ಮಾತು ಕಲಿತ ಧ್ರುವ ಸಜಾ೯ ಮಗಳು, ಅಮ್ಮನ ಪ್ರಶ್ನೆಗೆ ಹೇಗೆ ಉತ್ತರ ಕೊಡ್ತಾರೆ ನೋಡಿ

 | 
Bvf

 ಕನ್ನಡದ ಕಣ್ಮಣಿ ಧ್ರುವ ಸರ್ಜಾ ಮಗಳು ಈಗೀಗ ಮಾತು ಕಲಿತಿದ್ದಾಳೆ. ಮುದ್ದಾಗಿ ಮಾತನಾಡುವುದನ್ನು ಕೇಳುವುದೇ ಚಂದ. ಹೌದು ಇತ್ತೀಚಿಗಷ್ಟೇ ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ದಂಪತಿಯ ಮಗಳ ಬರ್ತ್‌ಡೇ ಸೆಲೆಬ್ರೇಷನ್ ಅದ್ಧೂರಿಯಾಗಿ ಜರುಗಿತ್ತು. ವಿಶಿಷ್ಟ ಥೀಮ್‌ನಲ್ಲಿ ಮಗಳ ಮೊದಲ ಹುಟ್ಟುಹಬ್ಬವನ್ನ ಧ್ರುವ ಸರ್ಜಾ ಮತ್ತು ಪ್ರೇರಣಾ ಆಚರಿಸಿದ್ದಾರೆ.

      2019 ನವೆಂಬರ್ 25 ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಅಕ್ಟೋಬರ್ 2, 2022 ರಂದು ಹೆಣ್ಣು ಮಗುವಿಗೆ ಪ್ರೇರಣಾ ಶಂಕರ್ ಜನ್ಮ ನೀಡಿದರು. ಮಗಳ ಹೆಸರನ್ನ ಇನ್ನೂ ಧ್ರುವ ಸರ್ಜಾ ಆಗಲಿ, ಪ್ರೇರಣಾ ಶಂಕರ್ ಆಗಲಿ ರಿವೀಲ್ ಮಾಡಿಲ್ಲ. ಮಗಳಿಗೆ ರಾಜಕುಮಾರಿ, ಪುಟಾಣಿ, ಸನ್‌ಶೈನ್ ಅಂತೆಲ್ಲಾ ಕರೆಯುತ್ತಿದ್ದಾರೆ. ಮಗಳ ಮೊದಲ ಬರ್ತ್‌ಡೇ ವೇಳೆಯೂ ಹ್ಯಾಪಿ ಬರ್ತ್‌ಡೇ ಸನ್‌ಶೈನ್‌ ಅಂತಲೇ ಬರೆಯಲಾಗಿತ್ತು.

ಕಳೆದ ತಿಂಗಳು.. ಅಂದ್ರೆ ಸೆಪ್ಟೆಂಬರ್ 18 ರಂದು ಎರಡನೇ ಮಗುವನ್ನ ಧ್ರುವ ಸರ್ಜಾ - ಪ್ರೇರಣಾ ಬರಮಾಡಿಕೊಂಡರು. ಗಣೇಶ ಹಬ್ಬದಂದೇ ಗಂಡು ಮಗುವಿಗೆ ಪ್ರೇರಣಾ ಜನ್ಮ ನೀಡಿದರು. ಇದೀಗ ಮೊದಲ ಮಗಳ ಫಸ್ಟ್ ಇಯರ್‌ ಬರ್ತ್‌ಡೇ ಖುಷಿಯಲ್ಲಿದ್ದಾರೆ ಧ್ರುವ ಸರ್ಜಾ - ಪ್ರೇರಣಾ ದಂಪತಿ. ಧ್ರುವ ಸರ್ಜಾ ಪುತ್ರಿಯ ಬರ್ತ್‌ಡೇ ಸೆಲೆಬ್ರೇಷನ್‌ಗೆ ಕುಟುಂಬಸ್ಥರು, ಆತ್ಮೀಯರು ಭಾಗಿಯಾಗಿದ್ದರು.

ಇನ್ನು ಈದೀಗ ಮಾತು ಕಲಿತಿರುವ ಪುಟಾಣಿ ಮಗುವಿಗೆ ತಾಯಿ ಪ್ರೇರಣಾ ಅಮ್ಮನ ಮಾತಿಗೆ ತಟ್ಟೆಂದು ಉತ್ತರಿಸಿದ್ದಾಳೆ. ಪ್ರೇರಣಾ ಅವರು ಪುಟಾಣಿ ಅಮ್ಮನ ಫೇವರೇಟ್ ಯಾರು ಎಂದು ಕೇಳಿದ್ದಕ್ಕೆ ನಾನು ಎಂಬುದಾಗಿ ಮುದ್ದು ಮುದ್ದಾಗಿ ಉತ್ತರಿಸಿ ಎಲ್ಲರ ಮನಗೆದ್ದಿದ್ದಾಳೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.