ಬಾಲಕಿ ಮಾತಿಗೆ ಕಿಲಕಿಲ ನಕ್ಕ ರಂಗಣ್ಣ; 625 ಸಿಗಬೇಕಿತ್ತು ಎಂದ ಪುಟ್ಟಿ

 | 
Guu

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಬಾಗಲಕೋಟೆಯ ಅಂಕಿತಾ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಆದರೆ, 624 ಅಂಕ ಪಡೆದ 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಆದರೆ, ಈ ಪೈಕಿ 624 ಅಂಕ ಪಡೆದ ಬೆಂಗಳೂರಿನ ಮೇಧಾ ಶೆಟ್ಟಿ ನನಗೆ ಸಂಸ್ಕೃತ ವಿಷಯದಲ್ಲಿ ಒಂದು ಅಂಕ ಕಡಿಮೆಯಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತೇನೆ ಎಂದು ಹೇಳಿದ್ದಾಳೆ.

ಬೆಂಗಳೂರಿನ ಬನಶಂಕರಿಯಲ್ಲಿರುವ ಹೋಲಿ ಚೈಲ್ಡ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಮೇಧಾ ಶೆಟ್ಟಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 625ಕ್ಕೆ 624 ಅಂಕಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ಮತ್ತು ಮನೆಯವರು ವಿದ್ಯಾರ್ಥಿನಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ. ಜೊತೆಗೆ, ವಿದ್ಯಾರ್ಥಿನಿಗೆ ಶುಭಾಶಯ ಕೋರಿದ್ದಾರೆ. ಆದರೆ, ವಿದ್ಯಾರ್ಥಿನಿ ಮಾತ್ರ ಇದರಿಂದ ಸಂತಸಗೊಂಡಿಲ್ಲ.

 ತಾನು ರಾಜ್ಯಕ್ಕೆ ಟಾಪರ್ ಆಗಬೇಕಿತ್ತು. ನನಗೆ 624 ಅಂಕಗಳು ಬರುವ ಮೂಲಕ ಒಂದು ಅಂಕ ಕಡಿಮೆಯಾಗಿ ದ್ವಿತೀಯ ರ್ಯಾಂಕ್ ಪಡೆದುಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನಾನು ಪ್ರತಿನಿತ್ಯ ಏನೆಲ್ಲ ಪಾಠ ಮಾಡ್ತಿದ್ರು ಅದನ್ನು ಅದೇ ದಿನ ಓದುಕೊಳ್ಳುತ್ತಿದ್ದೆ. ದಿನಕ್ಕೆ ಇಷ್ಟೇ ಗಂಟೆ ಎಂದು ಮಿತಿ ಹಾಕಿಕೊಂಡು ಓದುತ್ತಿರಲಿಲ್ಲ, ಅಂದಿನ ಪಾಠಗಳನ್ನು ಅದೇ ದಿನ ಪೂರ್ತಿ ಓದಬೇಕು ಅಂತಾ ಓದುತ್ತಿದ್ದೆ. 

ನನ್ನ ಓದಿನ ಶ್ರಮದಿಂದಾಗ ಉತ್ತಮ ಅಂಕಗಳು ಬಂದಿವೆ. ಶಾಲೆ ಸಪೋರ್ಟ್ ಮತ್ತು ಪೋಷಕರ ಸಪೋರ್ಟ್ ನಿಂದ ರ್ಯಾಂಕ್ ಬಂದಿದೆ. ನಾನು ಮುಂದೆ ಮೆಡಿಕಲ್ ಮಾಡಬೇಕು ಅನ್ನೋ‌ ಆಸೆ ಇದೆ. ಆದರೆ, ನಾನು ನಿರೀಕ್ಷೆ ಮಾಡಿದಕ್ಕಿಂತ ಒಂದು ಮಾರ್ಕ್ಸ್ ಕಡಿಮೆ‌‌ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತಾಗಿ ಮಾತನಾಡಿರುವ ರಂಗಣ್ಣ ಹೋಗ್ಲಿ ಬಿಡಮ್ಮ ಎಂದು ಕಾಲೆಳೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.