ಸಾಹಸಸಿಂಹ ವಿಷ್ಣುವರ್ಧನ್ ಅವರ ಮಡದಿ ಕಮ್ ನಟಿ ಭಾರತಿ ಅವರ ಆರೋಗ್ಯ ಪರಿಸ್ಥಿತಿ ಹೇಗಿದೆ, ಕಣ್ಣೀರಿಟ್ಟ ಮಗಳು

 | 
Bdf

ಚಂದನವನದ ಖ್ಯಾತ ನಟ ದಿವಂಗತ ವಿಷ್ಣುವರ್ಧನ್ ಅವರ ಪತ್ನಿ ಹಾಗೂ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ವಯೋ ಸಹಜ ಮಂಡಿ ನೋವಿನಿಂದ ಭಾರತಿ ವಿಷ್ಣುವರ್ಧನ್‌ ಬಳಲುತ್ತಿದ್ದಾರೆ. ಮಂಡಿ ನೋವಿನಿಂದ ಹಾಸಿಗೆ ಹಿಡಿದಿರುವ ಎಂದು ತಿಳಿದುಬಂದಿದೆ. 

ಕೆಲ ದಿನಗಳಿಂದ ಭಾರತೀ ವಿಷ್ಣುವರ್ಧನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2 ತಿಂಗಳಿಂದ ಅವರು ಎಲ್ಲಿಗೂ ಹೋಗಿಲ್ಲ. ಮನೆಯಲ್ಲಿಯೇ ಬೆಡ್ ರೆಸ್ಟ್ ತೆಗೆದುಕೊಳ್ತಿದ್ದಾರೆ. ಮಂಡಿನೋವಿನಿಂದ ಭಾರತಿ ಅಮ್ಮ ಹಾಸಿಗೆ ಹಿಡಿದಿದ್ದಾರೆ ಎಂದು ಅವರ ಅಳಿಯ ಅನಿರುದ್ಧ ಮಾಹಿತಿ ನೀಡಿದ್ದಾರೆ. ಸರಿಯಾಗಿ ಊಟ ಮಾಡಲು ಸಹ ಆಗುತ್ತಿಲ್ಲ. ಕೆಲ ದಿನಗಳಿಂದ ಭಾರತಿ ವಿಷ್ಣುವರ್ಧನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

ಭಾರತಿ ವಿಷ್ಣುವರ್ಧನ್​ ಅವರು ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಐದೂ ಭಾಷೆಗಳಲ್ಲಿ ನಟಿಸಿದ್ದಾರೆ. ತಮ್ಮ 50 ವರ್ಷಗಳ ಸಿನಿ  ಕೆರಿಯರ್​ನಲ್ಲಿ 150 ಕ್ಕೂ ಹೆಚ್ಚಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ನಟಿ ಭಾರತಿ ವಿಷ್ಣುವರ್ಧನ್ ಬಳಲುತ್ತಿದ್ದಾರೆ. ಎಲ್ಲರ ಹಾರೈಕೆಯಿಂದ ಬೇಗ ಗುಣ ಮುಖರಾಗ್ತಾರೆ ಎನ್ನುವ ನಂಬಿಕೆ ನಮಗಿದೆ ಅಮ್ಮ ತಮ್ಮ 50 ವರ್ಷಗಳ ಸಿನಿ  ಕೆರಿಯರ್​ನಲ್ಲಿ  150 ಕ್ಕೂ ಹೆಚ್ಚಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಕನ್ನಡದಲ್ಲಿ 100 ಚಿತ್ರಗಳಲ್ಲಿ ನಟಿಯಾಗಿ ಮಿಂಚಿದ್ದಾರೆ. ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳ ಆಶೀರ್ವಾದವಿದೆ ಎಂದು ಭಾರತೀ ವಿಷ್ಣುವರ್ಧನ್ ಅವರ  ಮಗಳು ಕೀರ್ತಿ ಅನಿರುದ್ಧ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.