ಮಗಳ ಆಸೆಯಂತೆ ಆ ಕೆಲಸ ಮಾಡಲು ಮುಂದಾದ ಶಾರುಖ್ ಖಾನ್; ಪತ್ನಿಯಿಂದ ತರಾ.ಟೆ

 | 
H

ಬಾಲಿವುಡ್ ನಟ ಶಾರುಖ್ ಖಾನ್ ಪಠಾಣ್  ಸಿನಿಮಾದಿಂದ ಸೂಪರ್ ಡೂಪರ್ ಸಕ್ಸಸ್ ಕಂಡಿದ್ದಾರೆ. ಶಾರುಖ್ ನಟನೆಯ ಕಿಂಗ್ ಚಿತ್ರದ ಮೂಲಕ ಮಗಳು ಸುಹಾನಾ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮಗಳ ಚೊಚ್ಚಲ ಚಿತ್ರಕ್ಕೆ 200 ಕೋಟಿ ರೂ. ಸುರಿಯಲು ಕಿಂಗ್ ಖಾನ್ ತಯಾರಾಗಿದ್ದಾರೆ.

ಈ ಹಿಂದೆ ದಿ ಆರ್ಚೀಸ್ ಸಿನಿಮಾದಲ್ಲಿ ಸುಹಾನಾ ಖಾನ್ ನಟಿಸಿದ್ದರು. ಅದು ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈಗ ಕಿಂಗ್ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುವ ಮೂಲಕ ಸುಹಾನಾ ಬೆಳ್ಳಿಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಮಗಳ ಮೊದಲ ಚಿತ್ರ ಅದ್ಧೂರಿಯಾಗಿರಬೇಕು ಎಂಬ ಕಾರಣಕ್ಕೆ 200 ಕೋಟಿ ರೂ. ಬಜೆಟ್‌ನಲ್ಲಿ ಹಣ ಸುರಿಯಲು ಶಾರುಖ್ ಖಾನ್ ಮುಂದಾಗಿದ್ದಾರೆ.

ಈ ಸಿನಿಮಾಗೆ ಸುಜಯ್ ಘೋಶ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ. ಕಲಾವಿದರ ಆಯ್ಕೆ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಪಠಾಣ್ ಸಿನಿಮಾದಂತೆ ಕಿಂಗ್ ಸಿನಿಮಾ ಕೂಡ ಸಕ್ಸಸ್ ಕಾಣಲೇಬೇಕು ಅಂತ ಶಾರುಖ್ ಖಾನ್ ಪಣ ತೊಟ್ಟಿದ್ದಾರೆ. 

ಮೊದಲ ಸಿನಿಮಾದಲ್ಲೇ ಮಗಳು ಸುಹಾನಾ ಗೆದ್ದು ಬೀಗಬೇಕು ಎಂದು ಶಾರುಖ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅದಕ್ಕಾಗಿ ತಮ್ಮ ಒಡೆತನದ ನಿರ್ಮಾಣ ಸಂಸ್ಥೆಯಿಂದ ಬಿಗ್‌ ಬಜೆಟ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಮತ್ತೊಬ್ಬ ಸ್ಟಾರ್ ಕಿಡ್ ತೆರೆಗೆ ಅಪ್ಪಳಿಸುವುದಂತೂ ಪಕ್ಕಾ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.