ಪದೇ ಪದೇ ಮೇಘನಾ ರಾಜ್ ಬಳಿ ಅಪ್ಪ ಬೇಕು ಎನ್ನುತ್ತಿರುವ ರಾಯನ್, ಇದೇ ವರ್ಷ ಹೊಸ ನಿರ್ಧಾರಕ್ಕೆ ‌ಮೇಘನಾ ಪೂರ್ವ ತಯಾರಿ

 | 
Js
ನಟಿ ಮೇಘನಾ ರಾಜ್‌ ಸದ್ಯ ತಮ್ಮ ಮಗ ರಾಯನ್‌ ರಾಜ್ ಸರ್ಜಾ ಪಾಲನೆ ಜೊತೆ ಜೊತೆಗೆ ಮಾಲಿವುಡ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಮೇಘನಾ ರಾಜ್‌ ತಾಯಿ ಪ್ರಮೀಳಾ ಜೋಷಾಯ್‌ ತಮ್ಮ ಹುಟ್ಟುಹಬ್ಬವನ್ನು ಕನ್ನಡದ ತಾರೆಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಆಚರಿಸಿದರು. ಈ ಮಧ್ಯೆ ಹಲವು ಬಾರಿ ನಟಿ ಮೇಘನಾ ರಾಜ್‌ ಅವರ ಎರಡನೇ ಮದುವೆ ಬಗ್ಗೆ ಒಂದಿಲ್ಲೊಂದು ಸುದ್ದಿ ಬರುತ್ತಲೇ ಇದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮೇಘನಾ ಸರ್ಜಾ ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿದ್ದು ಸುಳ್ಳಲ್ಲ ಎಂದಿದ್ದಾರೆ.
ಮೇಘನಾ ರಾಜ್‌ ಅವರು ಎರಡನೇ ಮದುವೆ ಬಗ್ಗೆ ನಗುತ್ತಲೇ ರಿಯಾಕ್ಟ್ ಮಾಡಿದ್ದು, ಇಂತಹ ಸುದ್ದಿಗಳೆಲ್ಲಾ ನೋಡಿದಾಗ ಎಂಟರ್‌ಟೈನ್‌ ಆಗುತ್ತೆ. ಜನ ಹೀಗೆ ಮಾತನಾಡುತ್ತಾರೆ ಅನ್ನುವುದನ್ನು ಸ್ವೀಕರಿಸಬೇಕು. ನನ್ನ ವಿಚಾರದಲ್ಲಿ ಅಷ್ಟೇ ಅಲ್ಲ ವಿಜಯ ರಾಘವೇಂದ್ರ ಅವರ ಬಗ್ಗೆಯೂ ಹಾಗೆ ಮಾತನಾಡಿದ್ದಾರೆ. ಇದರಿಂದ ನನಗೆ ಹರ್ಟ್‌ ಆಗಲಿ ಅಂತ ಮಾತನಾಡುತ್ತಿದ್ದಾರೋ ಅಥವಾ ಖುಷಿ ಆಗಲಿ ಅಂತ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಈ ಬಗ್ಗೆ ತುಂಬಾ ಟ್ರೋಲ್ಸ್‌ ಕೂಡ ಮಾಡುತ್ತಾರೆ. ಪರವಾಗಿಲ್ಲ ಇದನ್ನೆಲ್ಲಾ ನೋಡಿ ನಾನು ಎಂಟರ್ಟೈನ್‌ಮೆಂಟ್‌ ತೆಗೆದುಕೊಳ್ಳುತ್ತೇನೆ ಅಷ್ಟೇ ಎಂದು ಗೋಲ್ಡ್‌ ಕ್ಲಾಸ್‌ ವಿತ್‌ ಮಯೂರ ಸಂದರ್ಶನದಲ್ಲಿ ಮೇಘನಾ ರಾಜ್‌ ಮಾತನಾಡಿದ್ದಾರೆ.
ಮುಂದುವರೆದು ರಾಯನ್‌ಗೆ ಯಾವತ್ತೂ ಅಪ್ಪ ಬೇಕು ಅಂತ ನಿಮಗೆ ಅನಿಸಿಲ್ವಾ ಎಂಬ ಪ್ರಶ್ನೆಗೆ, ರಾಯನ್‌ಗೆ ಅಪ್ಪ ಇದಾರೆ, ರಾಯನ್‌ಗೆ ಚಿರು ಸರ್ಜಾನೇ ಅಪ್ಪ. ಆದ್ರೆ ಎರಡನೇ ಮದುವೆ ಬಗ್ಗೆ ಯೋಚನೆ ನನ್ನಲ್ಲಿ ಬಂದಿಲ್ಲ ಅಂತ ಹೇಳಿದ್ದರೆ ಅದು ಸುಳ್ಳು. ಒಂದು ಹೆಣ್ಣಾಗಿ ನನ್ನ ಮಗನನ್ನು ನೋಡಿದಾಗ, ರಾಯನ್‌ ಪ್ರತೀ ದಿನವೂ ಅವರ ಅಪ್ಪನ ಬಗ್ಗೆ ಮಾತನಾಡುತ್ತಾನೆ. ಅಪ್ಪ ಚಿರು ಅಂತ ಅವನಿಗೆ ಗೊತ್ತು. ಅಪ್ಪನ ಹಾಡುಗಳನ್ನು ನೋಡುತ್ತಾನೆ. ಆದರೆ ಫಿಸಿಕಲ್‌ ಆಗಿ ಚಿರುನ, ಮಗ ರಾಯನ್‌ ನೋಡಿಲ್ಲ. ಆದ್ರೆ ಅಪ್ಪ ಇದಾರೆ ಅನ್ನೋದು ರಾಯನ್‌ಗೆ ಗೊತ್ತು. ಆದರೆ ರಾಯನ್‌ಗೆ ಫಿಸಿಕಲ್‌ ಆಗಿ ತಂದೆ ಫಿಗರ್‌ ಇದ್ದರೆ ಒಳ್ಳೆಯದು ಅಂತಾ ಕೆಲವೊಮ್ಮೆ ಅನಿಸುತ್ತೆ, ಅನಿಸಿದೆ ನಿಜಾ ಎಂದು ಎರಡನೇ ಮದುವೆ ಯೋಚನೆ ಬಗ್ಗೆ ಮೇಘನಾ ರಾಜ್‌ ಮುಕ್ತವಾಗಿ ಮಾತನಾಡಿದ್ದಾರೆ.
ಸಮಾಜದಲ್ಲಿ ಜನ ಏನಂತಾರೆ ಅನ್ನೋ ವಿಚಾರದ ಬಗ್ಗೆ, ನನಗೆ ನಿಜವಾಗಲೂ ಯೋಚನೆ ಇಲ್ಲ. ಕೆಲವೊಮ್ಮೆ ನನಗೆ ಏನಾಗುತ್ತೆ ಅಂತಂದರೆ, ನಾನೇ ಕೂತುಕೊಂಡು ನನ್ನ ಬಗ್ಗೆ ಇಮೇಜ್‌ ಕ್ರಿಯೇಟ್‌ ಮಾಡಿದ್ದರೆ, ಅದು ಬೇರೆ ವಿಚಾರ. ಯಾಕಂದರೆ, ನಾನು ನನಗೋಸ್ಕರ ಮಾಡುತ್ತಿದ್ದೀನಿ ಅನ್ನುವುದು ನನಗೆ ಗೊತ್ತಿರುತ್ತೆ. ಆದರೆ ನನ್ನ ಸಿನಿಮಾಗಳನ್ನು ನೋಡಿ ನನ್ನನ್ನು ಇಷ್ಟ ಪಡುವ ಅಭಿಮಾನಿಗಳರಿಬಹುದು, ಅಥವಾ ನನ್ನ ಸೋಶಿಯಲ್‌ ಮೀಡಿಯಾದಲ್ಲಿ ಫಾಲೋ ಮಾಡುವ ಕುಟುಂಬ ಇರಬಹುದು. ಇವರೆಲ್ಲಾ ಸೇರಿಕೊಂಡು ನನಗೆ ಒಂದು ಇಮೇಜ್‌ನ ಕ್ರಿಯೇಟ್‌ ಮಾಡುತ್ತಿದ್ದಾರೆ. ಇದು ನಾನು ಮಾಡುತ್ತಿಲ್ಲ. ಇದು ಅವರುಗಳು ಮಾಡುತ್ತಿರುವುದು. ಇದು ನನಗೆ ಒತ್ತಡ ಆಗುತ್ತಿದೆ ಎಂದು ಟ್ರೋಲ್‌ಗಳ ಬಗ್ಗೆ ಮೇಘನಾ ರಿಯಾಕ್ಟ್‌ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub