ಸಿಹಿಸುದ್ದಿ ಕೊಟ್ಟ ರಂಜನಿ ರಾಘವನ್; ಕಿರುತೆರೆ ನ ಟಿಗೆ ಕಂಕಣ ಭಾಗ್ಯ

 | 
H
ಕನ್ನಡತಿ ಧಾರಾವಾಹಿಯ ನಟಿ ರಂಜನಿ ರಾಘವನ್ ಮದುವೆಯಾಗುತ್ತಿದ್ದಾರಾ? ಸುಂದರವಾದ ಸೀರೆ ಉಟ್ಟುಕೊಂಡಿರೋ ಕನ್ನಡ ಟೀಚರ್ ಕೈಯಲ್ಲಿ ವೀಣೆ ಹಿಡಿದು ತುಂಬಾ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಸ್ ಈಗ ವೈರಲ್ ಆಗಿವೆ.
ಆಕಾಶ ನೀಲಿ ಬಣ್ಣದ ಅಂಚಿನ ಹಳದಿ ಸೀರೆ ಉಟ್ಟಿದ್ದ ರಂಜನಿ ರಾಘವನ್ ಕೆಂಪು ಬಣ್ಣದ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡಿದ್ದರು. ಅದಕ್ಕೆ ಆಕರ್ಷಕ ಆಭರಣಗಳನ್ನೂ ತುಂಬಾ ಸರಳವಾದ ಮೇಕಪ್ ಮಾಡಿಕೊಂಡಿದ್ದು ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ.ಕೆಲವು ಫೋಟೋಗಳನ್ನು ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡ ನಟಿ, ನಾನೇ ವೀಣೆ.. ನೀನೇ ತಂತಿ.. ಅವನೇ ವೈಣಿಕಾ.ಎಂದು ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ಮುತ್ತುಗಳ ನೆಕ್ಲೆಸ್, ಆಕರ್ಷಕವಾದ ಇಯರಿಂಗ್ಸ್, ಕೈಯಲ್ಲಿ ಸಿಂಗಲ್ ಬಳೆ ಧರಿಸಿದ್ದರು. ಕೆಂಬಣ್ಣದ ಪುಟ್ಟ ಬಿಂದಿನ ನಟಿಯ ಮುಖಕ್ಕೆ ಮತ್ತಷ್ಟು ಕಳೆ ಕೊಟ್ಟಿದ್ದು ಆಕರ್ಷಕ ಫೋಟೋಶೂಟ್​ನಲ್ಲಿ ಅಪ್ಪಟ ಕನ್ನಡತಿಯಾಗಿ ಕಾಣಿಸಿದ್ದಾರೆ. ಹಸಿರು ಪರಿಸರದ ಮಧ್ಯೆ ನಟಿ ವೀಣೆ ಹಿಡಿದು ತಲ್ಲೀನರಾಗಿದ್ದು ತನ್ಮಯತೆಯಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬಾ ಸಿಂಪಲ್ ಆಗಿ ಹೇರ್​ಸ್ಟೈಲ್ ಮಾಡಿಕೊಂಡಿದ್ದ ರಂಜನಿ ರಾಘವನ್ ಅವರ ನಗು ಕ್ಯೂಟ್ ಆಗಿತ್ತು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.
ನಟಿ ರಂಜನಿ ರಾಘವನ್ ಅವರು ಇನ್​​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರು ಹೊಸ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸಾಕಷ್ಟು ಗಮನ ಸೆಳೆಯುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.