ಜೈಲಲ್ಲಿದ್ರು ಅಸಭ್ಯ ವತ೯ನೆ, ನಟ ದಶ೯ನ್ ಪರ ಬ್ಯಾಟ್ ಬೀಸಿದ ಸಂಜನಾ ಗಲ್ರಾಣಿ

 | 
He
 ಕೆಲ ದಿನಗಳಿಂದ ಸುದ್ದಿಯಲ್ಲಿರುವ ನಟ ದರ್ಶನ್‌ ತೂಗುದೀಪ ಬಳ್ಳಾರಿ ಜೈಲಿನಲ್ಲಿ ಮಾಧ್ಯಮಗಳ ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿಸಿ ಅಸಹ್ಯಕರ ಸಂಜ್ಞೆ ಮಾಡಿದ್ದರು ಎಂಬ ದೃಶ್ಯ ವೈರಲ್‌ ಬೆನ್ನೆಲ್ಲೆ ನಟದ ಫ್ಯಾನ್‌ಗಳ ಅಧಿಕೃತ ಪುಟ ಡಿ ಕಂಪನಿ ಸ್ಪಷ್ಟನೆ ನೀಡಿದೆ. ಡಿ ಬಾಸ್‌ ಮಾಡಿದ್ದ ವಿಘ್ನ ಹರ ಮುದ್ರೆ ಹೊರತು ಅಸಹ್ಯಕರ ಸಂಜ್ಞೆಯಲ್ಲ ಎಂದು ಹೇಳಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ಗುರುವಾರ ಕುಟುಂಬಸ್ಥರನ್ನು ಭೇಟಿ ಮಾಡಲು ಸೆಲ್‌ನಿಂದ ಹೊರ ಬರುವ ವೇಳೆ ಕ್ಯಾಮರಾಗಳಿಗೆ ಕೈನ ಮಧ್ಯದ ಬೆರಳನ್ನು ಮುಂದೆ ಮಾಡಿ ಉಳಿದ ಬೆರಳುಗಳನ್ನು ಮಡಿಚಿಟ್ಟುಕೊಂಡಿದ್ದರು. ಇದು ಅಸಹ್ಯಕರ ಸಂಜ್ಞೆ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದ ಉಂಟು ಮಾಡಿತ್ತು. ದರ್ಶನ್‌ ನಡುವಳಿಕೆ ಸುಧಾರಿಸಿಲ್ಲ ಮಾಧ್ಯಮಗಳು ತನ್ನ ವಿರುದ್ಧ ಸುದ್ದಿ ಬಿತ್ತರ ಮಾಡುತ್ತಿರುವುದಕ್ಕೆ ಈ ರೀತಿ ಅಸಹನೆ ತೋರಿದ್ದಾರೆ ಎನ್ನಲಾಗಿತ್ತು. 
ಇನ್ನು ಈ ಕುರಿತಾಗಿ ಮಾದ್ಯಮಗಳ ಮುಂದೆ ಮಾತನಾಡಿರುವ ನಟಿ ಸಂಜನಾ ಗುರ್ಲಾನಿ ಮಾಧ್ಯಮಗಳು ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ತೂಗುದೀಪ ಅವರ ವಿರುದ್ಧ ಸುಖಾಸುಮ್ಮನೆ ಇಲ್ಲಸಲ್ಲದ ವಿಚಾರಗಳನ್ನು ಪ್ರಚೋದಿಸಿ ಮನಬಂದಂತೆ ಸುದ್ದಿ ಬಿತ್ತರಿಸುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಡಿ ಬಾಸ್‌ರವರು ನಡೆದು ಕೊಂಡು ಬರುವಾಗ ವಿಘ್ನ ಹರ ಮುದ್ರಾ ಮಾಡಿಕೊಂಡು ನಡೆದುಕೊಂಡು ಬಂದಿದ್ದನ್ನು ಏನೋ ಅಸಭ್ಯವಾಗಿ ತೋರಿಸಿದರು ಎಂದು ಬಿತ್ತರಿಸುತ್ತಿದ್ದೀರಿ ಎಂದು ಕಿಡಿ ಕಾರಿದ್ದಾರೆ.
ಈ ಹಿಂದೆ ಕೂಡ ದರ್ಶನ್ ಅವರ ಪರ ಮಾತನಾಡಿದ್ದ ಸಂಜನಾ ಈ ಘಟನೆಯಲ್ಲಿ ದರ್ಶನ್‌ ಅವರ ಪಾತ್ರ ಇರಬಾರದು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಈ ಘಟನೆ ಆಗಿರೋದು ನಿಜ. ಆದರೆ ಇದರಲ್ಲಿ ಅಸಹಾಯಕತೆ ತೋರಬಹುದು ಅಷ್ಟೇ. ಒಂದಂತೂ ನಿಜ ದರ್ಶನ್‌ ಜೊತೆಯಲ್ಲಿ ಇದ್ದವರಿಂದ ಈ ಘಟನೆ ನಡೆದಿರಬಹುದು, ಆದರೆ ದರ್ಶನ್‌ ಮಾಡಿರುವುದಿಲ್ಲ. 
ಆ ಬಡ ಕುಟುಂಬದ ಹುಡುಗನ ಮೇಲೆ ಹಲ್ಲೆ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ. ನನಗೆ ದರ್ಶನ್‌ ವೈಯಕ್ತಿವಾಗಿ ಪರಿಚಯ ಇದ್ದಾರೆ ದರ್ಶನ್‌ ಈ ರೀತಿಯ ಕೆಲಸ ಮಾಡಿರೋಕೆ ಸಾಧ್ಯವೇ ಇಲ್ಲ ಎಂದಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.