ಈ ವಾರ ಕಿಚ್ಚ ಸುದೀಪ್ ಬದಲು ಬತಾ೯ ಇರೋರು ಇವರೇ ನೋಡಿ
Oct 26, 2024, 17:00 IST
|
ಬಿಗ್‌ಬಾಸ್ ಸೀಸನ್ 11 ನಾಲ್ಕನೇ ವಾರದ ಕೊನೆಯ ಹಂತದಲ್ಲಿದೆ. ಯಮುನಾ ಶ್ರೀನಿಧಿ, ರಂಜಿತ್, ಲಾಯರ್ ಜಗದೀಶ್ ಮನೆಯಿಂದ ಹೊರ ಹೋಗಿದ್ದಾರೆ. ಈ ಬಾರಿ ಯಾರು ಮನೆಯಿಂದ ಹೋಗಬಹುದು ಎಂಬ ಕುತೂಹಲಕ್ಕೆ ಒಂದು ದಿನದಲ್ಲಿ ತೆರೆ ಬೀಳಲಿದೆ. ಈ ನಡುವೆ ಬಿಗ್‌ಬಾಸ್ ಮನೆಗೆ ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್ ಎಂಟ್ರಿ ಆಗಿದೆ.
ಪ್ರತಿ ಶನಿವಾರ ಹಾಗೂ ಭಾನುವಾರ ಬಿಗ್‌ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯ್ತಿ ನಡೆಯುತ್ತದೆ. ಆದರೆ ಈ ಬಾರಿ ಸುದೀಪ್ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. ಇತ್ತೀಚೆಗಷ್ಟೇ ಸುದೀಪ್ ತಾಯಿ ಸರೋಜಾ ಸಂಜೀವ್ ಅನಾರೋಗ್ಯದಿಂದ ನಿಧನರಾಗಿದ್ದರು. ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದ ಲಾಯರ್ ಜಗದೀಶ್, ರಂಜಿತ್ ಕೂಡಾ ಸುದೀಪ್ ತಾಯಿಯ ಅಂತಿಮ ದರ್ಶನ ಪಡೆದಿದ್ದರು.
ಸುದೀಪ್, ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಇದೇ ಕಾರಣಕ್ಕೆ ಈ ಬಾರಿ ಸುದೀಪ್ ಪಂಚಾಯ್ತಿ ನಡೆಸಿಕೊಡುತ್ತಿಲ್ಲ. ಅದರ ಬದಲಿಗೆ ವಿಕಟಕವಿ, ನಿರ್ದೇಶಕ ಯೋಗರಾಜ್ ಭಟ್ ದೊಡ್ಮನೆಯಲ್ಲಿ ಪಂಚಾಯ್ತಿ ಮಾಡಲಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯು ಕಾರ್ಯಕ್ರಮದ ಪ್ರೋಮೋ ಹಂಚಿಕೊಂಡಿದೆ. ಇದರಲ್ಲಿ ಯೋಗರಾಜ್ ಭಟ್ ವ್ಯವಸ್ಥೆಗಳು, ನಮಸ್ತೆಗಳು, ಸ್ವಾಗತಗಳು ಎನ್ನುತ್ತಾ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ.
ಯೋಗರಾಜ್ ಭಟ್ರನ್ನು ನೋಡಿ ಸ್ಪರ್ಧಿಗಳು ಖುಷಿಯಾಗುತ್ತಾರೆ. ಮನೆ ಒಳಗೆ ಬರುತ್ತಿದ್ದಂತೆ ಸ್ಪರ್ಧಿಗಳು ಭಟ್ರನ್ನು ಸ್ವಾಗತಿಸಿದರೆ, ಅವರೂ ಕೂಡಾ ಸ್ಪರ್ಧಿಗಳಿಗೆ ಕೈ ಮುಗಿದು ಪ್ರೀತಿಯಿಂದ ಮಾತನಾಡಿಸುತ್ತಾರೆ. ಹನುಮಂತನನ್ನು ಮಾತನಾಡಿಸುವ ಯೋಗರಾಜ್ ಭಟ್ ನೀನು ಕಂಟೆಸ್ಟಂಟಾ ಆಡಿಯನಾ? ಎನ್ನುತ್ತಾರೆ. ಇಲ್ಲಿ ಇರುವವರೆಲ್ಲಾ ಕುರಿಗಳು ಎಂದು ತಿಳಿದುಕೋ, ಎಲ್ಲರ ಬಗ್ಗೆ ಒಂದೊಂದು ಮಾತು ಹೇಳು ಎನ್ನುತ್ತಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.