ಹುಟ್ಟುಹಬ್ಬದ ದಿನವೇ ರುಕ್ಮಿಣಿ ವಸಂತ್ ಜೊತೆ ಸಿಹಿಸುದ್ದಿ ಕೊಟ್ಟ ರಕ್ಷಿತ್ ಶೆಟ್ಟಿ; ಮಂಗಳೂರಿಗರಿಗೆ ಹಬ್ಬದೂಟ

 | 
Gu

ಸ್ಯಾಂಡಲ್​ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ನಿನ್ನೆಯಷ್ಟೇ 41ನೇ ಹುಟ್ಟಿದ ಹಬ್ಬವನ್ನು ಆಚರಿಸಿದ್ದಾರೆ. ಕರಾವಳಿಯ ನಟ ಸ್ಯಾಂಡಲ್​ವುಡ್​ನಲ್ಲಿ ಮಿಂಚುತ್ತಿದ್ದಾರೆ. ಸ್ಟಾರ್ ನಟ ಈಗ ಬರ್ತ್​ಡೇ ಆಚರಿಸುತ್ತಿದ್ದು, ಜೂನ್ 6ರಂದು ನಟ ಹುಟ್ಟಿದ ಹಬ್ಬ ಆಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಅಭಿಮಾನಿಗಳು ನಟನಿಗೆ ಬರ್ತ್​ಡೇಗೆ ವಿಶ್ ಮಾಡುತ್ತಿದ್ದಾರೆ. 

ಈ ಸಂದರ್ಭದಲ್ಲಿ ನಟ ರಕ್ಷಿತ್ ಶೆಟ್ಟಿ ಬರ್ತ್​ಡೇ ದಿನವಿಶೇಷವಾದ ಒಂದು ಅಪ್ಡೇಟ್ ಕೊಟ್ಟಿದ್ದಾರೆ. ಮದುವೆ ಆಗುತ್ತಾರೆ ಎನ್ನುವ ಜನರ ಕುತೂಹಲಕ್ಕೆ ಕೊಳ್ಳಿ ಇಟ್ಟಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಸಣ್ಣದೊಂದು ವಿಡಿಯೋ ಕ್ಲಿಪ್ ಶೇರ್ ಮಾಡಿದ್ದಾರೆ. ಇದರಲ್ಲಿ ಕೆಸರು ನೀರು ತುಂಬಿಕೊಂಡಿರುವ ದಾರಿ ಮಧ್ಯೆಯ ಸಣ್ಣ ಒಂದು ಭಾಗದಲ್ಲಿ ಜನರು ಅದನ್ನು ಮೆಟ್ಟಿಗಕೊಂಡೇ ಹೋಗುವುದನ್ನು ಕಾಣಬಹುದು.

ವಿಡಿಯೋ ಪೋಸ್ಟ್ ಮಾಡಿದ ನಟ ಬಹುನಿರೀಕ್ಷಿತ ವೆಬ್ ಸಿರೀಸ್ ಏಕಂ ಬಗ್ಗೆ ಒಂದು ಅಪ್ಡೇಟ್ ತರುತ್ತಿದ್ದೇವೆ. ಈ ಸ್ಥಳವನ್ನು ತುಂಬಾ ಹತ್ತಿರದಿಂದ ನೋಡಿ. ಮಚ್ ಲವ್ ಎಂದು ರಕ್ಷಿತ್ ಶೆಟ್ಟಿ ಈ ಪೋಸ್ಟ್​ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ ಬಹು ನಿರೀಕ್ಷಿತ ನಿರ್ದೇಶಕ ಹಾಗೂ ನಟ ರಕ್ಷಿತ್ ಶೆಟ್ಟಿ ಓಟಿಟಿ ಪ್ಲಾಟ್‌ಫಾರ್ಮ್‌ ಕಡೆ ಮುಖ ಮಾಡಿದ್ದಾರೆ. ತಮ್ಮ ಪರಮ್‌ ಸ್ಟುಡಿಯೋ ನಿರ್ಮಾಣದಲ್ಲಿ ಏಕಂ ಎಂದು ವೆಬ್‌ ಸೀರಿಸ್‌ ನಿರ್ದೇಶನ ಮಾಡುತ್ತಿದ್ದಾರಂತೆ.

ರಕ್ಷಿತ್ ಅವರ ಮೊಟ್ಟ ಮೊದಲ ವೆಬ್‌ ಸೀರಿಸ್‌ ಇದಾಗಿದ್ದು, ಒಟ್ಟು 8 ಎಪಿಸೋಡ್‌ ಇರಲಿದೆ ಎನ್ನಲಾಗಿದೆ. 777 ಚಾರ್ಲಿ ಸಿನಿಮಾ ಕೂಡಾ ಅವರನ್ನು ದೇಶಾದ್ಯಂತ ಸಿನಿ ಪ್ರೇಮಿಗಳು ಗುರುತಿಸುವಂತೆ ಮಾಡಿತು. ಅದರ ನಂತರ ಬಂದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳು ಕೂಡಾ ನಟನಿಗೆ ರಾಜ್ಯಕ್ಕಿಂತ ಹೊರಗೆ ಫೇಮ್ ತಂದು ಕೊಟ್ಟಿದೆ. ಈ ಮೂಲಕ ನಟ ಸದ್ಯ ಸೌತ್​ನಾದ್ಯಂತ ಪರಿಚಿತರಾಗಿಬಿಟ್ಟಿದ್ದಾರೆ.  (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.