ಕಳೆದು ಹೋಗಿದ್ದ ವಸ್ತು ಮತ್ತೆ ಸಿಕ್ತು, ಕೊರಗಜ್ಜನ ಪವಾಡ ವಿವರಿಸಿದ ಸೀರಿಯಲ್ ನಟಿ ಇಳಾವಿಟ್ಲ
May 9, 2025, 12:56 IST
|

ಬಾಲ್ಯದಿಂದ ಹುಟ್ಟಿ ಬೆಳೆದದ್ದು ಬೆಂಗಳೂರು ಆದರೂ ನನ್ನ ಮೂಲ ಜಾಗ ವಿಟ್ಲ.ನಾನು ಊರಿಗೆ ಸಾಕಷ್ಟು ಬಾರಿ ಬಂದಾಗಲೂ ಇಲ್ಲಿಗೆ ಬರಲು ಆಗಲಿಲ್ಲ. ಇಂದು ಯೋಗ ಬಂತು, ಅಜ್ಜ ಕರೆದರು. ಬಂದೆ. ಮಂಗಳೂರಿನಲ್ಲಿ ಒಂದಿಷ್ಟು ಕೆಲಸಗಳಿದ್ದವು. ಈ ಬಾರಿ ಕೊರಗಜ್ಜನ ಬಳಿಗೆ ಬರಲೇಬೇಕೆಂದು ಒಂದು ವಾರದಿಂದ ಅಂದುಕೊಂಡಿದ್ದೆ. ಈಗ ಇಲ್ಲಿಗೆ ಬರುವ ಅವಕಾಶ ದೊರಕಿತು ಎಂದು ಇಳಾ ಹೇಳಿದ್ದಾರೆ.
ನಾನು ಹುಟ್ಟಿದ್ದು ಅಡ್ಯಾರಿನಲ್ಲಿ. ದೊಡ್ಡಪ್ಪನ ಮನೆಯಲ್ಲಿ ಭೂತಕೋಲ ಇರುತ್ತಿತ್ತು. ಹೀಗಾಗಿ ದೈವಗಳ ಬಗ್ಗೆ ನನಗೆ ಬಾಲ್ಯದಿಂದಲೇ ಗೊತ್ತು. ಕೊರಗಜ್ಜನ ಬಗ್ಗೆ ನನಗೆ ಸಾಕಷ್ಟು ಅನುಭವವಾಗಿತ್ತು. ಅಜ್ಜನ ಕಾರ್ಣಿಕದ ಬಗ್ಗೆ ನನಗೆ ಸಾಕಷ್ಟು ನಂಬಿಕೆ ಇದೆ ಎಂದರು.ನಿಮಗೂ ಕೊರಗಜ್ಜನ ಕಾರಣಿಕದ ಅನುಭವವಾಗಿರುವುದೇ ಎಂಬ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ.
ನಾನು ಕೊರಗಜ್ಜನಿಗೆ ಹರಕೆ ಹೇಳುತ್ತಿರಲಿಲ್ಲ. ಸ್ವಾಮಿ ಕೊರಗಜ್ಜನ ಕಥೆ ಕೇಳಿದ್ದೆ. ಅದನ್ನು ಕೇಳುವಾಗ ನನಗೆ ಅನಿಸಿತ್ತು, ಎಷ್ಟೊಂದು ಕಷ್ಟಪಟ್ಟಿದ್ರು ಅಂತ. ಅವರು ಕೊನೆಗೆ ಮಾಯವಾಗಿ ಹೋಗಿದ್ದು, ಅವರ ಪವಾಡದ ಕಥೆಗಳೆಲ್ಲ ಕೇಳಿದ್ದೆ. ನನಗೆ ಅವರ ಕಥೆ ಹೇಳಿದಾಗ ಪಾಪ ಎಷ್ಟು ಕಷ್ಟ ಪಟ್ಟಿದ್ರು ಅನಿಸ್ತು. ಹೀಗಾಗಿ ಅವರ ಜತೆ ಯಾವುದೇ ಹರಕೆ ಕೇಳುತ್ತಿರಲಿಲ್ಲ ಎಂದರು. ಪ್ರಸಾದ ತಿಂದು ಕಾಲು ನೋವು ಮಾಯವಾಗಿತ್ತು. ಕೊರಗಜ್ಜನ ಪವಾಡದಿಂದ ಕಾಣೆಯಾದ ಮೋಬೈಲ್ ಕೂಡಾ ಸಿಕ್ಕಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025