ಹೈಸ್ಕೂಲ್ ವಿ ದ್ಯಾರ್ಥಿನಿಯ ಮುಖ ನೋಡಿ ಬೆ.ಚ್ಚಿ ಬೆರಗಾದ ಸ್ಕೂಲ್ ಟೀಚರ್

 | 
ರರಕ

ಆ ವಿದ್ಯಾರ್ಥಿನಿ ಇನ್ನೂ ಬಾಳಿ ಬದುಕಬೇಕಾದವಳು, ನೂರಾರು ಕನಸಿನ ಬುತ್ತಿ ಹೊತ್ತು ಶಾಲೆಗೆ ಹೊರಟವಳು ಸೇರಿದ್ದು ಮಾತ್ರ ಬಾರದ ಲೋಕಕ್ಕೆ!ಶಾಲೆಯ ಮುಂಭಾಗದಲ್ಲಿ ಆಸ್ಪತ್ರೆ ಇದ್ರೂ ಉಳಿಯಲಿಲ್ಲ. ಅಷ್ಟಕ್ಕೂ ಆ ಗ್ರಾಮದ ವಿದ್ಯಾರ್ಥಿನಿಗೆ ಏನಾಯ್ತು ಅಂತ ತಿಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜೋಗಣ್ಣನಕೆರೆ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ಸಂಭವಿಸಿದೆ. ಈ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿನಿ ಹೃದಯಘಾತ ಕ್ಕೆ ಬಲಿಯಾಗಿದ್ದಾಳೆ. 7 ನೇ ತರಗತಿ ಓದುತ್ತಿರುವ ಸೃಷ್ಟಿ, ಎಂದಿನಂತೆ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ದಾರದಹಳ್ಳಿ ಗ್ರಾಮದ ಶಾಲೆಯ ಮುಂಭಾಗದಲ್ಲೇ ತಲೆ ತಿರುಗಿ ಕುಸಿದು ಬಿದ್ದಿದ್ದಳು. 

ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಹಪಾಠಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲೇ ಕಾಣುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೃಷ್ಟಿಯನ್ನು ಕರೆದೊಯ್ದಿದ್ದರು. ಆದರೆ, ಅಲ್ಲಿ ವೈದ್ಯರು ಇಲ್ಲದ ಹಿನ್ನಲೆ ತಡ ಮಾಡದೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲಾಗಲೇ ಸೃಷ್ಟಿ ಕೊನೆಯುಸಿರೆಳೆದಿದ್ದಳು.

ಇನ್ನು ಸೃಷ್ಟಿ ಹೃದಯಾಘಾತದಿಂದ ಸಾವನ್ನಪ್ಪಿರುವ ಮಾಹಿತಿಯನ್ನ ವೈದ್ಯರಿಂದ ಕೇಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅತೀ ಚಿಕ್ಕ ವಯಸ್ಸಿಗೆ ಹೃದಯಘಾತ ಹೇಗಾಯಿತು ಎನ್ನುವ ಪ್ರಶ್ನೆ ಪೋಷಕರಲ್ಲಿ ಮೂಡಿದೆ. ಜೋಗಣ್ಣನಕೆರೆ ಗ್ರಾಮದ ಅರ್ಜುನ್ ಹಾಗೂ ಸುಮಾ ದಂಪತಿಯ ನಾಲ್ವರು ಮಕ್ಕಳ ಪೈಕಿ ಸೃಷ್ಟಿ ಮೂರನೆಯವಳಾದ ಸೃಷ್ಟಿ 7ನೇ ತರಗತಿ ಓದುತ್ತಿದ್ದಳು.

ಆದ್ರೆ, ಬರ ಸಿಡಿಲಿನಂತೆ ಎರಗಿದ ಪುಟ್ಟ ಬಾಲಕಿಯ ಸಾವಿನ ಸುದ್ದಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಕಣ್ಣೀರಿನ ಕಡಲಿನಲ್ಲಿ ತೇಲುವಂತೆ ಮಾಡಿದೆ. ಸೃಷ್ಟಿಗೆ ಆಗಾಗ ಸಣ್ಣಪುಟ್ಟ ತಲೆ ಸುತ್ತು ಬರುತ್ತಿತ್ತು. ಆದ್ರೆ, ಆರೋಗ್ಯವಾಗಿ ಇದ್ದಳು ಯಾವುದೇ ಸಮಸ್ಯೆ ಇರಲಿಲ್ಲವಂತೆ. ದುರಂತ ಅಂದರೆ, ಹೃದಯಘಾತದಿಂದ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ಗ್ರಾಮಕ್ಕೆ ಗ್ರಾಮವೇ ಬರೆಸಿಡಿಲು ಬಡಿದಂತಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.