// custom css

ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಹಿಂದೆ ಬಿದ್ದ ಸಾಯಿ ಪಲ್ಲವಿ, ದೇಶ ವಿದೇಶ ಸುತ್ತುತ್ತಿರುವ ಜೋಡಿ ಹಕ್ಕಿಗಳು

 | 
ಹಗಗ

ನ್ಯಾಚುಲರ್ ಬ್ಯೂಟಿ, ಲೇಡಿ ಪವರ್ ಸ್ಟಾರ್, ನಟಿ ಸಾಯಿ ಪಲ್ಲವಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗಾರ್ಗಿ ಚಿತ್ರದ ನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಸಾಯಿ ಪಲ್ಲವಿ, ಇದೀಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಡ್ಯಾನ್ಸ್ ಕ್ವೀನ್ ಸಾಯಿ ಪಲ್ಲವಿ ತೆಲುಗಿನಲ್ಲಿ ನಾಗ ಚೈತನ್ಯ ಜೊತೆ ತಾಂಡೇಲ್ ಮತ್ತು ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆ ಅಮರನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಜೊತೆಗೆ ಬಾಲಿವುಡ್‌ಗೂ ಎಂಟ್ರಿ ಕೊಡಲಿದ್ದಾರೆ. ಸ್ಟಾರ್ ಹೀರೋ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ ಚಿತ್ರದ ಮೂಲಕ ಪಲ್ಲವಿ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಜುನೈದ್ ಮತ್ತು ಸಾಯಿ ಪಲ್ಲವಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಚಿತ್ರೀಕರಣಕ್ಕೆ ಜಪಾನ್​ಗೆ ತೆರಳಿತ್ತು. ಇತ್ತೀಚಿಗೆ ಜಪಾನ್ ಶೆಡ್ಯೂಲ್ ಮುಗಿದಿದೆ. 

ಜಪಾನ್‌ನಲ್ಲಿ ಶೂಟಿಂಗ್‌ ಮುಗಿದ ಹಿನ್ನೆಲೆಯಲ್ಲಿ ಚಿತ್ರತಂಡ ಪಬ್‌ನಲ್ಲಿ ಪಾರ್ಟಿ ಮಾಡಿತ್ತು. ಈ ಸಂದರ್ಭದಲ್ಲಿ ನಾಯಕಿ ಸಾಯಿ ಪಲ್ಲವಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಮ್ಯೂಸಿಕ್​ ಶುರುವಾಗ್ತಿದ್ದಂತೆ ಸಾಯಿ ಪಲ್ಲವಿ ಡ್ಯಾನ್ಸ್ ಮಾಡಲು ಶುರು ಮಾಡಿದ್ರು. ಚಿತ್ರತಂಡದ ಸದಸ್ಯರು ಸಾಯಿ ಪಲ್ಲವಿಯನ್ನು ಹುರಿದುಂಬಿಸುತ್ತಿದ್ರು. ಸಾಯಿ ಪಲ್ಲವಿ ಕೂಡ ಖುಷಿಯಿಂದ ನಗುತ್ತಾ.. ಕೂಗುತ್ತಾ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ಅಂದ್ರೆ ಸಾಯಿ ಪಲ್ಲವಿ ಸದಾ ಮುಂದಿರುತ್ತಾರೆ. ಸಾಯಿ ಪಲ್ಲವಿಗೆ ಡ್ಯಾನ್ಸ್​ ಮೇಲೂ ಅಷ್ಟೇ ಪ್ರೀತಿಯಿದೆ.

ಸಾಯಿ ಪಲ್ಲವಿ ಡ್ಯಾನ್ಸ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಲ್ಲವಿ ಡ್ಯಾನ್ಸ್ ನೋಡಿದ ನೆಟ್ಟಿಗರು, ಸೂಪರ್ ಎನರ್ಜಿ ಎಂದು  ಕಮೆಂಟ್ ಮಾಡುತ್ತಿದ್ದಾರೆ. ಗ್ರೇಸ್ ಮತ್ತು ಜೋಶ್ ನಲ್ಲಿ ಮುಳುಗಿದ್ದಾರೆ ಎಂದು ಹೇಳ್ತಿದ್ದಾರೆ.ಜುನೈದ್- ಸಾಯಿ ಪಲ್ಲವಿ ಚಿತ್ರದ ಚಿತ್ರೀಕರಣ ಫೆಬ್ರವರಿಯಿಂದ ಜಪಾನ್‌ನಲ್ಲಿ ನಡೆದಿದೆ. ಸಪ್ಪೊರೊ ಸ್ನೋ ಫೆಸ್ಟಿವಲ್‌ನಲ್ಲಿಯೂ ಚಿತ್ರೀಕರಣ ನಡೆಸಲಾಯಿತು. 

ಶೂಟಿಂಗ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜಪಾನ್​ ನಲ್ಲಿ ಚಿತ್ರತಂಡ ದಿನಕ್ಕೆ 12 ಗಂಟೆಗಳ ಕಾಲ ಶೂಟಿಂಗ್ ಮಾಡುತ್ತಿತ್ತು. ಈ ಚಿತ್ರಕ್ಕೆ ಏಕ್ ದಿನ್ ಎಂಬ ಟೈಟಲ್ ಫೈನಲ್ ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.