ಡ್ರೋನ್ ಪ್ರತಾಪ್ ಜೊತೆ ಅಪ್ಪು ಸಮಾಧಿ ಬಳಿ ಪೂಜೆ ಮಾಡಿದ ಸಂಗೀತ ಶೃಂಗೇರಿ; ಆದಷ್ಟು ಬೇಗ ಸಿಹಿಸುದ್ದಿ ನೀಡಲಿದ್ಡೇವೆ
Nov 1, 2024, 15:58 IST
|
ಬಿಗ್ ಬಾಸ್ ಸೀಸನ್ 10 ರ ಖ್ಯಾತಿಯ ಸ್ಪರ್ಧಿ ಹಾಗೂ ನಟಿ ಸಂಗೀತ ಶೃಂಗೇರಿಯವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸಂಗೀತ ಶೃಂಗೇರಿಯವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಗೀತ ಶೃಂಗೇರಿ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಒಂದು ಸಲ ತಮ್ಮ ಮೆಡಿಟೇಶನ್ ವಿಚಾರವಾಗಿ, ತಮ್ಮ ಟ್ರಾವೆಲ್ ಫೊಟೊಗಳನ್ನು, ತಮ್ಮ ಫೋಟೊ ಶೂಟ್ ಗಳನ್ನು ಶೇರ್ ಮಾಡುವ ಮೂಲಕ ಸೋಶಿಯಲ್ ಮಿಡೀಯಾದಲ್ಲಿ ಆಕ್ಟೀವ್ ಆಗಿರುತ್ತಿದ್ದರು. ಇದೀಗ ವಿಶೇಷ ಕಾರಣದಿಂದ ಸುದ್ದಿಯಾಗಿದ್ದಾರೆ.
ಪುನೀತ್ ರಾಜಕುಮಾರ್ ಮೂರನೇ ವರ್ಷದ ಪುಣ್ಯ ಸ್ಮರಣಾರ್ಥದ ಸಂದರ್ಭದಲ್ಲಿ ಅಪ್ಪು ಸಮಾಧಿಗೆ ಭೇಟಿ ನೀಡಿದ ಸಂಗೀತ ಶೃಂಗೇರಿ, ಅಲ್ಲಿ ಪೂಜೆ ಸಲ್ಲಿಸಿ, ಬಳಿಕ ಅಲ್ಲಿ ನೆರೆದ ಅಭಿಮಾನಿಗಳಿಗೆ ಅನ್ನದಾನ ಮಾಡಿದ್ದಾರೆ. ಇದರ ಫೋಟೊ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಅಪ್ಪು ಸಮಾಧಿಯ ಸುತ್ತ ಸೇರಿಕೊಂಡಿರುವ ಅಭಿಮಾನಿಗಳಿಗೆ ತಾವೇ ಆಹಾರವನ್ನು ಬಡಿಸಿ ಸಂಗೀತ ಸರ್ವ್ ಮಾಡಿದ್ದಾರೆ. ಜೊತೆಗೆ ಅಲ್ಲಿ ನೆರೆದ ಅಭಿಮಾನಿಗಳ ಜೊತೆಗೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಸಂಗೀತ ಶೃಂಗೇರಿ ಫೋಟೊ ವೈರಲ್ ಆಗ್ತಿವೆ. ಸಂಗೀತ ಶೃಂಗೇರಿ ಫೋಟೊ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದು, ನಿಮ್ಮಿಂದ ಮತ್ತಷ್ಟು ಸಮಾಜ ಸೇವೆ ಆಗಲಿ ಎಂದು ಹೇಳ್ತಿದ್ದಾರೆ. ಅಷ್ಟೇ ಅಲ್ಲ ನೀವು ಜನರಿಗೆ ನಿಜವಾದ ಪ್ರೇರಣೆ ಎಂದು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.