ರಾಮಚಾರಿಗೆ ಎಂಟ್ರಿ ಕೊಟ್ಟ ರುಕ್ಮಿಣಿ, ಈ ಹೊಸ ಮುಖ ನೋಡಿ ತಲೆ ತಿರುಗಿ ಬಿದ್ದ ಯುವಕರು
Sep 28, 2024, 15:26 IST
|
ಇನ್ನೇನು ರಾಮಾಚಾರಿ ಧಾರವಾಹಿ ಮುಗಿಯುತ್ತದೆ. ಬಿಗ್ಬಾಸ್ ಆರಂಭವಾಗುತ್ತದೆ ಎಂದುಕೊಂಡ ಜೋಡಿಗೆ ಸಿಹಿ ಸುದ್ದಿ ದೊರಕಿದೆ. ಹೌದು ರಾಮಾಚಾರಿ ಧಾರಾವಾಹಿಯಲ್ಲಿ ಹೊಸ ಎಂಟ್ರಿಯಾಗಿದ್ದು, ಕೃಷ್ಣನಿಗಾಗಿ ಕಾದಿರುವ ರುಕ್ಮಿಣಿ ಪಾತ್ರದಲ್ಲಿ ಮುದ್ದು ಮುಖದ ಬೆಡಗಿ ದೇವಿಕಾ ಭಟ್ ನಟಿಸುತ್ತಿದ್ದಾರೆ.
ರಾಮಾಚಾರಿ ಧಾರಾವಾಹಿಯಲ್ಲಿ ಸಖತ್ ದೊಡ್ಡದಾದ ಟ್ವಿಸ್ಟ್ ಸಿಕ್ಕಿರೋದು ನಿಜಾ. ಅದು ಒಂದು ಟ್ವಿಸ್ಟ್ ಅಲ್ಲ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ ನಿರ್ದೇಶಕರು. ನಾರಾಯಣಾಚಾರ್ಯರ ಎರಡನೇ ಸಂಸಾರ ಗುಟ್ಟು ರಟ್ಟಾಗಿದೆ. ಸತ್ಯಭಾಮರನ್ನು ಹುಡುಕೋದಕ್ಕೆ ರಾಮಾಚಾರಿ ಮತ್ತು ಚಾರು ಈಗಾಗಲೇ ಹೊರಟಾಗಿದೆ. ಇದರ ಮಧ್ಯೆ ಹೊಸ ಕ್ಯಾರೆಕ್ಟರ್ ಎಂಟ್ರಿಯಾಗಿದೆ.
ಹೌದು, ನೀವು ಈಗಾಗಲೇ ಸೀರಿಯಲ್ ನೋಡಿದ್ರೆ ಹೊಸ ಎಂಟ್ರಿ ಯಾರು ಅನ್ನೋದು ಗೊತ್ತಾಗಿರುತ್ತೆ. ರಾಮಾಚಾರಿಗೆ ಹೇಗೆ ಚಾರು ನಾಯಕಿಯೋ, ಹಾಗೆಯೇ ನಮ್ಮ ಕೃಷ್ಣನಿಗೂ ಒಬ್ಬ ನಾಯಕಿ ಬೇಡ್ವೋ ಹಾಗಾಗಿಯೇ ರುಕ್ಮಿಣಿ ಪಾತ್ರದ ಎಂಟ್ರಿಯಾಗಿದೆ. ಕೃಷ್ಣನಿಗಾಗಿ ಪ್ರತಿ ಕ್ಷಣವೂ ಕಾಯುತ್ತಿರುವ, ತನ್ನನ್ನು ಸಂಪೂರ್ಣವಾಗಿ ಕೃಷ್ಣನಿಗೆ ಮೀಸಲಿಟ್ಟೆ ಚೆಲುವೆ ರುಕ್ಮಿಣಿ.
ರುಕ್ಮಿಣಿ ಪ್ರವೇಶ ಕೃಷ್ಣನ ಜೀವನದಲ್ಲಿ ಹೇಗಾಯ್ತು ಅನ್ನೋದು ಈಗಾಗಲೇ ಗೊತ್ತಿರಬಹುದು ಅಲ್ವಾ? ರೌಡಿಯಾಗಿದ್ದ ಕಿಟ್ಟಿ ಆಲಿಯಾಸ್ ಕೃಷ್ಣ, ಅದೆಷ್ಟೋ ಜನರಿಂದ ಸುಲಿಗೆ ಮಾಡಿದ್ದ, ಅದನ್ನ ಬಡವರಿಗೆ ದಾನ ಮಾಡ್ತಿದ್ದ ಅನ್ನೋದು ನಿಜಾ. ರೌಡಿಯಾಗಿದ್ದಾಗ ಕೃಷ್ಣ ಮಾಡಿದ ಪಾಪ ಕೆಲಸಗಳಲ್ಲಿ ಒಂದು ರುಕ್ಮಿಣಿಯ ಅಪಹರಣ.
ಮೊದಲಿಗೆ ಕೃಷ್ಣನೆಂದ ಬರೀ ರೌಡಿಯಾಗಿದ್ದ ರುಕ್ಮಿಣಿಗೆ ನಂತರ ಅವನ ಮೇಲೆ ಪ್ರೀತಿಯಾಗಿದೆ. ಕೃಷ್ಣ ಹೆಚ್ಚು ಮಾತನಾಡದೆ ಇದ್ದರೂ, ಅವನಿಗಾಗಿ ಪ್ರತಿಕ್ಷಣ ಕಾಯುವ, ಪರಿತಪಿಸುವ ಮುದ್ದು ಹುಡುಗಿ ರುಕ್ಮಿಣಿ ಪಾತ್ರದಲ್ಲಿ ನಟಿಸುತ್ತಿರುವ ಸುಂದರಿಯ ಹೆಸರು ದೇವಿಕಾ ಭಟ್ .ಇವರೊಬ್ಬ ಡ್ಯಾನ್ಸರ್, ರಂಗಭೂಮಿ ಕಲಾವಿದೆ, ಮಾಡೆಲ್ ಅನ್ನೋದು ಗೊತ್ತಾಗುತ್ತೆ. ಇವರ ಇನ್’ಸ್ಟಾಗ್ರಾಂ ಪೇಜ್ ತುಂಬೆಲ್ಲಾ ಸಖತ್ ಮಾಡರ್ನ್ ಆಗಿ, ಟ್ರೆಡಿಶನಲ್ ಆಗಿ ಫೋಟೊ ಶೂಟ್ ಮಾಡಿಸಿರುವ ಫೋಟೊಗಳನ್ನ ಕಾಣಬಹುದು. ರಾಮಾಚಾರಿಯ ರುಕ್ಮಿಣಿಯಷ್ಟು ಸಿಂಪಲ್ ಹುಡುಗಿ ಅಲ್ವೇ ಅಲ್ಲ ದೇವಿಕಾ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.