ಮನೆ ಮಾರಿ ಬೀದಿಗೆ ಬಂದಿದ್ದ ರವಿಚಂದ್ರನ್ ಮಕ್ಕಳ ಬಳಿ ಕೋಟಿ ಬೆಲೆಯ ಕಾರುಗಳ ಕಾರುಬಾರು

 | 
ು ಸತತ ದ೫ೂ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಐಷಾರಾಮಿ ಮತ್ತು ದುಬಾರಿ ಜೀವನವನ್ನು ನಡೆಸುತ್ತಾರೆ. ಹಣವನ್ನು ನೀರಿನಂತೆ ವ್ಯರ್ಥ ಮಾಡುತ್ತಾರೆ. ವರ್ಷಕ್ಕೆ ಕೋಟಿ ಕೋಟಿಗಟ್ಟಲೆ ಆದಾಯ ಪಡೆಯುವ ಸೆಲೆಬ್ರಿಟಿಗಳು ತಿಂಗಳಿಗೆ ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡುತ್ತಾರೆ. 

ನಾವು ಸಾಮಾನ್ಯ ಜನರೆಲ್ಲ ಸೆಲೆಬ್ರಿಟಿಗಳು ತುಂಬ ಐಷಾರಾಮಿ ಜೀವನ ನಡೆಸುತ್ತಾರೆ ಅಂತನೇ ಅಂದುಕೊಂಡಿದ್ದೇವೆ. ಆದರೆ ಎಲ್ಲ ಸೆಲೆಬ್ರಿಟಿಗಳ ಜೀವನವು ಒಂದೇ ರೀತಿ ಇರಲ್ಲ. ಸೆಲೆಬ್ರಿಟಿಗಳ ಆಗಿದ್ದರೂ ಕೂಡ ಸಾಮಾನ್ಯ ಜನರಂತೆ ಬದುಕುವ ಯುವ ನಟರು ಕೂಡಾ ನಮ್ಮಲ್ಲಿ ಇದ್ದಾರೆ ಎಂದರೆ ನೀವು ನಂಬಲೇಬೇಕು. 

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಿಮಗೆಲ್ಲಾ ಗೊತ್ತು. ರವಿಚಂದ್ರನ್ ಅವರಿಗೆ ಇಬ್ಬರು ಗಂಡು ಮಕ್ಕಳು ಮನೋಹರ್ ಮತ್ತು ವಿಕ್ರಮ್. ರವಿಚಂದ್ರನ್ ಅವರು ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಜನಪ್ರಿಯತೆ ಗಳಿಸಿರುವ ನಟ ಮತ್ತು ನಿರ್ದೇಶಕ ಮತ್ತು ನಿರ್ಮಾಪಕ. ತಂದೆ ಇಷ್ಟೊಂದು ಹೆಸರು ಮಾಡಿದ್ದರೂ ಕೂಡ ರವಿಚಂದ್ರನ್ ಅವರ ಮಕ್ಕಳು ದುಬಾರಿ ಜೀವನವನ್ನು ನಡೆಸುವುದಿಲ್ಲವಂತೆ. 

ಒಬ್ಬ ಸಾಮಾನ್ಯ ಮನುಷ್ಯ ತಿಂಗಳಿಗೆ ಎಷ್ಟು ಖರ್ಚು ಮಾಡುತ್ತಾನೆ ಅಷ್ಟೇ ಖರ್ಚು ರವಿಚಂದ್ರನ್ ಅವರ ಮಕ್ಕಳು ಕೂಡ ಮಾಡ್ತಾರೆ. ಹೌದು ಇವರ ಬಳಿ ಮಹೇಂದ್ರ ಕಂಪನಿಯ ಜೀಪ್, ಬಿಎಂಡಬ್ಲ್ಯೂ ಕಾರಿದ್ದರೂ ಸಹ ಸಾಮಾನ್ಯ ಕಾರುಗಳಲ್ಲಿಯೇ ಪ್ರತಿನಿತ್ಯ ಅಡ್ಡಾಡುತ್ತಾರೆ. ಈ ಸತ್ಯವನ್ನು ಸ್ವತಃ ರವಿಚಂದ್ರನ್ ಅವರ ಮಗ ವಿಕ್ರಂ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. 

ಒಂದು ತಿಂಗಳಿಗೆ ನಟ ವಿಕ್ರಂ ಅವರು ಖರ್ಚು ಮಾಡಿದ ಹಣವೆಷ್ಟು ಎಂದು ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ. ರವಿಚಂದ್ರನ್ ಅವರ ಮಕ್ಕಳು ತಿಂಗಳಿಗೆ ಖರ್ಚು ಮಾಡುವ ಹಣದ ಮೊತ್ತವನ್ನು ಕೇಳಿದರೆ ನಿಮಗೆ ಪಕ್ಕಾ ಆಶ್ಚರ್ಯ ಆಗುತ್ತೆ. ಯಾಕೆಂದರೆ ರವಿಚಂದ್ರನ್ ಅವರ ಮಕ್ಕಳು ತಿಂಗಳಿಗೆ ಕೇವಲ ಐದರಿಂದ ಹತ್ತು ಸಾವಿರ ರೂಪಾಯಿಗಳನ್ನು ಮಾತ್ರ ಖರ್ಚು ಮಾಡುತ್ತಾರಂತೆ. ಹೌದು ಸ್ನೇಹಿತರೆ ಇದು ನಂಬಲು ಸಾಧ್ಯವಾಗದಿದ್ದರೂ ನಿಜ.ಅತಿ ಅವಶ್ಯಕ ಎನಿಸಿದರೆ ಮಾತ್ರ ತಮ್ಮ ಬಳಿಯಿರುವ ಕೋಟಿ ಕೋಟಿ ಬೆಲೆ ಬಾಳುವ ಕಾರ್ ಗಳನ್ನು ಇವರು ಬಳಸುತ್ತಾರೆ ಎನ್ನಲಾಗ್ತಿದೆ.