ದು ರಂತ ಅಂತ್ಯ ಕಂಡ ಉಡುಪಿ ಅಶ್ವಿನಿ ಶೆಟ್ಟಿಯವರ ಮನೆ ಈಗ ಹೇಗಾಗಿದೆ ನೋಡಿ

 | 
ಬಗ
 ಕಳೆದ ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದ ದಂಪತಿ ಸಾವು ಎಲ್ಲ ಮನಕದಲಿಸಿತ್ತು. ಹಿಂದಿನ ದಿನದವರೆಗೂ ಸನಾತನ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಗನೊಂದಿಗೆ ರೀಲ್ಸ್ ಮಾಡುತ್ತಾ, ಸಮಾಜ ಸೇವೆ ಮಾಡುತ್ತಿದ್ದ ಅಶ್ವಿನಿ ಶೆಟ್ಟಿ ಎನ್ನುವವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಪತಿಯೊಂದಿಗೆ ತಾವೂ ಕೊನೆಯುಸಿರೆಳೆದಿದ್ದರು.
ಉಡುಪಿ ನಗರದ ಅಂಬಲಪಾಡಿಯ ಶೆಟ್ಟಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮಾಲೀಕ ರಮಾನಂದ ಶೆಟ್ಟಿ ಹಾಗೂ ಅವರ ಪತ್ನಿ ಅಶ್ವಿನಿ ಶೆಟ್ಟಿ ಅವರ ಅಕಾಲಿಕ ನಿಧನ ಎಲ್ಲರನ್ನೂ ಕಾಡಿತ್ತು. ಇದೊಂದು ಅನ್ಯಾಯದ ಸಾವು ಎಂದು ಪ್ರತಿಯೊಬ್ಬರು ಕೂಡ ಮನನೊಂದಿದ್ದರು. ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಅಂಶುಲಾ ಶೆಟ್ಟಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿದ್ದಾರೆ.
 ಇನ್ನ ಮಗ ಅಭಿಕ್ ಶೆಟ್ಟಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದ. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಈಗ ಹೇಗಿದ್ದಾರೆ..? ಮನೆ ಹೇಗಿದೆ? ಪುಟ್ಟ ಮಕ್ಕಳು ಯಾರ ಜೊತೆಗಿದ್ದಾರೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು.ಅಂಶುಲಾ ಶೆಟ್ಟಿ ಹಾಗೂ ಅಭಿಕ್ ಶೆಟ್ಟಿ ಸದ್ಯ ಕುಟುಂಬಸ್ಥರೊಂದಿಗೆ ವಾಸವಿದ್ದಾರೆ. ಕೆಲ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಶ್ವಿನಿ ಶೆಟ್ಟಿ ಅವರ ಮಕ್ಕಳು ಮಾತನಾಡಿದ್ದಾರೆ. ಅವರ ಸುಟ್ಟು ಕರಕಲಾಗಿರುವ ಮನೆಯನ್ನು ಸಹ ಇಲ್ಲಿ ತೋರಿಸಲಾಗಿದೆ.
ಅಂದ ಚಂದದ ಮನೆ ಬೆಂಕಿಯ ಕೆನ್ನಾಲಿಗೆ ಸಿಲುಕಿ ಅಂದ ಕಳೆದುಕೊಂಡಿದೆ ಇನ್ನು ಇಂತಹ ಕಷ್ಟದ ಸಮಯದಲ್ಲಿ ನಮಗೆ ಬೆಂಬಲ ನೀಡಿದವರಿಗೆ ತುಂಬಾ ಧನ್ಯವಾದಗಳು. ನಮ್ಮ ಅಪ್ಪ-ಅಮ್ಮ ನಮ್ಮ ಜೊತೆಗೆ ಇದ್ದಾರೆ. ಅವರು ಎಲ್ಲಿಯೂ ಹೋಗಿಲ್ಲ. ದೈಹಿಕವಾಗಿ ಅವರು ನಮ್ಮ ಜೊತೆ ಇಲ್ಲ. ಆದರೆ ಮಾನಸಿಕವಾಗಿ ನಮ್ಮ ಹೃದಯದಲ್ಲಿ ಇದ್ದಾರೆ. ಆ ಸಮಯದಲ್ಲಿ ನಮಗೆ ಬೆಂಬಲವಾಗಿ ನಿಂತವರು ಹಾಗೂ ಇಂದು ನಮ್ಮ ಜೊತೆ ನಿಂತವರಿಗೆ ಧನ್ಯವಾದಗಳು. ನಮಗೆ ನಿಮ್ಮ ಆಶೀರ್ವಾದ ಬೇಕು. ನಮ್ಮ ಸಂಪೂರ್ಣ ಕುಟುಂಬ ನಮ್ಮ ಜೊತೆ ಇದೆ. ನಾವು ಖುಷಿಯಾಗಿ ಇರುತ್ತೇವೆ. ಅಪ್ಪ ಅಮ್ಮನ ಕನಸುಗಳನ್ನು ನನಸು ಮಾಡುತ್ತೇವೆ ಎಂದು ಮಕ್ಕಳು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.