ನೆನಪಿರಲಿ ನ ಟಿ ವರ್ಷ ಇವಾಗ ಹೇಗಿದ್ದಾರೆ ಗೊ ತ್ತಾ;
Jul 31, 2024, 21:52 IST
|
ನೆನಪಿರಿಲಿ ಸಿನಿಮಾ ಯಾರಿಗೆ ತಾನೆ ನೆನಪಿಲ್ಲ ಹೇಳಿ. ಲವ್ಲಿ ಸ್ಟಾರ್ ಪ್ರೇಮ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗಿತ್ತು. ಈ ಸಿನಿಮಾ ಬಳಿಕ ಪ್ರೇಮ್ ನೆನಪಿರಲಿ ಪ್ರೇಮ್ ಆಗಿ ಖ್ಯಾತಿಗಳಿಸಿದರು. ಪ್ರೇಮ್ ಮಾತ್ರವಲ್ಲ, ಸಿನಿಮಾದ ನಾಯಕಿ ಕೂಡ ಅಷ್ಟೆ ಫೇಮಸ್ ಆದರು.
2005ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾಗೆ ಈಗ 15 ವರ್ಷಗಳಾಗಿದೆ. ಈ ಚಿತ್ರದಲ್ಲಿ ಪ್ರೇಮ್ ಗೆ ನಾಯಕಿಯಾಗಿ ವರ್ಷ ಕಾಣಿಸಿಕೊಂಡಿದ್ದರು. ಸಿನಿಮಾದ ದ್ವಿತಿಯಾರ್ಧದಲ್ಲಿ ವರ್ಷ ಮಿಂಚಿದ್ದರು. ಎರಡನೇ ಭಾಗದಲ್ಲಿ ಕಾಣಿಸಿಕೊಂಡರೂ ವರ್ಷ ಕನ್ನಡ ಪ್ರೇಕ್ಷಕರ ಮನಗೆದಿದ್ದರು. ನಟಿ ವರ್ಷ ಅಭಿನಯಿಸಿದ ಸಿನಿಮಾಗಳ ಸಂಖ್ಯೆ ತೀರ ಕಡಿಮೆಯಾದರು ವರ್ಷ ಹೆಸರು ಮಾತ್ರ ಚಿರಪರಿಚಿತ. ಸಿನಿಮಾ ಜೊತೆಗೆ ನಿರೂಪಕಿಯಾಗಿಯೂ ವರ್ಷ ಕಾಣಿಸಿಕೊಂಡಿದ್ದಾರೆ.
ಹೈಟ್, ಟ್ಯಾಲೆಂಟ್ ಮೂಲಕ ಸಿನಿಪ್ರೇಕ್ಷರ ಮೆಚ್ಚುಗೆ ಗಳಿಸಿದ್ದ ವರ್ಷ, ಖ್ಯಾತಿ ಗಳಿಸುತ್ತಿದ್ದಂತೆ ಸಿನಿಮಾರಂಗದಿಂದ ದೂರ ಸರಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ನವಗ್ರಹ' ಸಿನಿಮಾದಲ್ಲಿ ವರ್ಷ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವಕಾಶಗಳು ಇದ್ದರು ವರ್ಷ ಬಣ್ಣದ ಲೋಕದಿಂದ ದೂರ ಸರಿದ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ.
ಸಾಕಷ್ಟು ಮಂದಿ, ವರ್ಷ ಲುಕ್ ನೋಡಿ ಆರೋಗ್ಯದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ವರ್ಷ ಅವರು ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ಸದ್ಯ ಸುಧಾರಿಸಿಕೊಂಡಿರುವ ವರ್ಷ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ಇದೀಗ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸದ್ಯ ಶಾಲಿವುಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ವರ್ಷ, ಮುಂದಿನ ದಿನಗಳಲ್ಲಿ ದೊಡ್ಡ ಪರದೆ ಮೇಲೆ ಮಿಂಚುವ ಸಾಧ್ಯತೆ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.