ನಮ್ರತಾ ಗೌಡ ಜೊತೆ ಕಾತಿ೯ಕ್ ಲವ್ವಿಡವ್ವಿ, ಮೂಲೆಯಲ್ಲಿ ಕೂತು ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಸಂಗೀತಾ

 | 
G

 ಸಂಗೀತಾ  ಮತ್ತು ಕಾರ್ತೀಕ್ ಈ ಸಲದ ಜನ ಮೆಚ್ಚಿದ ಜೋಡಿಯಾಗಿದ್ದರು ಎನ್ನುವಷ್ಟರಲ್ಲಿ ಅವರಿಬ್ಬರೂ ದೂರವಾಗಿದ್ದಾರೆ. ಹೌದು ನಾವಿಬ್ಬರೂ ಫ್ರೆಂಡ್ಸ್ ಎನ್ನುವ ಮಟ್ಟಕ್ಕೆ ಅವರ ಗೆಳೆತನ ಬಂದು ನಿಂತಿದೆ. ಇಷ್ಟು ದಿನ ಬಿಗ್ ಬಾಸ್ ಮನೆಯೊಳಗೆ ಎಲ್ಲರ ಕಣ್ಣು ಕಾರ್ತಿಕ್ ಹಾಗೂ ಸಂಗೀತಾ ಮೇಲಿತ್ತು. ಆದರೆ, ಮನೆಯಲ್ಲಿ ಎರಡು ತಂಡಗಳ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡಿತ್ತು. 

ನೀನು ಫೇಕ್.. ಎಂದು ಸಂಗೀತಾ ಹೇಳಿದ್ದಕ್ಕೆ ಕಾರ್ತಿಕ್ ಶಾಕ್ ಆಗಿದ್ದರು. ಸದ್ಯ ಕಾರ್ತಿಕ್ ಹಾಗೂ ಸಂಗೀತಾ ಇಬ್ಬರೂ ನಮ್ರತಾ ನಾಯಕತ್ವದ ಉಗ್ರಂ ತಂಡವನ್ನು ಸೇರಿಕೊಂಡಿದ್ದರು. ಇಲ್ಲಿಂದ ಕಾರ್ತಿಕ್ ವರಸೆ ಬದಲಿಸಿದ್ದಾರೆ.

   ಇದೀಗ ಕಾರ್ತಿಕ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇಂದು ಬೆಳಿಗ್ಗೆ ಬಿಗ್‌ಬಾಸ್‌ ಮನೆಯ ಕಿಚನ್‌ನಲ್ಲಿ ಎಲ್ಲರೂ ಅಡುಗೆ ಮಾಡುವುದರಲ್ಲಿ ನಿರತರಾಗಿದ್ದರೆ, ಕಾರ್ತಿಕ್, ನಮ್ರತಾ ಜೊತೆಗೆ ಫ್ಲರ್ಟ್‌ ಮಾಡುವುದರಲ್ಲಿ ಮುಳುಗಿದ್ದರು. 

ತಮಾಷೆ ತಮಾಷೆಯಾಗಿಯೇ ಶುರುವಾದ ಮಾತು, ನಮ್ರತಾ ಜೊತೆಗೆ ಡೇಟ್ ಮಾಡುವುದರವರೆಗೂ ಮುಂದುವರಿದಿದೆ. ಅಂದಹಾಗೆ ಅವರು ಡೇಟ್‌ ಮಾಡಲು ಪ್ಲ್ಯಾನ್ ಮಾಡಿರುವುದು ಬೇರೆ ಎಲ್ಲೂ ಅಲ್ಲ, ಬಿಗ್‌ಬಾಸ್‌ ಮನೆಯ ಬಾಲ್ಕನಿಯಲ್ಲಿ. ಆದರೆ ಇದೀಗ ಪ್ರೇಕ್ಷಕರು ಕಾರ್ತಿಕ್ ಕಡೆಗೆ ಕೆಂಗಣ್ಣು ಬೀರಿದ್ದಾರೆ. ಇಷ್ಟು ದಿನ ಸಂಗೀತಾ ಹಿಂದೆ ಸುತ್ತಿ ಇದೀಗ ನಮೃತಾ ಹಿಂದೆ ಹೋಗಿರುವ ಕುರಿತು ಕೋಪ ಮಾಡಿಕೊಂಡಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ