ರಾಮ್ ಮಂದಿರದ ಬಗ್ಗೆ ಅಪಹಾಸ್ಯ, ಒಮ್ಮೆಲೇ ರೊ ಚ್ಚಿಗೆದ್ದ ರಂಗಣ್ಣ

 | 
ಪಕ

ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳು ಚಿತ್ರನಟ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಇದೀಗ ಅಯೋಧ್ಯೆ ರಾಮಮಂದಿರದ  ಕುರಿತಂತೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಡಿಎಂಕೆ ಯಾವುದೇ ನಂಬಿಕೆಯನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ. ಆದರೆ ಅಯೋಧ್ಯೆಯಲ್ಲಿ ಮಸೀದಿ ಕೆಡವಿ ರಾಮಮಂದಿರ ಕಟ್ಟುತ್ತಿರೋದನ್ನು ಒಪ್ಪಿ ಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.

 ಈ ಹಿಂದೆ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಾಶ ಮಾಡಬೇಕು ಎಂದಿದ್ದರು. ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಇಡೀ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.ಅಯೋಧ್ಯಾ ರಾಮಮಂದಿರದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಅಜ್ಜ, ಅಪ್ರತಿಮ ರಾಜಕಾರಣಿ, ತಮಿಳುನಾಡು ಮಾಜಿ ಸಿಎಂ ಎಂಕೆ ಕರುಣಾನಿಧಿ ಅವರು ಹಾಗೂ ನಮ್ಮ ಡಿಎಂಕೆ ಪಕ್ಷ ಯಾವುದೇ ನಿರ್ದಿಷ್ಟ ಧರ್ಮ ಅಥವಾ ನಂಬಿಕೆಗೆ ವಿರುದ್ಧವಾಗಿಲ್ಲ ಎಂದು ಹೇಳಿದ್ದಾರೆ.

1992ರ ಪ್ರಕರಣವನ್ನು ಉಲ್ಲೇಸಿಸಿದ ಉದಯನಿಧಿ ಸ್ಟಾಲಿನ್, ಅಯೋಧ್ಯೆಯಲ್ಲಿ ದೇವಸ್ಥಾನ ಬರುವುದರಿಂದ ನಮಗೆ ಸಮಸ್ಯೆ ಇಲ್ಲ. ಆದರೆ ಮಸೀದಿ ಕೆಡವಿದ ನಂತರ ಮಂದಿರ ನಿರ್ಮಾಣಕ್ಕೆ ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.ಸನಾತನ ಧರ್ಮ ಎನ್ನುವುದು ಡೆಂಗ್ಯೂ, ಮಲೇರಿಯಾ ರೋಗ ಇದ್ದಂತೆ. ಸನಾತನ ಧರ್ಮವನ್ನು ಸರ್ವನಾಶ ಮಾಡಬೇಕಾದ ಅಗತ್ಯವಿದೆ. ಸನಾತನ ಧರ್ಮವು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇಂತಹ ವಿಷಯವನ್ನು ವಿರೋಧಿಸಬಾರದು, ಬದಲಾಗಿ ಸಂಪೂರ್ಣ ನಾಶ ಮಾಡಬೇಕು ಎಂದು ಹೇಳಿದ್ದರು.

ಇದೀಗ ಸುವರ್ಣ ಮಾಧ್ಯಮದ ಹೆಡ್ ಆದ ಅಜಿತ್ ಹನುಮಕ್ಕನವರು ಹಾಗೂ ಪಬ್ಲಿಕ್ ಟಿವಿ ರಂಗಣ್ಣ ಅವರು ಇವರಿಗೆ ಸರಿಯಾಗಿ ಹೇಳಿದ್ದಾರೆ. ಮಾತಾಡಲು ಬರುತ್ತದೆ ಎಂದು ಮಾತಾಡುವುಲ್ಲ. ಒಮ್ಮೆ ಕುಳಿತುಕೊಂಡು ಹಿಂದೂಗಳ ಧಾರ್ಮಿಕ ಕ್ಷೇತ್ರದಲ್ಲಿ ಆದ ದಾಳಿಗಳ ಬಗ್ಗೆ ಓದಿ. ಪುರಾಣ ಕಥೆಗಳ ಕೇಳಿ ಆಮೇಲೆ ಮಾತಾಡಿ ಎಂದು ಮಾತಿನಲ್ಲೇ ಚಾಟಿ ಬೀಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.