ಶಂಕರ್ ನಾಗ್ ಕಾರು ಅ ಪಘಾತವಾದ ಜಾಗದಲ್ಲಿ ಇಂದಿಗೂ ಆತ್ಮ ಸಂಚಾರ
Sep 26, 2024, 19:49 IST
|
ಬದುಕಿದ್ದು ಕೆಲ ವರ್ಷಗಳಾದರೂ ಹಲವು ಜನರ ಮನಗೆದ್ದ ಶಂಕರ್ ನಾಗ್ ಅಪ್ಪಟ ಕನ್ನಡದ ಪ್ರತಿಭೆ.ಸೆಪ್ಟೆಂಬರ್ 30 1990. ಮುಂಜಾನೆ ವೇಳೆಯಲ್ಲಿ ಒಂದು ಆಘಾತಕಾರಿ ವಿಷಯ ಹೊರಬಿದ್ದಿತ್ತು. ಇಡೀ ಕನ್ನಡ ಚಿತ್ರರಂಗ ಕ್ಕೆ ಬರ ಸಿಡಿಲು ಬಡಿದಿತ್ತು. ಇದೇನಪ್ಪಾ? ಈ ಸುದ್ದಿ ನಿಜನಾ? ದೇವರೇ ಹೀಗೆ ಯಾಕೆ ಆಯ್ತು ಅಂತ ಇಡೀ ಕರುನಾಡು ಕಣ್ಣೀರು ಹಾಕಿತ್ತು. ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ,ನಿರ್ಮಾಪಕ, ಸಂಭಾಷಣೆಕಾರ ಶಂಕರ್ನಾಗ್ ಅಪಘಾತ ದಲ್ಲಿ ಕೊನೆಯುಸಿರೆಳೆದಿದ್ದರು. ಯಾರೂ ಊಹಿಸದ ರೀತಿಯಲ್ಲಿ ಅವರ ಶವ ಸಿಕ್ಕಿತ್ತು.
ಆಗೆಲ್ಲ ಈಗಿನ ಕಾಲದ ಹಾಗೇ ಮೀಡಿಯಾ ಆಗಲಿ ಸ್ಮಾರ್ಟ್ ಫೋನ್ ಇರಲಿಲ್ಲ. ನ್ಯೂಸ್ ಪೇಪರ್ನಿಂದ ಮಾತ್ರ ಈ ಸುದ್ದಿ ತಿಳಿಯಬೇಕಿತ್ತು. ಸೆಪ್ಟೆಂಬರ್ 30 ರಂದು ಬೆಳಗ್ಗೆ 9 ಗಂಟೆಯಾಗುವಷ್ಟರಲ್ಲಿ ಶಂಕರ್ ನಾಗ್ ಇನ್ನಿಲ್ಲ ಎಂಬ ಸುದ್ದಿ ಇಡೀ ಕರುನಾಡಿಗೆ ಹಬ್ಬಿತ್ತು.ಶಂಕರ್ನಾಗ್ ಸಾವನ್ನಪ್ಪಿದ್ದ ಹಿಂದಿನ ದಿನ ಹೇಗಿತ್ತು? ಏನಾಯ್ತು ಎಂಬುದರ ಬಗ್ಗೆ ಇನ್ನೂ ಅನೇಕರಿಗೆ ತಿಳಿದಿಲ್ಲ. ಚಿತ್ರಾಪುರ ಮಠದಲ್ಲಿ ಶಂಕರ್ ನಾಗ್ ಅವರ ತಂದೆ ಕೆಲಸ ಮಾಡುತ್ತಿದ್ದರು. ಅವರು ವಿಧಿವಶವಾದ ನಂತರ ಅವರ ತಾಯಿ ಅಲ್ಲೇ ಇದ್ದರು. ಶಂಕರ್ನಾಗ್ ಸಾಯುವ ಹಿಂದಿನ ದಿನ ಅವರ ತಾಯಿ ಕರೆ ಮಾಡಿದ್ದರಂತೆ.
ಶಂಕರ್ ನಾಯ್ ಸಾಯುವ ಹಿಂದಿನ ದಿನ ಅವರ ತಾಯಿ ಶಂಕರ್ನಾಗ್ ಹಾಗೂ ಅನಂತ್ ನಾಗ್ ಅವರಿಗೆ ಕರೆ ಮಾಡಿ, ಚಿತ್ರಾಪುರ ಮಠಕ್ಕೆ ಬರುವಂತೆ ಸೂಚಿಸಿದ್ದರಂತೆ. ಶೂಟಿಂಗ್ ಇರುವ ಕಾರಣ ಆಗಲ್ಲ ಎಂದು ಶಂಕರ್ನಾಗ್ ಹೇಳಿದ್ದರಂತೆ. ತಾಯಿ ಪಟ್ಟು ಹಿಡಿದಿದ್ದರಂತೆ. ವಿಜಯದಶಮಿ ಹಬ್ಬವನ್ನು ಚಿತ್ರಾಪುರ ಮಠದಲ್ಲೇ ಆಚರಿಸಬೇಕು ಎಂದು ಹೇಳಿದರಂತೆ. ಮಠದಲ್ಲಿರುವ ಕಾರಣ ಅವರ ತಾಯಿ ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬಿದ್ದರು. ಅನಂತ್ ನಾಗ್ ಬರುವುದು ಬೇಡ ಅವರಿಗೆ ಗಂಡಾಂತರ ಇದೆ. ನೀನು ಮಾತ್ರ ಬಾ ಎಂದು ಶಂಕರ್ನಾಗ್ಗೆ ಹೇಳಿದ್ದರಂತೆ.
ವಿಜಯದಶಮಿ ಹಬ್ಬ ಮುಗಿಸಿ ವಾಪಸ್ಸು ಹೋಗುವಾಗ ದಾವಣಗೆರೆ ಸ್ವಲ್ಪ ದೂರ ಇರುವ ಆನಗೋಡು ಬಳಿ ಶಂಕರ್ನಾಗ್ ಕಾರು ಅಪಘಾತವಾಗಿತ್ತು. ಒಂದು ವಾರದಿಂದ ಕೆಟ್ಟು ನಿಂತಿದ್ದ ಟ್ರಕ್ಗೆ ಶಂಕರ್ನಾಗ್ ಅವರ ಕಾರು ಗುದ್ದಿತ್ತು. ಲಿಂಗಣ್ಣ ಸ್ವಲ್ಪ ನಿದ್ದೆ ಮಂಪರುನಲ್ಲಿದ್ದರು. ಲಿಂಗಣ್ಣ ಕಾರುನ್ನು ಓಡಿಸುತ್ತಿದ್ದರು. ಲಿಂಗಣ್ಣ ಪಕ್ಕ ಶಂಕರ್ನಾಗ್ ಇದ್ದರು. ಹಿಂಬದಿ ಸೀಟಿನಲ್ಲಿ ಮಗಳು ಕಾವ್ಯ, ಅರುಂಧತಿ ನಾಗ್ ಮಲಗಿಕೊಂಡಿದ್ದರು. ಒಂದಷ್ಟು ಜನ ಕೆಟ್ಟು ನಿಂತಿದ್ದ ಟ್ರಕ್ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಯ್ತು ಅಂತ ಹೇಳುತ್ತಾರೆ. ಇನ್ನೂ ಕೆಲವರು ಕೆಟ್ಟು ನಿಂತಿದ್ದ ಟ್ರಕ್ ಪಕ್ಕ ಹೋಗುವಾಗ ಮತ್ತೊಂದು ಟ್ರಕ್ಗೆ ಮುಂದೆಯಿಂದ ಗುದ್ದಿದೆ ಅಂತ ಹೇಳುತ್ತಾರೆ. ಸ್ಥಳೀಯರು ಹೇಳಿದ ಹಾಗೇ ಪತ್ರಿಕೆಯಲ್ಲಿ ಪ್ರಕಟಣೆಯಾಗಿತ್ತು.
ಆನಗೋಡು ಜನರಿಗೆ ಈಗಲೂ ಶಂಕರ್ನಾಗ್ ಅವರ ಮೇಲೆ ಅಪಾರ ಪ್ರೀತಿ ಇದೆ. ಹೀಗಾಗಿ ಶಂಕರ್ನಾಗ್ ತೀರಿಹೋದ ಜಾಗದಲ್ಲೇ ಶಾಲೆಯನ್ನು ಸಹ ಆ ಊರಿನ ಜನರು ಕಟ್ಟಿಸಿದರು.ಶಂಕರ್ನಾಗ್ ಶಾಲೆ ಎಂದು ಹೆಸರಿಡಲಾಗಿದೆ. ಪ್ರತಿ ಅಮಾವಾಸೆಯೆಂದು ಆನುಗೋಡು ಭಾಗದ ಜನರು ಶಂಕರ್ನಾಗ್ ಮೃತಪಟ್ಟ ಸ್ಥಳಕ್ಕೆ ಬಂದು ರಾತ್ರಿ ಪೂರ ಆ ಜಾಗವನ್ನು ಕಾಯ್ತಾರಂತೆ. ಶಂಕರ್ನಾಗ್ ಅವರು ಅಲ್ಲೇ ಇದ್ದಾರೆ ಅನ್ನೊ ನಂಬಿಕೆ ಇವರದ್ದು. ಮತ್ತೊಂದು ಕಾರಣ ಅಂದರೆ, ಪ್ರತಿ ಅಮಾವಾಸ್ಯೆಯಂದು ಈ ಭಾಗದಲ್ಲಿ ಹೆಚ್ಚಾಗಿ ಅಪಘಾತವಾಗುತ್ತಂತೆ. ಹೀಗಾಗಿ ಇಲ್ಲಿನ ಜನರು ಪ್ರತಿ ಅಮಾವಾಸ್ಯೆಯೆಂದು ಅಪಘಾತವಾದ ಸ್ಥಳಕ್ಕೆ ಬಂದು ಕಾಯ್ತಾರಂತೆ. ಯಾರೇ ಈ ಜಾಗದಲ್ಲಿ ಗಾಡಿ ನಿಲ್ಲಿಸಿದರು, ಅವರನ್ನು ಅಲ್ಲಿಂದ ಕಳುಹಿಸುತ್ತಾರಂತೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.