ಮತ್ತೆ ಭಿಕ್ಷೆ ಬೇಡುತ್ತಿರುವ ರಾನು ಮಂಡಲ್; ಕೈಯಲ್ಲಿ ಕಾಸಿಲ್ಲ ಎಂದು ಕೂಗಾಡಿದ ಸಿಂಗರ್
Aug 30, 2024, 17:25 IST
|

ರಾನು ಮಂಡಲ್ ಧ್ವನಿಗೆ ಮನಸೋತ ಸಂಗೀತ ನಿರ್ದೇಶಕ, ಗಾಯಕ ಹಿಮೇಶ್ ರಶ್ಮಿಯಾ ಬಾಲಿವುಡ್‌ಗೆ ಕರೆ ತಂದಿದ್ದರು. ಹಿಮೇಶ್ ರಶ್ಮಿಯಾ ನೀಡಿದ ಮೊದಲ ಅವಕಾಶದಲ್ಲಿಯೇ ರಾನು ಸಖತ್ ಫೇಮಸ್ ಆದರು. ಹಿಮೇಶ್ ರಶ್ಮಿಯಾ ನೀಡಿದ ಮೂರು ಹಾಡುಗಳಲ್ಲಿ ಆಶೀಕಿ ಮೇರಿ ಹಾಡು ಟ್ರೆಂಡ್ ಸೃಷ್ಟಿ ಮಾಡಿತ್ತು. ಹಲವು ದಿನಗಳ ಕಾಲ ಜನರ ಮೊಬೈಲ್ ಕಾಲರ್ ಟ್ಯೂನ್ ಸಹ ಆಗಿತ್ತು.
ಬೆಳಗಾಗುವಷ್ಟರಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ರಾನು ಮಂಡನ್ ಮತ್ತೆ ತೆರೆಯ ಹಿಂದೆ ಸರಿದಿದ್ದಾರೆ. ಅವಕಾಶಗಳು ಸಿಗದ ಹಿನ್ನೆಲೆ ಮುಂಬೈನಲ್ಲಿದ್ದ ರಾನು, ಮತ್ತೆ ಕೋಲ್ಕತ್ತಾ ಸೇರಿಕೊಂಡಿದ್ದಾರೆ. 2019ರಲ್ಲಿ ಎಲ್ಲಿ ನೋಡಿದರೂ ರಾನು ಮಂಡಲ್ ಧ್ವನಿ ಕೇಳುತ್ತಿತ್ತು. ಕೆಲವು ತಿಂಗಳವರೆಗೆ ರಾನು ಮಂಡಲ್ ಏನೇ ಮಾಡಿದರೂ ಸುದ್ದಿಯಾಗುತ್ತಿತ್ತು. ಇಷ್ಟು ಮಾತ್ರವಲ್ಲದೇ ದೂರವಾಗಿ ಮಗಳು ಸಹ ರಾನು ಮಂಡಲ್‌ಗೆ ಹತ್ತಿರವಾಗಿದ್ದರು.
ಫೇಮಸ್ ಆಗುತ್ತಿದ್ದಂತೆ ತಾನು ಬಂದ ದಾರಿಯನ್ನು ಮರೆತಿದ್ದ ರಾನು ಮಂಡಲ್, ಸೆಲ್ಫಿ ಕೇಳಲು ಬಂದಿದ್ದ ಮಹಿಳಾ ಅಭಿಮಾನಿಯನ್ನು ಅವಮಾನಿಸಿದ್ದರು. ಮಾಲ್‌ನಲ್ಲಿ ಮಹಿಳಾ ಅಭಿಮಾನಿ ಭುಜ ಮುಟ್ಟಿ ಕರೆದಿದ್ದಕ್ಕೆ ರಾನು ಕೋಪಗೊಂಡಿದ್ದರು. ಈ ವಿಡಿಯೋ ವೈರಲ್ ಬಳಿಕ ರಾನು ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಫ್ಯಾಶನ್ ಶೋವೊಂದರಲ್ಲಿ ರಾನು ಮಂಡಲ್ ವಾಕ್ ಮಾಡಿದ್ದರು. ರಾನು ಮಂಡಲ್ ಅತಿಯಾದ ಮೇಕಪ್‌ನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,17 Jul 2025