'ರಶ್ಮಿಕಾ ಜೊತೆ ಹಳೆ ಜೀವನ ಮರೆಯೋದಕ್ಕೆ ಸಾಧ್ಯವಾಗುತ್ತಿಲ್ಲ' ರಕ್ಷಿತ್ ಶೆಟ್ಟಿ

 | 
Huh

ತನ್ನ ಮಾಜಿ ಪ್ರೇಯಸಿ ರಶ್ಮಿಕಾ ಮಂದಣ್ಣರ ಕುರಿತು ಅಪರೂಪದ ಹೇಳಿಕೆಯೊಂದನ್ನು ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ನೀಡಿದ್ದಾರೆ. ಸದ್ಯ ಅನಿಮಲ್ ಚಿತ್ರದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣರ ಜತೆ ರಕ್ಷಿತ್ ಶೆಟ್ಟಿಗೆ 2017ರಲ್ಲಿ ನಿಶ್ಚಿತಾರ್ಥವಾಗಿತ್ತು. ಆದರೆ, ಮದುವೆಗೆ ಮೊದಲೇ ಈ ಸಂಬಂಧ ಮುರಿದುಬಿದ್ದಿತ್ತು. 

ಇದಾದ ಬಳಿಕ ರಶ್ಮಿಕಾ ಮಂದಣ್ಣರೆಂದರೆ ಸಾಕಷ್ಟು ಕನ್ನಡಿಗರು ಉರಿದು ಬೀಳುತ್ತಿದ್ದರು. ರಕ್ಷಿತ್ ಶೆಟ್ಟಿಯೂ ರಶ್ಮಿಕಾ ಕುರಿತು ಯಾವುದೇ ಹೇಳಿಕೆ ನೀಡುತ್ತಿರಲಿಲ್ಲ. ಆದರೆ, ರಶ್ಮಿಕಾ ಜತೆ ರಕ್ಷಿತ್ ಶೆಟ್ಟಿ ಈಗಲೂ ಸಂಪರ್ಕದಲ್ಲಿದ್ದಾರೆ ಎನ್ನುವ ವಿಷಯ ಇತ್ತೀಚಿನ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಬಹಿರಂಗವಾಗಿದೆ.

ಇತ್ತೀಚೆಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎಯ ತೆಲುಗು ಅವತರಣಿಕೆಯ ಪ್ರಮೋಷನ್‌ ಸಮಯದಲ್ಲಿ ಯೂಟ್ಯೂಬರ್‌ವೊಬ್ಬರು ನೀವು ಈಗಲೂ ರಶ್ಮಿಕಾ ಮಂದಣ್ಣರ ಜತೆ ಸಂಪರ್ಕದಲ್ಲಿದ್ದೀರಾ? ಎಂಬ ಪ್ರಶ್ನೆಗೆ ರಕ್ಷಿತ್‌ ಶೆಟ್ಟಿ ಹೌದು ಎಂದಿದ್ದಾರೆ. ಹೌದು, ನಾನು ಈಗಲೂ ಅವರ ಜತೆ ಸಂಪರ್ಕದಲ್ಲಿರುವೆ. ಆಕೆಗೆ ಸಿನಿಮಾ ಜಗತ್ತಿನ ಕುರಿತು ದೊಡ್ಡ ಕನಸುಗಳಿವೆ. 

ಆಕೆ ಆಕೆಯ ಕನಸಿನತ್ತ ಪ್ರಯಾಣಿಸುತ್ತಿದ್ದಾರೆ. ಆಕೆಗೆ ತನ್ನ ಕನಸು ಈಡೇರಿಸಿಕೊಳ್ಳುವ ಇಚ್ಛಾಶಕ್ತಿಯಿದೆ. ಆಕೆಯ ಸಾಧನೆಗೆ ನಾವು ಬೆನ್ನುತಟ್ಟಬೇಕು ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ. ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ತನ್ನ ಸಿನಿ ಪ್ರಯಾಣ ಆರಂಭಿಸಿದ್ದಾರೆ. ಕಾಂತರ ನಟ ರಿಷಬ್‌ ಶೆಟ್ಟಿ ನಿರ್ದೇಶಿಸಿದ ಈ ಚಿತ್ರ ಸಖತ್‌ ಹಿಟ್‌ ಆಗಿತ್ತು. ಈ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ನಾಯಕರಾಗಿದ್ದರು. 

ಈ ಸಿನಿಮಾದ ಸಂದರ್ಭದಲ್ಲಿ ಇವರಿಬ್ಬರಿಗೂ ಲವ್‌ ಆಗಿತ್ತು. ಸಿನಿಮಾ ಬಿಡುಗಡೆಯಾದ ಬಳಿಕ ರಶ್ಮಿಕಾ ಮಂದಣ್ಣರ ಜತೆ ರಕ್ಷಿತ್‌ ಶೆಟ್ಟಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದರು. ಆದರೆ, ಕೆಲವು ತಿಂಗಳಲ್ಲಿಯೇ ಇವರಿಬ್ಬರ ಸಂಬಂಧ ಹಳಸಿತ್ತು. ಆದರೆ, ಮದುವೆ ಮುರಿದುಬೀಳಲು ಕಾರಣ ಏನೆಂದು ಬಹಿರಂಗಓವಾಗಿರಲಿಲ್ಲ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.