ರಾಕಿಂಗ್ ಸ್ಟಾರ್ ಯಶ್ ಮಗನ ಅದ್ಧೂರಿ ಬತ್೯ಡೇ, ನಟ ದಶ೯ನ್ ಕೊಟ್ಟ ಗಿಫ್ಟ್ ಏನು ಗೊತ್ತಾ

 | 
ಪ

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ, ಪ್ಯಾನ್‌ ಇಂಡಿಯಾ ಮಟ್ಟದಲ್ಲೂ ಗುರುತಿಸಕೊಂಡ ನಟ ಯಶ್‌, ಇದೀಗ ಸಂಭ್ರಮದಲ್ಲಿದ್ದಾರೆ. ಅದಕ್ಕೆ ಕಾರಣ; ಪುತ್ರ ಯಥರ್ವ್.‌ ಯಥರ್ವ್‌ 4ನೇ ವರ್ಷದ ಬರ್ತ್‌ಡೇಯನ್ನು ಅದ್ದೂರಿಯಾಗಿಯೇ ಆಚರಿಸಿದ್ದಾರೆ ಯಶ್‌ ಮತ್ತು ರಾಧಿಕಾ ಪಂಡಿತ್.  

ಹೌದು ರಾಕಿಂಗ್ ಸ್ಟಾರ್ ಯಶ್ - ರಾಧಿಕಾ ಪಂಡಿತ್ ದಂಪತಿಯ ಪುತ್ರ ಯಥರ್ವ್‌ಗೆ ಈಗ ನಾಲ್ಕು ವರ್ಷ ತುಂಬಿದೆ. ಮಗನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನ ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ ಯಶ್ ಮತ್ತು ರಾಧಿಕಾ ಪಂಡಿತ್.

ಯಥರ್ವ್ ಬರ್ತ್‌ಡೇ ಪಾರ್ಟಿಯನ್ನ ಬಾಲ ಹನುಮಾನ್ ಥೀಮ್‌ನಲ್ಲಿ ಆಯೋಜಿಸಲಾಗಿತ್ತು. ಬರ್ತ್‌ಡೇ ಪಾರ್ಟಿಯಲ್ಲಿ ಮಕ್ಕಳ ಜೊತೆಗೆ ಯಶ್‌ ಮತ್ತು ರಾಧಿಕಾ ಪಂಡಿತ್ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಅಪ್ಪ-ಅಮ್ಮನ ಜೊತೆಗೆ ಕೇಕ್ ಮಾಡಿ ಯಥರ್ವ್ ಖುಷಿಪಟ್ಟಿದ್ದು ಕ್ಯಾಮರಾ ಕಂಗಳಲ್ಲಿ ಸೆರೆಯಾಗಿದೆ. 2016ರಲ್ಲಿ ರಾಧಿಕಾ ಪಂಡಿತ್ ಮತ್ತು ಯಶ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

2018ರಲ್ಲಿ ಮಗಳು ಆಯ್ರಾಳನ್ನ ದಂಪತಿ ಬರಮಾಡಿಕೊಂಡರು. 2019ರಲ್ಲಿ ಯಥರ್ವ್‌ಗೆ ರಾಧಿಕಾ ಪಂಡಿತ್ - ಯಶ್‌ ಪೋಷಕರಾದರು. ಇನ್ನು ಈ ಹಿಂದೆ ಅರ್ಯಾ ಳ ಹುಟ್ಟು ಹಬ್ಬಕ್ಕೆ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಆಗಮಿಸಿ ಬೆಲೆ ಬಾಳುವ ಉಡುಗೊರೆಯನ್ನು ನೀಡಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು. ಅದರಂತೆ ಈದೀಗ ಯಥರ್ವ ಹುಟ್ಟಿದ ಹಬ್ಬಕ್ಕೆ ಸಹ ಆಗಮಿಸಿ ಗಿಫ್ಟ್ ನೀಡಿ ಹರಿಸಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.