ಟ್ರೋಫಿ ಮೇಲೆ ಕಾಲಿಟ್ಟಿದ್ದಕ್ಕೆ ಆಸ್ಟ್ರೇಲಿಯಾದ ಚಳಿಬಿಡಿಸಿದ ರಂಗಣ್ಣ, ನಿಮ್ಮ ಯೋಗ್ಯತೆ ಇಷ್ಟೇ

 | 
Hd

ನವೆಂಬರ್​ 19ರಂದು ಅಹ್ಮದಾಬಾದ್​​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ವಿಶ್ವದಾಖಲೆಯ 6ನೇ ಟ್ರೋಫಿಗೆ ಮುತ್ತಿಕ್ಕಿತು. ಒಂದೆಡೆ ಭಾರತೀಯರು ಸೋಲಿನ ದುಃಖದಲ್ಲಿದ್ದರೆ, ಚಾಂಪಿಯನ್ ಪಟ್ಟಕ್ಕೇರಿದ ಆಸ್ಟ್ರೇಲಿಯಾ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು.

ಆದರೆ ಈ ಮಧ್ಯೆ ಆಸ್ಟ್ರೇಲಿಯಾದ ಆಲ್​ರೌಂಡರ್ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು, ಆ ಪ್ರಶಸ್ತಿಗೆ ಅವಮಾನ ಮಾಡಿದ್ದಾರೆ ಎನ್ನಲಾದ ಫೋಟೋವೊಂದು ಸಖತ್ ವೈಲ್ ಆಗಿದೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗರು, ಆಸೀಸ್ ಕ್ರಿಕೆಟಿಗನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಪೋಸ್ಟ್ ಮ್ಯಾಚ್​ ಪ್ರೆಸೆಂಟೇಷನ್​ ಮುಕ್ತಾಯದ ನಂತರ ಟ್ರೋಫಿಯೊಂದಿಗೆ ಡ್ರೆಸ್ಸಿಂಗ್ ರೂಮ್​ಗೆ ಆಸೀಸ್​ ಆಟಗಾರರು ತೆರಳಿದರು. 

ಆದರೆ ಈ ವೇಳೆ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಫೋಟೋಗೆ ಪೋಸ್​ ಕೊಟ್ಟಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿದೆ. ಫೈನಲ್ ಗೆದ್ದ ಸಂಭ್ರಮದಲ್ಲಿ ಮಾರ್ಷ್​, ಡ್ರೆಸ್ಸಿಂಗ್ ರೂಮ್​ನಲ್ಲಿ ವಿಶ್ವಕಪ್ ಮೇಲೆ ಕಾಲಿಟ್ಟು ಕುಳಿತು ಥಮ್ಸ್ ಅಪ್ ಮಾಡಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಟ್ರೋಫಿ ಗೆಲ್ಲದ ನೋವಿನಲ್ಲಿರುವ ಭಾರತದ ಅಭಿಮಾನಿಗಳು ಆಸೀಸ್ ಆಟಗಾರನ ದರ್ಪವನ್ನು ಕಂಡು ತರಾಟೆ ತೆಗೆದುಕೊಂಡಿದ್ದಾರೆ. 

ನಿಮಗೆ ಟ್ರೋಫಿ ಎಂದರೆ ಕಾಲಿನ ಧೂಳಿಗೆ ಸಮವೇ ಇರಬಹುದು. ಆದರೆ, ನಾವು ಅದನ್ನು ಪೂಜಿಸುತ್ತೇವೆ ಎಂದು ಕಿಡಿಕಾರಿದ್ದಾರೆ. ಗೆದ್ದ ಖುಷಿಯಲ್ಲಿ ದರ್ಪ ತೋರಬಾರದು. ಆಡಿದ ಆಟಕ್ಕಾದರೂ ಗೌರವ ಸಲ್ಲಿಸಿ. ನೀವು ಇಷ್ಟಪಟ್ಟು, ಕಷ್ಟಪಟ್ಟು ಗೆದ್ದ ಟ್ರೋಫಿ ಮೇಲೆಯೇ ಕಾಲಿಟ್ಟಿರುವುದು ಸರಿಯಲ್ಲ. ವಿಶ್ವಕಪ್​ಗೆ ಹೇಗೆ ಗೌರವ ಕೊಡಬೇಕು ಎಂದು ಭಾರತೀಯ ಆಟಗಾರರನ್ನು ನೋಡಿ ಕಲಿಯಿರಿ ಎಂದು ನೆಟ್ಟಿಗರು ಪಾಠ ಮಾಡಿದ್ದಾರೆ. 

ಈ ಹಿಂದೆ ಧೋನಿ, ಸಚಿನ್ ಗೆದ್ದಾಗ ಟ್ರೋಫಿಗೆ ಮುತ್ತಿಕ್ಕಿ ಗೌರವ ಸಲ್ಲಿಸಿದ್ದರು ಎಂದು ಮಾರ್ಷ್​​ಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇನ್ನು ಅವರನ್ನು 10 ವರ್ಷ ಬ್ಯಾನ್ ಮಾಡಿ 10 ಕೋಟಿ ಫೈನ್ ಹಾಕಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ ಈ ಕುರಿತಾದ ಆಸೀಸ್ ತಂಡ ಯಾವುದೇ ಹೇಳಿಕೆ ನೀಡಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.