ರಾಪಿಡ್ ರಶ್ಮಿಗೆ ಈ ಮೊದಲೇ ಮತ್ತೊಂದು ಮದುವೆ ಆಗಿತ್ತು, ರೇಡಿಯೋ ಜಾಕಿಯ ಮತ್ತಷ್ಟು ಮಾಹಿತಿ ಕೇಳಿದರೆ ಶಾ ಕ್
Jun 13, 2025, 23:20 IST
|

ಡೇವಿಸ್ ಎಂಬುವರನ್ನ ವಿವಾಹ ಮಾಡಿಕೊಳ್ಳುವ ಮೊದಲು ರಾಪಿಡ್ ರಶ್ಮಿಗೆ ಅದಾಗಲೇ ಒಂದು ಮದುವೆ ಆಗಿತ್ತು. ಆದ್ರೆ, ಕಾರಣಾಂತರಗಳಿಂದ ಆ ವಿವಾಹ ಮುರಿದು ಬಿತ್ತು. ಮೊದಲನೇ ಪತಿಯಿಂದ ಡಿವೋರ್ಸ್ ಪಡೆದ ರಾಪಿಡ್ ರಶ್ಮಿ ಬಳಿಕ ಡೇವಿಸ್ ಕೈಹಿಡಿದರು.ಸ್ಪರ್ಧಿಗಳು ತಮ್ಮ ಜೀವನ ಚರಿತ್ರೆಯನ್ನು ತೆರೆದಿಡಲು ಬಿಗ್ ಬಾಸ್ ಒಂದು ವಿಶೇಷ ಚಟುವಟಿಕೆ ನೀಡಿದರು. ಅದೇ ನನ್ನ ಕಥೆ. ಇದರ ಅನುಸಾರ, ತಮ್ಮ ಜೀವನದ ಕಹಿ ನೆನಪೊಂದನ್ನು ರಾಪಿಡ್ ರಶ್ಮಿ ಬಿಚ್ಚಿಟ್ಟರು.
2007 ರಲ್ಲಿ ನನಗೆ ಮದುವೆ ಆಯ್ತು. ಆ ಮದುವೆ ಎರಡುವರೆ ವರ್ಷಗಳ ಕಾಲ ಇತ್ತು. ಕಾರಣಾಂತರಗಳಿಂದ ಆ ಮದುವೆ ವರ್ಕ್ ಆಗಲಿಲ್ಲ. ಮದುವೆಯಿಂದ ಹೊರ ನಡೆಯುವ ನಿರ್ಧಾರ ತೆಗೆದುಕೊಂಡಿದ್ದು ನಾನು. ಆ ಟೈಮ್ ನಲ್ಲಿ ತುಂಬಾ ಗೊಂದಲಗಳು ಇತ್ತು ರಾಪಿಡ್ ರಶ್ಮಿ.ನನ್ನ ತಾಯಿ ಕೂಡ ವಿಚ್ಛೇದನ ಪಡೆದಿರುವ ಮಹಿಳೆ. ನನ್ನ ಮಗಳಿಗೂ ಹೀಗೇ ಆಗ್ಹೋಯ್ತಲ್ಲಾ.. ತಾಯಿಯಂತೆ ಮಗಳು, ನೂಲಿನಂತೆ ಸೀರೆ ರೀತಿ ಆಯ್ತಲ್ಲಾ.. ಎಂಬ ಪ್ರೆಶರ್ ಇತ್ತು. ನೀನೇನಾದರೂ ವಿಚ್ಛೇದನ ಪಡೆದರೆ, ನನ್ನ ಪಾಲಿಗೆ ಸತ್ತು ಹೋಗಿದ್ದೀಯಾ ಅಂದುಕೋ ಅಂತ ಅಮ್ಮ ಹೇಳಿದರು ರಾಪಿಡ್ ರಶ್ಮಿ.
ವಿಚ್ಛೇದನಕ್ಕೆ ಅಪ್ಲೈ ಮಾಡಿದೆ. ಅಮ್ಮ ನನ್ನ ಬಳಿ ಮಾತನಾಡಲಿಲ್ಲ. ಕೊನೆಗೆ ನನ್ನ ತಾಯಿಯ ಗೆಳತಿ ಮಧ್ಯೆ ಬಂದು ಮಾತನಾಡುವ ಹಾಗೆ ಮಾಡಿದರು. ಅಷ್ಟೊತ್ತಿಗೆ ನಾನು ಆರ್.ಜೆ. ವಿಚಾರ ಆಚೆ ಹೋದರೆ, ಏನಾಗುತ್ತೋ ಏನೋ ಎಂಬ ಭಯ ಇತ್ತು ನನಗೆ.ಮುಂದಿನ ಹಂತ ಡೇವಿಸ್. ಆ ಟೈಮ್ ನಲ್ಲಿ ನಾನು ಸುಸ್ತಾಗಿದ್ದೆ. ನನ್ನ ಆಯಾಸದ ದಿನಗಳಲ್ಲಿ ನನ್ನ ಕೈಹಿಡಿದು ಆತ್ಮವಿಶ್ವಾಸ ತುಂಬಿದ್ದು ಡೇವಿಸ್.
2010-2013 ವರೆಗೂ ನಾನು-ಡೇವಿಸ್ ಪ್ರೀತಿ ಮಾಡಿದ್ವಿ. ಮದುವೆ ಆಗಲು ನಿರ್ಧಾರ ಮಾಡಿದ್ವಿ.ಡೇವಿಸ್ ಗೆ ಇದು ಮೊದಲ ಮದುವೆ. ಹೀಗಾಗಿ ನಮ್ಮ ಮದುವೆಗೆ ಅವರ ಮನೆಯಲ್ಲಿ ವಿರೋಧ ಇತ್ತು. ಆದ್ರೆ, ಯಾರಿಗೂ ತಲೆ ಕೆಡಿಸಿಕೊಳ್ಳದೇ ಡೇವಿಸ್ ನನ್ನ ಮದುವೆಯಾದರು. ಆರು ವರ್ಷಗಳಿಂದ ವೈವಾಹಿಕ ಜೀವನ ಚೆನ್ನಾಗಿದೆ. ಡೇವಿಸ್ ತುಂಬಾ ಚೆನ್ನಾಗಿ ನನ್ನ ಅರ್ಥ ಮಾಡಿಕೊಳ್ಳುತ್ತಾರೆ. ನನ್ನ ಹನ್ನೆರಡು ವರ್ಷಗಳ ರೇಡಿಯೋ ಜೀವನದಲ್ಲಿ ಇದು ಯಾರಿಗೂ ಗೊತ್ತಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023