ಕುಡಿದು ಬಂದು ಪಾಠ ಮಾಡಲು ಮುಂದಾದ ಶಿಕ್ಷಕನಿಗೆ ಚಪ್ಪಲಿಯಲ್ಲಿ ಹೊಡೆದ ಸ್ಕೂಲ್ ಮಕ್ಕಳು

 | 
ಹಾಹಾ

ಮಕ್ಕಳ ಭವಿಷ್ಯ ರೂಪಿಸುವ ಕೇಂದ್ರಗಳೆಂದರೆ ಅವು ಶಾಲೆಗಳು. ಜ್ಞಾನ ದೇಗುವವಿದು ಕೈ ಮುಗಿದು ಒಳಗೆ ಬಾ ಎಂದು ಶಾಲೆಯ ಬಾಗಿಲ ಮೇಲೆ, ಕಿಟಕಿ ಮೇಲೆ ನಾವು ನೋಡಿರುತ್ತೇವೆ. ಇಂತಹ ಶಾಲೆಗಳಿಗೆ ಮಕ್ಕಳಿಗೆ ಪಾಠ ಮಾಡಲು ಬರುವ ಶಿಕ್ಷಕರು ದೇವರ ಸಮಾನರಾಗಿರುತ್ತಾರೆ. ಗುರುಗಳಿಗೆ ಗೌರವ ನೀಡಿದರೆ ಪುಣ್ಯ ಬರಲಿದೆ ಅನ್ನೋ ಮಾತಿದೆ. ಏಕೆಂದರೆ ಅವರು ಮಕ್ಕಳನ್ನು ತಿದ್ದಿ ತೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿಸುವ ದೇವರಿದ್ದಂತೆ.

 ಹೀಗಾಗಿ ಮನೆಯಲ್ಲಿ ತಂದೆ ತಾಯಿ ಬಿಟ್ಟರೆ ಮುಂದಿನ ಗೌರವ ಪಾಠ ಹೇಳಿಕೊಟ್ಟ ಗುರುಗಳಿಗೆ ಸಿಗಬೇಕು ಎನ್ನುವುದು ಕಾಲರೂಢಿಯಾಗಿದೆ.ಆದ್ರೆ ಮಕ್ಕಳಿಗೆ ಪಾಠ ಮಾಡಲೆಂದೇ ಶಾಲೆಗೆ ಬರುವ ಶಿಕ್ಷಕರೇ ಅಡ್ಡದಾರಿ ಹಿಡಿದರೆ ಹೇಗೆ? ಹೌದು ಇಲ್ಲೊಬ್ಬ ಶಿಕ್ಷಕ ಆತನಿಗೆ ಜೀವನ ರೂಪಿಸಲು ದಾರಿ ಮಾಡಿಕೊಟ್ಟ ಶಾಲೆಯಲ್ಲೇ ಅನೈತಿಕ ಚಟುವಟಿಕೆ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಆತ ಶಾಲೆಯಲ್ಲೇ ಮದ್ಯಪಾನ ಮಾಡಿ ಪಾಠ ಮಾಡುತ್ತಿದ್ದ.

ಹಾಗಾಗಿ ಕಂಠ ಪೂರ್ತಿ ಕುಡಿದು ಶಾಲೆಗೆ ಬಂದ ಶಿಕ್ಷಕನನ್ನು ವಿದ್ಯಾರ್ಥಿಗಳು ಚಪ್ಪಲಿಯಿಂದ ಹೊಡೆದು ಓಡಿಸಿರುವ ಘಟನೆ ಛತ್ತೀಸ್‌ಗಢದ ಬಸ್ತಾರ್‌ನ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಪಾಠ ಗಳಿಸುವ ಶಿಕ್ಷಕನಿಗೆ ಇಲ್ಲಿ ವಿದ್ಯಾರ್ಥಿಗಳು ಪಾಠ ಗಳಿಸಿದ್ದು ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪ್ರತೀ ದಿನ ಮದ್ಯದ ಅಮಲಿನಲ್ಲಿ ಶಾಲೆಗೆ ಬರುತ್ತಿದ್ದು, ಅವಾಚ್ಯ ಶಬ್ದಗಳಿಂದ ವಿದ್ಯಾರ್ಥಿಗಳನ್ನು ಬೈಯುತ್ತಿದ್ದ. ಶಿಕ್ಷಕನ ಈ ವರ್ತನೆಯಿಂದ ಬೇಸತ್ತಿದ್ದ ವಿದ್ಯಾರ್ಥಿಗಳು ಕಳೆದ ವಾರ ಕುಡುಕ ಶಿಕ್ಷಕ ಶಾಲಾ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ಆತನ ಮೇಲೆ ಚಪ್ಪಲಿಗಳನ್ನು ಎಸೆದಿದ್ದಾರೆ. ವಿದ್ಯಾರ್ಥಿಗಳು ಚಪ್ಪಲಿ ಎಸೆಯುತ್ತಿದ್ದಂತೆ ಶಿಕ್ಷಕ ಅಲ್ಲಿಂದ ಓಡಿ ಹೋಗಿದ್ದಾನೆ

@snehamordani ಎಂಬ ಹೆಸರಿನ ಟ್ವಿಟರ್​​ ಖಾತೆಯಲ್ಲಿ ಮಾರ್ಚ್​​​ 26ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಎರಡೇ ದಿನದಲ್ಲಿ 28 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಶಾಲೆಗೆ ಕುಡಿದ ಬಂದ ಶಿಕ್ಷಕನಿಗೆ ವಿದ್ಯಾರ್ಥಿಗಳು ಸರಿಯಾದ ಪಾಠ ಕಲಿಸಿರುವುದನ್ನು ಕಂಡು ಸಾಕಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.