ದುಃಖದ ಸುದ್ದಿ, ನಮ್ಮೆಲ್ಲರ ‌ನೆಚ್ಚಿನ ಗಾಯಕ ಇಹಲೋ ಕ;

 | 
ರಗ
ಒಮ್ಮೊಮ್ಮೆ ಸಾವು ಯಾರಿಗೆ ಯಾವ ರೂಪದಲ್ಲಿ ಬರುತ್ತದೆ ಅರಿವಾಗುವುದಿಲ್ಲ. ಹೌದು ಬಿಹಾರದ ನೈಟಿಂಗೇಲ್ ಶಾರದಾ ಸಿನ್ಹಾ ಅವರ ಛತ್ ಮೈಯಾ ಹಾಡುಗಳು ಬಹಳ ಪ್ರಸಿದ್ಧವಾಗಿವೆ. ಛತ್ ಹಾಡುಗಳ ಮೂಲಕ ಅವರು ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದರು. ಶಾರದಾ ಸಿನ್ಹಾ ಅವರು ಛತ್ ಹಬ್ಬದ ಅದೇ ದಿನ ನವೆಂಬರ್ 5 ರಂದು ನಿಧನರಾದರು. ಈ ದಿನ ನಹಯ್ ಖಾಯ್ ದಿನವಾಗಿತ್ತು, ಅದೇ ದಿನ ಶಾರದಾ ಸಿನ್ಹಾ ಕೊನೆಯುಸಿರೆಳೆದರು. 
ಬಹಳ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ, ಶಾರದಾ ಸಿನ್ಹಾ ನಿಧನದ ಮೊದಲು ಅವರು ಆಸ್ಪತ್ರೆಯಲ್ಲಿ ಛತ್ ಮೈಯ ಹಾಡನ್ನು ಹಾಡಿದರು. ಇದೀಗ ಅವರ ಆಸ್ಪತ್ರೆಯ ಕೊನೆಕ್ಷಣದ ವಿಡಿಯೋ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಇದೀಗ ಕಣ್ಣೀರಿಡುತ್ತಿದ್ದಾರೆ. 
ಶಾರದಾ ಸಿನ್ಹಾ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಈ ವಿಡಿಯೋ ತಮ್ಮ ಕೊನೆಯ ಕ್ಷಣದ್ದಾಗಿದ್ದು, ಈ ವಿಡಿಯೋ ಆಸ್ಪತ್ರೆಯಿಂದ ಬಂದಿದೆ. ಮುಖಕ್ಕೆ ಆಮ್ಲಾಜನಕದ ಮಾಸ್ಕ್‌ ಹಾಕಿಕೊಂಡಿರುವ, ಅವರು ಗಂಭೀರ ಸ್ಥಿತಿಯಲ್ಲಿ ಶಾರದಾ ಸಿನ್ಹಾ ನಿಧಾನವಾಗಿ ಛತ್ ಹಾಡನ್ನು ಗುನುಗುತ್ತಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಯಾರೋ ರೆಕಾರ್ಡ್‌ ಮಾಡಿದ್ದು, ಗಾಯಕಿ ತೀರಿಕೊಂಡ ನಂತರ ಈ ವಿಡಿಯೋ ವೈರಲ್‌ ಆಗುತ್ತಿದೆ. 
ಪತಿಯ ಸಾವಿನಿಂದ ಶಾರದಾ ಸಿನ್ಹಾ ತೀವ್ರ ದುಃಖಿತರಾಗಿದ್ದರು. ಅಂದಿನಿಂದ ಅವರು ಅನಾರೋಗ್ಯದಿಂದ ಬಳಲಲು ಆರಂಭಿಸಿದ್ದರು, ಅವರ ಆರೋಗ್ಯ ಹದಗೆಡಲಾರಂಭಿಸಿತು. ಸರಿಯಾಗಿ ಒಂದು ತಿಂಗಳ ನಂತರ ಶಾರದಾ ಸಿನ್ಹಾ ಕೂಡ ತೀರಿಕೊಂಡರು. 
ಶಾರದಾ ಸಿನ್ಹಾ ಅವರಿಗೆ 72 ವರ್ಷ ವಯಸ್ಸಾಗಿತ್ತು ಮತ್ತು ಉತ್ತರ ಪ್ರದೇಶದಿಂದ ಬಿಹಾರದ ಜನರು ಅವರ ಧ್ವನಿಯ ಬಗ್ಗೆ ಹುಚ್ಚರಾಗಿದ್ದರು. ಶಾರದಾ ಸಿನ್ಹಾ ಅವರಿಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.