ಅವಳದ್ದು ಸೀಳಿದ್ರು ಒಂದು ಅಕ್ಷರ ಕನ್ನಡ ಬರಲ್ಲ; ರಶ್ಮಿಕಾಗೆ ಟಾಂಗ್ ಕೊಟ್ಟ ಯಮುನಾ ಶ್ರೀನಿಧಿ
Apr 8, 2025, 17:55 IST
|

ಇದೀಗ ರಶ್ಮಿಕಾ ಮಂದಣ್ಣ ಅವರ ಈ ಹೇಳಿಕೆಯ ಬಗ್ಗೆ ಬಿಗ್ ಬಾಸ್ ಸೀಸನ್ 11ರ ಖ್ಯಾತಿಯ ನಟಿ ಯಮುನಾ ಶ್ರೀನಿಧಿ ಅವರು ಮಾತನಾಡಿದ್ದಾರೆ. ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಶ್ಮಿಕಾ ಮಂದಣ್ಣ ಯಾವ ಸಂದರ್ಭದಲ್ಲಿ ಹೇಳಿದ್ದಾರೋ ನೋಡಿಲ್ಲ ನಾನು. ಆದರೆ ನನ್ನ ತಾಯಿಯನ್ನು ನನ್ನ ತಾಯಿ ಅಂತಾ ಹೇಳಿಕೊಳ್ಳಲು ಆಗದೇ ಇದ್ದ ಮೇಲೆ ಹೇಗೆ?. ಬೇರೆ ಹೆಂಗಸಿಗೆ ನೀವು ಗೌರವ ಕೊಡಬಹುದು, ಹಾಗಂತ ಬೇರೆ ಹೆಂಗಸನ್ನು ತೋರಿಸಿ ನನ್ನ ತಾಯಿ ಅಂತಾ ಹೇಳಲು ಆಗುವುದಿಲ್ಲ. ನನ್ನ ತಾಯಿ ಯಾವತ್ತಿದ್ದರೂ ನನ್ನ ತಾಯಿಯೆನೇ.
ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನನ್ನ ಬಗ್ಗೆ ಹೇಳುವುದಾದರೇ ನಾನು ಎಲ್ಲೇ ಹೋದರು ಕನ್ನಡದಲ್ಲಿಯೇ ಮಾತನಾಡುವುದು. ಕನ್ನಡವೇ ನನ್ನ ಗುರುತು. ಬೇರೆ ದೇಶಗಳಿಗೆ ಹೋದಾಗ ನಾವು ಕನ್ನಡದವರು, ನಾನು ಕನ್ನಡತಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ. ನಿಮ್ಮತನ, ನಿಮ್ಮ ಭಾಷೆ, ನಿಮ್ಮ ಬೇರು ಏನು ಎನ್ನುವುದನ್ನು ಹೇಳಿಕೊಳ್ಳಲು ಹೆಮ್ಮೆ ಇರಬೇಕು ಎಂದು ಟಾಂಗ್ ನೀಡಿದ್ದಾರೆ.
ನಾನು ಅವರ ಆ ವಿಡಿಯೋ ನೋಡಿಲ್ಲ ಆದರೆ ಅವರು ನಿಜವಾಗಿಯೂ ಹೇಳಿದ್ದೇ ಆದರೆ, ಅದು ಅವರ ಬಗ್ಗೆ ಮಾತನಾಡುತ್ತದೆ. ಇಲ್ಲಿ ಯಾರ ಬಗ್ಗೆನೂ ಅಲ್ಲ. ನಮ್ಮ ಕನ್ನಡಿಗರಿಗೆ ಸಹಿಷ್ಣುತೆ ಜಾಸ್ತಿ, ಎಲ್ಲವನ್ನೂ ಸಹಿಕೊಂಡು ಬಿಡುತ್ತೇವೆ. ಕನ್ನಡದಲ್ಲಿ ಬೇರೆ ಭಾಷೆಯವರೇ ಹೆಚ್ಚಿದ್ದಾರೆ. ಕನ್ನಡಿಗರಿಗೆ ಸಹಿಷ್ಣುತೆ ಜಾಸ್ತಿ ಇರುವುದರಿಂದ ಯಾರು ಹೇಗೆ ಮಾತನಾಡಿದರೂ ನಡೆಯುತ್ತದೆ ಎಂದುಕೊಂಡು ಹೇಳುತ್ತಾರೋ ನನಗೆ ಗೊತ್ತಿಲ್ಲ.
ಆದರೆ ನಮ್ಮನ್ನು ನಾಲಿಗೆ ಸೀಳಿ ನರಕಕ್ಕೆ ದೂಕಿದರೂ ಕನ್ನಡ ಅಂತಾನೇ ಹೇಳುವುದು. ಅದನ್ನು ಬಿಟ್ಟರೆ ನಮಗೆ ಬೇರೆ ಗುರುತು ಸಹ ಇಲ್ಲ ಎಂದು ಕನ್ನಡ ಅಭಿಮಾನವನ್ನು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,27 Apr 2025
ಶ್ರೀಧರ್ ಪರಿಸ್ಥಿತಿ ಚಿಂತಾಜನಕ, ಮುದ್ದಾದ ಜೀವನ ಅಂತ್ಯದ ಹಾದಿ
Sun,27 Apr 2025