ಸಲ್ಮಾನ್ ಖಾನ್‌ಗೆ ವಿಚಿತ್ರ ಖಾಯಿಲೆ, ಕುಬೇರ ಸಿನಿಮಾದ‌ ಬಳಿಕ ಬಹಿರಂಗ ಪಡಿಸಿದ ಸುಲ್ತಾನ

 | 
Ns
ನಟ ಸಲ್ಮಾನ್ ಖಾನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.ಅವರು ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಅವರಿಗೆ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಸಾಕಷ್ಟು ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅವರ ಬಳಿ ಆರೋಗ್ಯ ಹಾಗೂ ಹಣ ಎರಡೂ ಇದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಅವರ ಬಳಿ ಸಾಕಷ್ಟು ಆಸ್ತಿ ಇರೋದೇನೋ ಸತ್ಯ. ಆದರೆ, ಆರೋಗ್ಯ ಕೈ ಕೊಟ್ಟಿದೆ. ಸಲ್ಮಾನ್ ಖಾನ್ ಅವರಿಗೆ ಮೆದುಳು ಸಂಬಂಧಿ ಕಾಯಿಲೆ ಇದ್ದು, ಇದರಿಂದ ಪಾರ್ಶವಾಯು ಉಂಟಾಗುವ ಭಯವಿದೆ.
ಸಲ್ಮಾನ್ ಖಾನ್ ಅವರು ನೆಟ್​ಫ್ಲಿಕ್ಸ್​​ನ ದಿ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದಾರೆ. ಈ ವೇಳೆ ಅವರು ತಮ್ಮ ಜೀವನದ ಬಗ್ಗೆ ತಮಗಿರುವ ಕಾಯಿಲೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಈ ವಿಚಾರ ಹೇಳುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಅವರಿಗೆ ಆರೋಗ್ಯ ಸಿಗಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.
ಸಲ್ಮಾನ್ ಖಾನ್​ಗೆ ವಿವಾಹದ ಬಗ್ಗೆ ಕೇಳಲಾಯಿತು. ಈ ವೇಳೆ ಅವರು ತಮಗಿರುವ ಸಮಸ್ಯೆ ಬಗ್ಗೆ ಹೇಳಿದರು. ‘ನನಗೆ ವಿವಿಧ ರೋಗಗಳು ಇವೆ. ಇದರ ಜೊತೆಗೆ ನಾನು ನಟನೆ ಮಾಡುವಾಗ ಫ್ರ್ಯಾಕ್ಚರ್ ಆಗುತ್ತದೆ. ನರಶೂಲೆ, ಮೆದುಳಿನಲ್ಲಿ ರಕ್ತನಾಳದ ಉರಿಯೂತ, ಎವಿಎಂ ಸಮಸ್ಯೆ ಇದ್ದರೂ ನಾನು ಈಗಲೂ ಕೆಲಸ ಮಾಡುತ್ತಿದ್ದೇನೆ. ಈ ಮಧ್ಯೆ ಅವರ ಪತ್ನಿ ಮೂಡ್ ಹಾಳಾಯಿತು ಎಂದರೆ ವಿಚ್ಛೇದನ ಕೊಟ್ಟು ಅರ್ಧ ಆಸ್ತಿಯನ್ನು ತೆಗೆದುಕೊಂಡು ಹೋಗಿಬಿಡಬಹುದು. 
ನಾನು ಯುವಕನಾಗಿದ್ದರೆ ಹೆಚ್ಚು ಸಮಸ್ಯೆ ಆಗುತ್ತಿರಲಿಲ್ಲ. ಎಲ್ಲವನ್ನೂ ಮತ್ತೆ ಗಳಿಸಬಹುದಿತ್ತು. ಆದರೆ, ಈ ವಯಸ್ಸಲ್ಲಿ ಮತ್ತೆ ಮೊದಲಿನಿಂದ ಆರಂಭಿಸಬೇಕು ಎಂದರೆ ಅದು ಅಸಾಧ್ಯ’ ಎಂದು ಅವರು ಹೇಳಿದ್ದಾರೆ.ದುರ್ಬಲಗೊಂಡ ರಕ್ತನಾಳದ ಉಬ್ಬುವಿಕೆಯಿಂದ ಮೆದುಳಿನ ರಕ್ತನಾಳದ ಉರಿಯೂತ ಕಾಣಿಸಿಕೊಳ್ಳುತ್ತದೆ. ನರ ಛಿದ್ರಗೊಂಡರೆ ಜೀವಕ್ಕೆ ಅಪಾಯ ಉಂಟಾಗಬಹುದು. ಪಾರ್ಶ್ವವಾಯುವಿಗೆ ಕಾರಣವಾಗಬಹುದು. 
ಇನ್ನು ಸಲ್ಲು, ಅಪಧಮನಿಯ ರಕ್ತನಾಳದ ವಿರೂಪ ಕೂಡ ಇದೆ ಎಂದಿದ್ದಾರೆ. ಇದು ಅಪರೂಪದ ಕಾಯಿಲೆ ಆಗಿದೆ. ಈ ಸಮಸ್ಯೆ ರಕ್ತದ ಹರಿವಿಗೆ ಅಡ್ಡಿಯಾಗುತ್ತದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಗಂಭೀರ ನರದ ಸಮಸ್ಯೆಗಳಿಗೆ ಕಾರಣವಾಗಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub