ಡ್ರೈವರ್ ಖಾತೆಗೆ 9 ಸಾವಿರ ಕೋಟಿ ಕ್ರೆಡಿಟ್, ಪ್ರಜ್ಞೆ ತಪ್ಪಿದ ಯುವಕ

 | 
Vgff

~ಯಾವುದೇ ರೋಚಕ ಸಿನಿಮಾ ಕಥೆಗಿಂತ ಭಿನ್ನವಾಗಿಲ್ಲ ಈ ಘಟನೆ. ಕ್ಯಾಬ್ ಚಾಲಕನ ಮೊಬೈಲ್​ಗೆ ನಿಮ್ಮ ಬ್ಯಾಂಕ್ ಖಾತೆಗೆ 9 ಸಾವಿರ ಕೋಟಿ ರೂ. ಜಮಾ ಆಗಿದೆ ಎಂಬ ಮೆಸೇಜ್ ಬರುತ್ತೆ. ಸೈಬರ್ ವಂಚಕರ ಕೃತ್ಯ ಇರಬಹುದು ಎಂದು ಚಾಲಕ ಸುಮ್ಮನಾಗುತ್ತಾನೆ. ಆದರೆ ಕುತೂಹಲ ತಡೆಯದೆ ಟೆಸ್ಟ್ ಮಾಡಲು ತನ್ನ ಬ್ಯಾಂಕ್ ಖಾತೆಯಿಂದ ಸ್ನೇಹಿತನಿಗೆ 21 ಸಾವಿರ ರೂ. ಟ್ರಾನ್ಸ್​ಫರ್ ಮಾಡುತ್ತಾನೆ. 

ಹಣ ವರ್ಗಾವಣೆಯಾಗುತ್ತದೆ. ತನ್ನ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಇರುವುದು ಖಾತ್ರಿಯಾಗುತ್ತದೆ. ಅಷ್ಟರಲ್ಲಿ ಬ್ಯಾಂಕ್ ಅಧಿಕಾರಿ ಈ ಚಾಲಕನಿಗೆ ಕರೆ ಮಾಡುತ್ತಾರೆ. ಆಕಸ್ಮಿಕವಾಗಿ ನಿಮ್ಮ ಖಾತೆಗೆ 9 ಸಾವಿರ ಕೋಟಿ ರೂ. ಜಮಾ ಆಗಿದೆ. ಈ ಹಣ ಡ್ರಾ ಮಾಡಬೇಡಿ. ಒಂದು ವೇಳೆ ಡ್ರಾ ಮಾಡಿದರೆ ಪೊಲೀಸರಿಗೆ ದೂರು ಕೊಡಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. ಕ್ಯಾಬ್ ಚಾಲಕ ವಕೀಲರನ್ನು ಸಂರ್ಪಸಿ ಅವರೊಂದಿಗೆ ಬ್ಯಾಂಕಿಗೆ ತೆರಳಿ ಮ್ಯಾನೇಜರ್ ಸಂಪರ್ಕ ಮಾಡುತ್ತಾರೆ.

ಮ್ಯಾನೇಜರ್ ಮತ್ತು ಕ್ಯಾಬ್ ಚಾಲಕನ ನಡುವೆ ನಡೆದ ಚರ್ಚೆಯಲ್ಲಿ, ಇಷ್ಟು ದೊಡ್ಡ ಮೊತ್ತ ನಿಮ್ಮ ಖಾತೆಗೆ ಆಕಸ್ಮಿಕವಾಗಿ ಜಮಾ ಆಗಿದೆ. ಈ ಹಣ ಡ್ರಾ ಮಾಡಬೇಡಿ ಎಂದು ಮನವರಿಕೆ ಮಾಡಬೇಕಿತ್ತು. ಆದರೆ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಕ್ಯಾಬ್ ಚಾಲಕ ವಾಗ್ದಾಳಿ ಮಾಡಿದ್ದಾರೆ. ಕಡೆಗೆ ಮ್ಯಾನೇಜರ್, ನಮ್ಮ ಅಧಿಕಾರಿಗಳು ಬೆದರಿಕೆ ಹಾಕಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಡಿ. 

ಈಗ ನೀವು ಡ್ರಾ ಮಾಡಿರುವ 21 ಸಾವಿರ ರೂಪಾಯಿಗಳನ್ನು ಹಿಂದಿರುಗಿ ಸುವುದೂ ಬೇಡ. ಕಾರು ಖರೀದಿಗೆ ನಾವೇ ನಿಮಗೆ ಸಾಲ ಕೊಡುತ್ತೇವೆ. ಈ ಪ್ರಕರಣ ಇಲ್ಲಿಗೆ ಮುಕ್ತಾಯ ಮಾಡಿ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾರೆ. ಅಂದ ಹಾಗೆ ಈ ಪ್ರಕರಣ ಚೆನ್ನೈನಿಂದ ವರದಿಯಾಗಿದೆ. ಕೋಡಂಬಾಕ್ಕಂನ ಕ್ಯಾಬ್ಚಾಲಕ ರಾಜಕುಮಾರ್ ಪಳನಿ ಸಮೀಪದ ನೈಕ್ಕರಪಟ್ಟಿ ಗ್ರಾಮದ ನಿವಾಸಿ. 

ಅವರು ಸೆ.9ರಂದು ಮನೆಯಲ್ಲಿ ಊಟ ಮಾಡಿ ಕುಳಿತುಕೊಂಡಿದ್ದಾಗ ನಿಮ್ಮ ಖಾತೆಗೆ 9 ಸಾವಿರ ಕೋಟಿ ರೂ. ಜಮಾ ಆಗಿದೆ ಎಂಬ ಮೆಸೇಜ್ ಬಂದಿತ್ತು. ನಂತರ ಏನಾಯಿತು ಎಂಬುದು ಈಗಾಗಲೇ ನಿಮಗೆ ತಿಳಿದಿದೆ. ಮುಂದೊಂದು ದಿನ ನಿಮ್ಮ ಖಾತೆಗೂ ಬರಬಹುದು ಹುಷಾರಾಗಿರಿ ಎನ್ನುತ್ತಿದ್ದಾರೆ ನೆಟ್ಟಿಗರು.