ ಡಿಂಪಲ್ ಬೀಳುತ್ತೆ. ತುಂಬಾ ಕ್ಯೂಟ್ ಆಗಿ ಕಾಣ್ತಾನೆ. ರಕ್ಷಕ್‌ಗೆ ಹುಡುಗಿಯರಲ್ಲಿ ಇಂಟ್ರೆಸ್ಟೇ ಇಲ್ಲ. ಮೊದಲು ಇವನಿಗೆ ಆಸಕ್ತಿ ತರಿಸಿ, ಆಮೇಲೆ ಹುಡುಗಿಯರನ್ನ ಹುಡುಕೋಕೆ ಬೇಕಾದ ಕ್ವಾಲಿಟೀಸ್ ತುಂಬಬೇಕಿತ್ತು' ಎಂದಿದ್ದಾರೆ ರಮೋಲಾ.
ರವಿಚಂದ್ರನ್ ಅವರಿಂದಲೇ ರಕ್ಷಕ್ ನನಗೆ ಮುತ್ತು ಕೊಟ್ಟ. ಈ ಹಿಂದೆ ರಕ್ಷಕ್ ಬಗ್ಗೆ ವೇದಿಕೆಯಲ್ಲಿ ಹೇಳುವಾಗ ವಾಕ್ಯ ರಚನೆ ನನಗೆ ಸರಿಯಾಗಿ ಬರಲಿಲ್ಲ. ರಕ್ಷಕ್‌ಗೆ ಅದೇ ಇಲ್ಲ ಎಂದು ಹೇಳಿದ್ದು ಟ್ರೋಲ್ ಆಗಿತ್ತು. ಅದೇನು ಅಂದ್ರೆ "ರಸಿಕತೆ ಇಲ್ಲ" ಅಂತಾ ಹೇಳೋಕೆ ಬಂದೆ. ಆ ಮೇಲೆ ಕಾಮೆಂಟ್‌ಗಳಲ್ಲೂ ರಸಿಕತೆ ಅಂತ ತುಂಬಾ ಜನ ಹೇಳಿದ್ರು' ಎಂದು ಆ ಎಡವಟ್ಟಿನ ಬಗ್ಗೆ ಹೇಳಿದ್ದಾರೆ.