ರೇಣುಕಾಸ್ವಾಮಿ ಪತ್ನಿ ಗೆ ಗಂಡು ಮಗು ಜನನ, ದಶ೯ನ್ ಪತ್ನಿ ವಿಜಯಲಕ್ಷ್ಮಿ ಶಾ ಕಿಂಗ್ ಹೇಳಿಕೆ

 | 
He
 ಅಂದುಕೊಂಡಂತೆ ಎಲ್ಲ ನಡೆದಿದ್ದರೆ ರೇಣುಕಾ ಸ್ವಾಮಿ ಇಂದು ತಂದೆಯಾಗಿರುತ್ತಿದ್ದ ಆದರೆ ಇಲ್ಲ ಸಲ್ಲದ ಮೆಸೇಜ್ ಮಾಡಿ ಜೀವವನ್ನೇ ಕಳೆದುಕೊಳ್ಳಬೇಕಾಯಿತು.ರೇಣುಕಸ್ವಾಮಿ  ಪತ್ನಿ ಗಂಡು  ಮಗುವಿಗೆ  ಜನ್ಮ  ನೀಡಿದ್ದಾರೆ.  ಬೆಳಗ್ಗೆ ಜಾವ 7ಗಂಟೆ 1 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ  ಸಹನಾ.   ಮಗನಿಗೆ ಗಂಡು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಸ್ವಾಮಿ ತಂದೆ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ.ನಗರದ ಕೀರ್ತಿ ಆಸ್ಪತ್ರೆಯಲ್ಲಿ ಸಹನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸಹನಾ ಕೆಲ ಮಾನಸಿಕವಾಗಿ ನೊಂದಿದ್ರು. ಹಾಗಾಗಿ ಮಗುವಿನ ತೂಕ ಕೂಡ ಕಡಿಮೆ ಇತ್ತು. ಸಹಜವಾಗಿ ಹೆರಿಗೆ ಆಗಿದೆ ಮೂರ್ನಾಲ್ಕು ದಿನ ಮಗುವಿನ ಆರೋಗ್ಯ  ನಿಗಾ ಇರಿಸಿ, ನಂತರ ಡಿಸ್ಚಾರ್ಜ್ ಮಾಡುತ್ತೇವೆ. ಸಹನಾ‌ ಮುಂಚೆಯಿಂದ ನಮ್ಮ ಆಸ್ಪತ್ರೆಯಲ್ಲೇ ಚೆಕ್‌ಅಪ್‌ ಮಾಡಿಸಿಕೊಳ್ಳುತ್ತಿದ್ದರು.  ಹಾಗಾಗಿ ಅವರಿಗೆ ಯಾವುದೇ ಚಾರ್ಜ ಇಲ್ಲದೇ ಉಚಿತವಾಗಿ ಹೆರಿಗೆ ಮಾಡಿಸಿದ್ದೇವೆ ಎಂದು ಕೀರ್ತಿ ಆಸ್ಪತ್ರೆಯ ವೈದ್ಯಾಧಿಕಾರಿ ಕೂಡ ಹೇಳಿಕೆ ನೀಡಿದರು.
ಚಿತ್ರದುರ್ಗದ ರೇಣುಕಾ ಸ್ವಾಮಿ ಅವರನ್ನ ನಟ ದರ್ಶನ್ ಹಾಗೂ ಗ್ಯಾಂಗ್ ಕೊಲೆ ಮಾಡಿದ್ದಾರೆ ಎಂದು ಆರೋಪ ಇದೆ. ಸದ್ಯ ಈ ಪ್ರಕರಣ ಕೋರ್ಟ್ ಅಂಗಳದಲ್ಲಿ ಇದ್ದು, ಬರೋಬ್ಬರಿ ನಾಲ್ಕು ತಿಂಗಳ ಕಾಲ ಜೈಲಿನಲ್ಲಿ ಪವಿತ್ರಾ ಹಾಗೂ ನಟ ದರ್ಶನ್‌ ಅವರು ವಿಲವಿಲ ಎನ್ನುತ್ತಿದ್ದಾರೆ. ಇತ್ತ ಮಗನನ್ನ ಕಳೆದುಕೊಂಡು ಕಣ್ಣೀರು ಹಾಕಿದ್ದ ರೇಣುಕಾಸ್ವಾಮಿ ತಂದೆ ತಾಯಿ ಮೊಮ್ಮಗನ ಆಗಮನದಿಂದ ಖುಷಿ ಹೆಚ್ಚಿಸುವಂತೆ ಮಾಡಿದೆ.
ನನ್ನ ಮಗ ಕೈ ಮುಗಿದು ಕೇಳಿಕೊಂಡಾಗ ಅವರು ಬಿಟ್ಟುಬಿಡಬೇಕಿತ್ತು ಎಂದು ತಂದೆ-ತಾಯಿ ಕಣ್ಣೀರು ಹಾಕಿದ್ದರು. ಅಲ್ಲದೆ, ದರ್ಶನ್​ಗೆ ಒಳ್ಳೆಯದಾಗಲ್ಲ ಎಂದು ರೇಣುಕಾಸ್ವಾಮಿ ಅವರ ತಂದೆ-ತಾಯಿ ಶಾಪ ಕೂಡ ಹಾಕಿದ್ದರು. ಈಗ ನೊಂದಿದ್ದ ಕುಟುಂಬಕ್ಕೆ ಮಗುವಿನ ಆಗಮನದಿಂದ ಖುಷಿ ಆಗುವಂಥ ಸುದ್ದಿ ಸಿಕ್ಕಿದೆ ಎಂದಿದ್ದಾರೆ.
ಇನ್ನು ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಒಳ್ಳೆಯದಾಗಲಿ ಎಂದಿದ್ದಾರೆ.ನಟ ದರ್ಶನ್ ಅವರು ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿ ವಿಲಿವಿಲ ಎನ್ನುವಂತಾಗಿದೆ. ದರ್ಶನ್‌ ಅವರ ಕುಟುಂಬ ದರ್ಶನ್‌ ಗಾಗಿ ಕಾನೂನು ಹೋರಾಟವನ್ನ ನಡೆಸುತ್ತಿದ್ದಾರೆ.ಇನ್ನು ಕೇಸ್‌ಗೆ ಸಂಬಂಧಪಟ್ಟಂತೆ ಬೇಲ್ ಚಿಂತೆಯಲ್ಲೇ ರಾತ್ರಿಯೆಲ್ಲಾ ನಿದ್ದೆ ಮಾಡದೆ ದರ್ಶನ್ ಒದ್ದಾಡಿದ್ದಾರೆ ಎನ್ನಲಾಗ್ತಿದೆ. 
ಸರಿಯಾಗಿ ಊಟ ಇಲ್ಲ, ನಿದ್ದೆ ಇಲ್ಲ, ಬೆನ್ನು ನೋವಿನಿಂದ ನರಳುತ್ತಿರುವ ದರ್ಶನ್ ಸೆರೆಮನೆ ವಾಸದಿಂದ ಮುಕ್ತಿ ಸಿಗುವ ದಿನಕ್ಕಾಗಿ ಕಾಯ್ತಿದ್ದಾರೆ. ಸಿಬ್ಬಂದಿ ಬಳಿ ಬೇಲ್ ಅರ್ಜಿ ವಜಾಗೊಂಡ ವಿಚಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬೇಲ್ ರಿಜೆಕ್ಟ್ ಆದ ಸುದ್ದಿ ಕೇಳಿ ಶಾಕ್ ಆದ ದರ್ಶನ್, ಸೆಲ್​ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರಂತೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.