ರಕ್ಷಿತ್ ಶೆಟ್ಟಿ ಜೊತೆ ಸಿಹಿಸುದ್ದಿ ಕೊಟ್ಟ ಶರಣ್ಯ ಶೆಟ್ಟಿ; ಇದೇ ವರ್ಷ ಮಂಗಳೂರಿನಲ್ಲಿ ಸಂಭ್ರಮ

 | 
ಬಗ೭
ಕೆಲ ದಿನಗಳ ಹಿಂದೆ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರ ಜೊತೆ ನಟಿ ಶರಣ್ಯ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿತ್ತು. ಈ ಬಗ್ಗೆ ಸ್ವತಃ ನಟಿ ಶರಣ್ಯ ಶೆಟ್ಟಿ ಮಾತನಾಡಿದ್ದು, ರಕ್ಷಿತ್ ಶೆಟ್ಟಿ ಜೊತೆ ನನ್ನ ಹೆಸರು ಕೇಳಿ ನನ್ನ ಅಪ್ಪ-ಅಮ್ಮ ನಗುತ್ತಿದ್ದರು. ನಮ್ಮಿಬ್ಬರಿಗೂ ಕಾಂಟ್ಯಾಕ್ಟ್‌ಯೇ ಇಲ್ಲ. ಅದು ಅವರಿಗೂ ಗೊತ್ತು. 
ಯಾವುದೋ ಒಂದು ಸೈಮಾ ಇವೆಂಟ್‌ಗೆ ಹೋದೆವು. ಜೊತೆಯಲ್ಲಿ ಫೋಟೋ ತೆಗೆದುಕೊಂಡೆವು, ಅವುಗಳನ್ನು ನಾನು ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದೆ. ಮರು ದಿನ ನೋಡಿದಾಗ ಮದುವೆ ಅಂತಾ ಸುದ್ದಿ ಹರಡಿತ್ತು ಎಂದು ಹೇಳಿದರು.ಜೀ ನ್ಯೂಸ್‌ ಕನ್ನಡದ ಜೊತೆ ಮಾತನಾಡಿದ ಶರಣ್ಯ ಶೆಟ್ಟಿ, ಮದುವೆ ಎನ್ನುವ ಗಾಸಿಪ್‌ಗಳನ್ನು ನೋಡಿದಾಗ ಇದ್ಯಾವುದಿದು ಅಂತಾ ಅಂದುಕೊಂಡೆ. 
ಜೊತೆಯಲ್ಲಿ ಹೋ ಗಾಸಿಪ್ ಅಂದರೆ ಇದು, ಇಂತಹ ಸುದ್ದಿಗಳು ಅಂತಾ ಅಂದುಕೊಂಡೆ. ಮೊದಲ ಬಾರಿ ನನ್ನ ಬಗ್ಗೆ ಇಂತಹ ಗಾಸಿಪ್ ಹುಟ್ಟುಕೊಂಡಿದ್ದು. ನಿಜವಾಗಿ ರಕ್ಷಿತ್‌ ಶೆಟ್ಟಿ ಪಾಪ, ಅವರು ಯಾವ ಹುಡುಗಿ ಜೊತೆ ಫೋಟೋ ಹಾಕಿದರೂ ಅವರ ಜೊತೆ ಮದುವೆ ಮಾಡಿಸಿ ಬಿಡುತ್ತಾರೆ ಎಂದರು.ನನಗೆ ಈಗಲೂ ಅತ್ತಿಗೆ ಅತ್ತಿಗೆ ಅಂತಾ ಕಮೆಂಟ್‌ ಮಾಡುತ್ತಾರೆ. 
ಪಾಪ ಅವರಿಗೆ ವಿಚಾರ ಗೊತ್ತಿಲ್ಲವೇನೋ ಅನಿಸುತ್ತದೆ. ಈ ಸುದ್ದಿ ಎಲ್ಲಾ ಕಡೆ ಹರಿದಾಡಿದಾಗ ನಮ್ಮ ಮನೆಯಲ್ಲಿ ಸೀರಿಯಸ್‌ ಆಗಿ ತಗೊಂಡಿಲ್ಲ. ಏನು ಈ ರೀತಿಯಲ್ಲಿ ಬರುತ್ತಿದೆ ಅಂತಾ ಜೋರಾಗಿ ನಗಾಡಿದ್ರು ಅಷ್ಟೆ. ಜನಾನೇ ಸೀರಿಯಸ್‌ ಆಗಿ ತಗೊಂಡಿದ್ದರು ಅಷ್ಟೇ. ನಾನು ಸೀರಿಯಸ್‌ ಆಗಿ ಟೆನ್ಷನ್‌ ಆಗಿ ಎಲ್ಲಾ ತಗೊಂಡಿಲ್ಲ. ಬರೀ ತಮಾಷೆಯಾಗಿ ತೆಗೆದುಕೊಂಡೆ ಎಂದು ಹೇಳಿದರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.