ನನ್ನನ್ನು ಸರಿಯಾಗಿ ಉಪಯೋಗಿಸಿಕೊಂಡು ಇದೀಗ ಟ್ರ್ಯಾಪ್ ಮಾಡಿ ಸಿಕ್ಕಿಹಾಕಿಸಿದ್ದಾರೆ: ರನ್ಯಾ ರಾವ್

 | 
Js
ಸದ್ಯ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿರುವ ಹೆಸರು ಕನ್ನಡ ನಟಿ ರನ್ಯಾ ರಾವ್. ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದ ನಾಯಕಿ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಪೊಲೀಸರು ಬಂಧಿಸಿದ್ದಾರೆ. 
ಕಳೆದ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ 33 ವರ್ಷದ ನಟಿ ರನ್ಯಾ ರಾವ್ ಆಗಾಗ್ಗೆ ಅಂತರಾಷ್ಟ್ರೀಯ ಪ್ರಯಾಣ ಕೈಗೊಳ್ಳುತ್ತಿದ್ದರು. ವರ್ಷದಲ್ಲಿ ಸುಮಾರು 40ಬಾರಿ ದುಬೈಗೆ ಹಾರಿದ್ದ ಬಂಗಾರದ ಬೆಡಗಿಯ ಮೇಲೆ ಅನುಮಾನಗೊಂಡು ಹದ್ದಿನ ಕಣ್ಣಿಟ್ಟಿದ್ದ ಕಂದಾಯ ಗುಪ್ತಚರ ನಿರ್ದೇಶನಾಲಯ- ಡಿ‌ಆರ್‌ಐ ಮಾರ್ಚ್ 03, 2025ರಂದು ದುಬೈನಿಂದ ಎಮಿರೇಟ್ಸ್ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದ ನಟಿಯನ್ನು ಪರಿಶೀಲಿಸಿದ ವೇಳೆ ಆಕೆ ದೇಹದಲ್ಲಿ ಬರೋಬ್ಬರಿ 12 ಕೋಟಿ ರೂ. ಮೌಲ್ಯದ 14.8ಕೆಜಿ   ಚಿನ್ನವನ್ನು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ.
ಈ ಹಿನ್ನಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದು ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಪಡೆದಿದ್ದಾರೆ. ಕೇವಲ ಗೋಲ್ಡ್ ಸೀಜ್ ಮಾಡಿ ಸುಮ್ಮನಾಗದ ಡಿ‌ಆರ್‌ಐ ಅಧಿಕಾರಿಗಳು ನಟಿ ರನ್ಯಾ ಅವರ ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಷನ್ ಹೌಸ್ ನ ಫ್ಲ್ಯಾಟ್ ಮೇಲೆ ರೆಡ್ ಮಾಡಿದ್ದು 2.5ಕೋಟಿ ನಗದು ಹಾಗೂ ಕೆಜಿಗಟ್ಟಲೆ ಚಿನ್ನವನ್ನು ಸಹ ಮುಟ್ಟುಗೋಲು ಹಾಕಿಕೊಂಡಿದ್ದಾರೆ. 
ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್‌ ಮಾಡಿದ್ರು. ನಾನು ಅವರ ಟ್ರ್ಯಾಪ್‌ಗೆ ಬಿದ್ದು ಈ ರೀತಿ ಕೆಲಸ ಮಾಡಿದ್ದೇನೆ ಎಂದು ಅಧಿಕಾರಿಗಳ ಮುಂದೆ ಆರೋಪಿ, ನಟಿ ರನ್ಯಾ ರಾವ್‌ ಅಳಲು ತೋಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.