ರಚಿತಾ ರಾಮ್ ಎದೆಯಲ್ಲಿ ಮಲಗಿದ ರವಿಚಂದ್ರನ್, ಈ ವಯಸ್ಸಿನಲ್ಲೂ ರವಿಮಾಮ ತುಂಟಾಟ ನಿಂತಿಲ್ಲ
Jul 9, 2025, 20:59 IST
|

ಆದರೆ ಇದೀಗ ಜೀ ಕನ್ನಡದ ಬ್ಯಾಚುಲರ್ಸ್ ಪಾರ್ಟಿ ರಿಯಾಲಿಟಿ ಷೋನಲ್ಲಿ, ತೀರ್ಪುಗಾರರಾಗಿರುವ ರವಿಚಂದ್ರನ್ ಅವರು ರಚಿತಾ ರಾಮ್ ಮದುವೆಯ ವಿಷಯ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದು ಏಕೆಂದರೆ, ಡಾಲಿ ಧನಂಜಯ್ ನಿರ್ಮಾಣದ, ನಾಗಭೂಷಣ, ಧನಂಜಯ್, ಮಲೈಕಾ ವಸುಪಾಲ್ ನಟನೆಯ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರೆಲ್ಲಾ ಚಿತ್ರದ ಪ್ರೊಮೋಷನ್ಗಾಗಿ ಈ ಷೋಗೆ ಬಂದಿದ್ದರು. ಈ ಸಮಯದಲ್ಲಿ ಈಚೆಗೆ ಮದ್ವೆಯಾದ ನಟ ಡಾಲಿ ಧನಂಜಯ್ ಬ್ಯಾಚುಲರ್ ಲೈಫಿನ ಬಗ್ಗೆ ಮಾತನಾಡುತ್ತಿದ್ದರು.
ಆ ಸಮಯದಲ್ಲಿ ಮದ್ವೆಗೂ ಮುನ್ನ, ಮದ್ವೆ ಆದ್ಮೇಲೆ ಹೇಗಿದೆ ಜೀವನ ಕೇಳಿದಾಗ ಅವರು, ಮದುವೆ ಮೊದಲು ನಾಗ ಸಿಕ್ಕರೆ ಅಲ್ಲೇ ಸೆಟಲ್, ನಿರಂಜನ್ ಸಿಕ್ಕರೆ ಅಲ್ಲೇ ಸೆಟಲ್. ಈಗ ಮನೆಗೆ ಹೋಗಬೇಕು ಎಂದು ತಮಾಷೆಯಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಡಾಲಿ ಅವರು, ರಚಿತಾ ರಾಮ್ ಇನ್ನೂ ಬ್ಯಾಚುಲರ್ ಆಗಿರೋದು ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದಾಗಿ ಒಗಟಾಗಿ ರವಿಚಂದ್ರನ್ ಅವರು ಇದೇ ವರ್ಷ ಅವರ ಮದುವೆಯಾಗುತ್ತದೆ ಎಂದುಬಿಟ್ಟರು. ಇದು ಹೇಳುತ್ತಿದ್ದಂತೆಯೇ ಯುವಕರ ಹಾರ್ಟ್ ಬ್ರೇಕ್ ಆಗಿ ಹೋಗಿದೆ. ರವಿಚಂದ್ರನ್ ಹೇಳಿರುವ ಹಿಂದಿನ ಅರ್ಥವೇನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರು ಎಲ್ಲರ ಗಮನ ಸೆಳೆಯುತ್ತಾ ಇದ್ದಾರೆ. ಇವರು ಆಗಾಗ ಪರಸ್ಪರ ಮಾತುಕತೆ ನಡೆಸಿಕೊಳ್ಳುತ್ತಾ ಇರುತ್ತಾರೆ. ರವಿಚಂದ್ರನ್ ಅವರು ಜೀವನದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಈಗ ರವಿಚಂದ್ರನ್ ಅವರು ರಚಿತಾ ರಾಮ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023