ಸಂಗೀತಾ ಹಾಗೂ ಪ್ರತಾಪ್ ಜಗಳ, ಸೋಫಾದಲ್ಲಿ ಮಕ್ಕಳಂತೆ ಕುಳಿತು ನೋಡಿದ ನಮ್ರತಾ
ಬಿಗ್ಬಾಸ್ ಮನೆಯಲ್ಲಿ ಫಿನಾಲೆ ಸಮೀಪಿಸುತ್ತಿದ್ದಂತೆ ಎಲ್ಲರ ಆಟ ತೀವ್ರವಾಗುತ್ತಿದ್ದು, ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಲೂ ಎಲ್ಲಾ ಸ್ಪರ್ಧಿಗಳು ಪ್ರಯತ್ನಿಸುತ್ತಿದ್ದಾರೆ. ಈ ವಾರ ಬಿಗ್ಬಾಸ್ ಮೊದಲಿಗೆ ಟಾಸ್ಕ್ ಬಗ್ಗೆ ಮಾಹಿತಿ ನೀಡುತ್ತಾರೆ. ಆ ನಂತರ ಟಾಸ್ಕ್ ಆಡುವ ಸದಸ್ಯರನ್ನು ಆಯ್ಕೆ ಮಾಡಬೇಕು. ಆ ಬಳಿಕವಷ್ಟೇ ಆಟ ಏನು ಅನ್ನೋದು ರಿವೀಲ್ ಆಗುತ್ತದೆ.
ಸಂಗೀತಾ ಮತ್ತು ನಮ್ರತಾಗೆ ಆಟಕ್ಕೆ ಸದಸ್ಯರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿರುತ್ತದೆ.ಹೀಗೆ ಎಲ್ಲರೂ ಆಟದ ಲಕ್ಷಣಗಳನ್ನು ತಿಳಿದುಕೊಂಡು ಆಡುವವರು ಯಾರು ಎಂದು ತೀರ್ಮಾನಿಸಬೇಕು. ಕೊನೆಗೆ ಮನೆಯ ಕ್ಯಾಪ್ಟನ್ ಆಗಿರೋ ತನಿಷಾ ಅಂತಿಮ ನಿರ್ಧಾರ ಪ್ರಕಟ ಮಾಡುತ್ತಾರೆ. ಎಂದು ಬಿಗ್ ಭಾಸ್ ಆದೇಶ ಹೊರಡಿಸಿದೆ.
ನಮ್ರತಾ ಮತ್ತು ಸಂಗೀತಾ ಸದಸ್ಯರ ಹೆಸರು ಹೇಳುವಾಗ ಪ್ರತಾಪ್ ಬೇಡ ಅನ್ನುತ್ತಾರೆ. ಇದಕ್ಕೆ ಪ್ರತಾಪ್ ಪ್ಯಾನಿಕ್ ಆಗ್ತಾರೆ ಎಂಬ ಕಾರಣವನ್ನು ಸಹ ಕೊಡುತ್ತಾರೆ.ಪ್ಯಾನಿಕ್ ಎಂಬ ಕಾರಣವನ್ನು ಒಪ್ಪದ ಪ್ರತಾಪ್ ಸಂಗೀತಾರನ್ನ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹೌದು ಅಂತ ಸಂಗೀತಾ ಹೇಳಿದ್ರೆ, ನೀವು ಒತ್ತಡದಲ್ಲಿದ್ದಾಗ ಪ್ಯಾನಿಕ್ ಆಗುತ್ತೀರಿ ಎಂದು ನಮ್ರತಾ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಬ್ಬರ ಮೇಲೆಯೂ ಅಸಮಾಧಾನಗೊಂಡ ಪ್ರತಾಪ್, ಹೌದು ನಾನು ಪ್ಯಾನಿಕ್ ಆಗ್ತೀನಿ. ಒತ್ತಡದಲ್ಲಿದ್ದಾಗ ಕೈ ನಡುಗುತ್ತೆ ಅಂತ ಹೇಳುತ್ತಿರೋದನ್ನು ಪ್ರೋಮೋದಲ್ಲಿ ಕಾಣಬಹುದಾಗಿದೆ.ಇದೇ ವಿಷಯವನ್ನು ಕಾರ್ತಿಕ್ ಬಳಿಯೂ ಪ್ರತಾಪ್ ಚರ್ಚೆ ಮಾಡಿದ್ದಾರೆ. ಪದೇ ಪದೇ ಪ್ಯಾನಿಕ್ ಆಗ್ತೀನಿ ಅನ್ನೋ ರೀಸನ್ ಕೊಡೋದು ಎಷ್ಟು ಸರಿ ಎಂದು ಪ್ರತಾಪ್ ಬೇಸರ ಹೊರಹಾಕಿ ಮೌನಕ್ಕೆ ಜಾರಿದ್ದಾರೆ. ಇದನ್ನು ನೋಡಿ ನಮೃತಾ ನಮ್ಮನ್ನು ಬಿಟ್ಟು ಬಿಡಪ್ಪ ನಮಗೆ ನಿನ್ನಷ್ಟು ಬುದ್ದಿ ಇಲ್ಲಾ ಎಂದು ನುಡಿದಿದ್ದಾರೆ. ಇದರಿಂದ ನೊಂದು ಪ್ರತಾಪ್ ಕಣ್ಣೀರು ಹಾಕಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.