ಮದುವೆ ಆಗೋಕೆ ಹುಡುಗ ಸಿಕ್ತಾ ಇಲ್ಲ, ಮನಸ್ಸಿನ ಮಾತು ಹಂಚಿಕೊಂಡ ಸಂಗೀತ ಶೃಂಗೇರಿ

 | 
ಗಗ೭
ಬಿಗ್ ಬಾಸ್‌ ಕನ್ನಡ ಸೀಸನ್ 10ರಲ್ಲಿ ಸಿಂಹಿಣಿ ಅಂತಲೇ ಫೇಮಸ್ ಆದವರು ನಟಿ ಸಂಗೀತಾ ಶೃಂಗೇರಿ. ಅದ್ಯಾಕೋ ಬಿಗ್ ಬಾಸ್‌ನಿಂದ ಹೊರಬಂದ ಮೇಲೆ ಅಷ್ಟಾಗಿ ಸಂಗೀತಾ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅವರ ಸಿನಿಮಾಗಳು ಕೂಡ ತೆರೆಕಂಡಿಲ್ಲ. ಈ ಮಧ್ಯೆ ಮದುವೆ ವಿಚಾರ ಕೂಡ ಚರ್ಚೆ ಆಗಿದೆ. ಆ ಬಗ್ಗೆ ಅವರೇ ಕ್ಲಾರಿಟಿ ನೀಡಿದ್ದಾರೆ. 
ಮೇ 13ರಂದು ಸಂಗೀತಾ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮದುವೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.ಮದುವೆ ಯಾವಾಗ ಆಗಬೇಕೋ, ಆಗ ಆಗುತ್ತೆ. ಸದ್ಯಕ್ಕೆ ಹುಡುಗ ಸಿಕ್ತಿಲ್ಲ . ಕೆಲ ವರ್ಷಗಳ ಹಿಂದೆ ನಾನು ಮದುವೆನೇ ಆಗೋದಿಲ್ಲ ಅಂತ ಹೇಳ್ತಿದ್ದೆ. ಆದರೆ ಇವಾಗ ನನಗೆ ಒಂದೂ ಸರಿಯಾದ ಮದುವೆ ಆಗ್ಬೇಕು ಅನ್ನಿಸೋ ಹುಡುಗನೇ ಸಿಗ್ತಿಲ್ಲ.
ಇನ್ನು ಸರಿಯಾದ ವ್ಯಕ್ತಿ ಸಿಕ್ಕಿದಾಗ ನನಗೆ ಮದುವೆ ಆಗಬೇಕು ಅಂತ ಅನ್ನಿಸಬಹುದು. ಆದರೆ ಸದ್ಯಕ್ಕಂತೂ ಮದುವೆ ಆಗಬೇಕು ಅಂತ ಅನ್ನಿಸ್ತಾ ಇಲ್ಲ. ನನ್ನ ವೃತ್ತಿ ಬದುಕಿನ ಕಡೆಗೆ ನಾನು ಗಮನ ನೀಡಬೇಕಿದೆ ಅಂತ ಸಂಗೀತಾ ಶೃಂಗೇರಿ ಹೇಳಿದ್ದಾರೆ.ವೃತ್ತಿ ಬದುಕಿನಲ್ಲಿ ಬೆಳೆದು, ನಾನು ಸೆಟ್ಲ್ ಆದಮೇಲೆ ಆವಾಗ ಒಬ್ಬ ಹುಡುಗನ್ನ ನೋಡ್ತಿನಿ. ಹುಡುಗನ ಮೇಲೆ ಡಿಪೆಂಡ್ ಆಗೋದಕ್ಕೆ ನನಗೆ ಇಷ್ಟವಿಲ್ಲ. ಗಂಡ ಅಥವಾ ಹೆಂಡತಿ ಯಾರೇ ಆದರೂ ಸರಿ, ಸ್ವಾವಲಂಬಿಗಳಾಗಿ ಇರಬೇಕು. ಇಬ್ಬರು ಸಮಾನವಾಗಿರಬೇಕು ಎಂದು ಸಂಗೀತಾ ಶೃಂಗೇರಿ ಹೇಳಿಕೊಂಡಿದ್ದಾರೆ.
ಈಚೆಗೆ ಬಿಗ್ ಬಾಸ್ ಸ್ಪರ್ಧಿಗಳು ಸಾಲಾಗಿ ಮದುವೆ ಆಗುತ್ತಿದ್ದಾರೆ. ಆದರೆ ಯಾರ ಮದುವೆ, ಪಾರ್ಟಿಗಳಲ್ಲೂ ಸಂಗೀತಾ ಕಾಣಿಸಿಕೊಂಡಿಲ್ಲ. ಆ ಬಗ್ಗೆ ಕೇಳಿದಾಗ, ನನಗೆ ಯಾರಮೇಲೂ ಯಾವ ದ್ವೇಷನೂ ಇಲ್ಲ. ನಾನು ಸ್ವಲ್ಪ ಇಂಟ್ರೋವರ್ಟ್. ನನ್ನ ಫ್ಯಾಮಿಲಿ ಫಂಕ್ಷನ್ಸ್‌ಗೂ ನಾನು ಹೋಗೋದಿಲ್ಲ. ಪಾರ್ಟಿಗಳಿಗಂತೂ ನಾನು ಹೋಗೋದೇ ಇಲ್ಲ. ಹಾಗಂತ, ಅದು ಅಹಂಕಾರ, ಈಗೋ ಆ ಥರ ಏನಿಲ್ಲ. ಎಲ್ಲರೂ ಒಂದೊಂದು ರೀತಿ ಡಿಫರೆಂಟ್‌ ಆಗಿ ಇರ್ತಾರೆ. ಫಂಕ್ಷನ್ಸ್ ಇದ್ದಾಗ ನಾನು ಕಾಲ್ ಮಾಡಿ, ವಿಶ್ ಮಾಡುತ್ತೇನೆ. ಆದರೆ ಅಲ್ಲಿಗೆ ಹೋಗಿ ಮಾತನಾಡಿಸುವುದು ಕಡಿಮೆ. ಮದುವೆಯಾದವರೆಲ್ಲಾ ಖುಷಿಯಾಗಿರಲಿ ಎಂದು ಸಂಗೀತಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub