ಖ್ಯಾತ ಬ್ಯುಸಿನೆಸ್ ಮ್ಯಾನ್ ಜೊತೆ engagement ಮಾಡಿಕೊಂಡ ದೃಷ್ಟಿ ಬೊಟ್ಟು ಸೀರಿಯಲ್ ನಟಿ
Mar 20, 2025, 14:39 IST
|

ಕೆಲ ದಿನಗಳ ಹಿಂದಷ್ಟೇ ರಾಮಾಚಾರಿ ಧಾರಾವಾಹಿ ನಟಿ ಶೀಲಾ ಎಚ್, ಬಿಗ್ ಬಾಸ್ ಕನ್ನಡ ಖ್ಯಾತಿಯ ರಂಜಿತ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ದೃಷ್ಟಿಬೊಟ್ಟು ಧಾರಾವಾಹಿ ನಟಿ ಗೌತಮಿ ಜಯರಾಮ್ ಅವರು ಕೂಡ ಉಂಗುರು ಬದಲಾಯಿಸಿಕೊಂಡಿದ್ದಾರೆ.ಗೌತಮಿ ಜಯರಾಮ್ ಅವರು ಉದಯ್ ರಾಜ್ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಗೌತಮಿ ಅನ್ನೋದಕ್ಕಿಂತ ಇಂಪನಾ ಪಾತ್ರದಾರಿ ಅಂದ್ರೆ ಬಹುಬೇಗ ತಿಳಿಯಬಹುದು.
ಗೌತಮಿ ಜಯರಾಮ್ ಅವರು ನಟಿ ಒಂದೇ ಅಲ್ಲದೆ ಆರ್ಕಿಟೆಕ್ಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಗೌತಮಿ ಅವರದ್ದೇ ಆದ ಸ್ವಂತ ಕಂಪೆನಿ ಕೂಡ ಇದೆ. ಈಗಾಗಲೇ ಸಾಕಷ್ಟು ಮನೆ, ಆಫೀಸ್ ಇಂಟಿರಿಯರ್ ಡಿಸೈನ್ ಮಾಡಿದ್ದಾರೆ. ಕಲಾವಿದೆ ಆಗಿದ್ದಕ್ಕೆ ಸಾಕಷ್ಟು ಬೇಗ ನನ್ನ ಕೆಲಸ ಮಾಡಿಕೊಡ್ತಾರೆ. ಆಗ ನನಗೆ ಕಲಾವಿದರ ಬೆಲೆ ಗೊತ್ತಾಯ್ತು ಎಂದು ಗೌತಮಿ ಹೇಳಿದ್ದಾರೆ.
ಗೌತಮಿ ಅವರು ನವೀನ್ ಕೃಷ್ಣ, ಕೃತಿಕಾ ನಟನೆಯ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ವಿಜಯ್ ಸೂರ್ಯ ನಟನೆಯ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಗೌತಮಿ ಅವರು ಸೆಕೆಂಡ್ ಹೀರೋಯಿನ್ ಪಾತ್ರ ಮಾಡಿದ್ದರು. ನಟನೆ, ಆರ್ಕಿಟೆಕ್ಟ್ ಕೆಲಸವನ್ನು ಅವರು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಮಹಾಕಾಳಿ ಎನ್ನುವ ಪೌರಾಣಿಕ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ರು.
ಹೌದು.. ನಟಿ ಗೌತಮಿ ಜಯರಾಮ್ ಅವರ ಎಂಗೇಜ್‌ಮೆಂಟ್ ಅದ್ಧೂರಿಯಾಗಿ ಜರುಗಿದೆ. ಉದಯ್ ಶಂಕರ್ ರಾಜು ಎಂಬುವರೊಂದಿಗೆ ಗೌತಮಿ ಜಯರಾಮ್ ನಿಶ್ಚಿತಾರ್ಥ ಸಮಾರಂಭ ಗ್ರ್ಯಾಂಡ್ ಆಗಿ ನೆರವೇರಿದೆ. ಕಿರುತೆರೆ ತಾರೆಯರು, ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಗೌತಮಿ ಜಯರಾಮ್ - ಉದಯ್ ಶಂಕರ್ ರಾಜು ಉಂಗುರ ಬದಲಿಸಿಕೊಂಡಿದ್ದಾರೆ. ಆಪ್ತರು, ಕುಟುಂಬಸ್ಥರು, ಸ್ನೇಹಿತರು, ಕಿರುತೆರೆ ಗಣ್ಯರ ಸಾಕ್ಷಿಯಾಗಿ ಈ ಎಂಗೇಜ್‌ಮೆಂಟ್ ನಡೆದಿದೆ. ನಿಶ್ಚಿತಾರ್ಥದ ಫೋಟೋಗಳನ್ನು ಗೌತಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅನೇಕರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.