ಸರ್ಜಾ ಕುಟುಂಬದಲ್ಲಿ ಮದುವೆ ಸಂಭ್ರಮ; ಮೊದಲ ರಾತ್ರಿ ಯಾವ ದೇಶದಲ್ಲಿ ಗೊ ತ್ತಾ

 | 
Ju

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಹಿರಿ ಮಗಳು ಐಶ್ವರ್ಯ ಅವರ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ನಟ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ ಆಮಂತ್ರಣ ಪತ್ರಿಕೆ ಕೊಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಹೌದು ಮನೆ ಮನಗಳಲ್ಲಿ ಸಂತೋಷ ಮೂಡಿದೆ.

ಇದೇ ಜೂನ್ 10ರಂದು ಚೆನ್ನೈನಲ್ಲಿ ನಟಿ ಐಶ್ವರ್ಯ ಅವರ ವಿವಾಹ ತಮಿಳು ನಟ ಉಮಾಪತಿ ರಾಮಯ್ಯ ಜೊತೆಗೆ ನಡೆಯಲಿದೆ. ಈಗಾಗಲೇ ಗಣ್ಯರಿಗೆ ಆಮಂತ್ರಣ ನೀಡುವ ಕೆಲಸ ಆರಂಭವಾಗಿದೆ. ಹೀಗಾಗಿ ನಟ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ ಆಮಂತ್ರಣ ನೀಡುವ ಕೆಲಸ ಮಾಡುತ್ತಿದ್ದಾರೆ.ಇತ್ತೀಚೆಗಷ್ಟೇ ಸ್ಯಾಂಡಲ್​ವುಡ್ ನಟ ಜಗ್ಗೇಶ್ ಮನೆಗೆ ಭೇಟಿ ನೀಡಿದ ಸರ್ಜಾ ದಂಪತಿ, ಮಗಳು ಮದುವೆಗೆ ಆಹ್ವಾನ ನೀಡಿದ್ದಾರೆ.

 ಮಾತ್ರವಲ್ಲದೆ ತಮಿಳುನಾಡು ಸಿಎಂ ಸ್ಟಾಲಿನ್​ ಮನೆಗೂ ದಂಪತಿಗಳು ಭೇಟಿ ನೀಡಿ ಮಗಳ ಮದುವೆಗೆ ಆಹ್ವಾನಿಸಿದ್ದಾರೆ.ಅಂದ್ಹಾಗೆ, ಕಳೆದ ವರ್ಷ ಅಕ್ಟೋಬರ್ ನಲ್ಲಿ ತಮಿಳು ನಟ ಉಮಾಪತಿ ರಾಮಯ್ಯ ಜೊತೆ ಐಶ್ವರ್ಯ ಎಂಗೇಜ್ಮೆಂಟ್ ನಡೆದಿತ್ತು. ಈ ವರ್ಷ ಜೂನ್​ 10 ರಂದು ಈ ಜೋಡಿ ವಿವಾಹವಾಗುತ್ತಿದ್ದಾರೆ.

ಇನ್ನು ಅರ್ಜುನ್ ಸರ್ಜಾ ಪುತ್ರಿ ಹಳದಿ ಬಣ್ಣದ ಉಡುಗೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ಸಂಭ್ರಮದಲ್ಲಿರುವ ಪುತ್ರಿಗೆ ಅರ್ಜುನ್ ಸರ್ಜಾ ಮುತ್ತು ಕೊಟ್ಟು ಮುದ್ದು ಮಾಡಿರೋದು ಎಲ್ಲರ ಗಮನ ಸೆಳೆದಿದೆ. ಐಶ್ವರ್ಯಾ ಮದುವೆ ಶಾಸ್ತ್ರದ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.