ಆಕೆ ನನ್ನನ್ನು ಸಾಯಿಸ್ತಾಳೆ, ಮದುವೆಯಾಗಿ ವಷ೯ವಾಗ್ತಿದ್ದಂತೆ ಪತ್ನಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕೆ ಎಲ್ ರಾಹುಲ್

 | 
ಕ್

 ಕನ್ನಡ ಕುವರ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಕಳೆದ ವರ್ಷ ಜನವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಪ್ರಸ್ತುತ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದಾರೆ. ಭಾರತದ ವಿಕೆಟ್ ಕೀಪರ್ ಕಂ ಬ್ಯಾಟರ್ ಎನಿಸಿಕೊಂಡಿರುವ ಕೆಎಲ್ ರಾಹುಲ್ ತಮ್ಮ ಪತ್ನಿಯಿಂದ ಈ ಒಂದು ವಿಷಯವನ್ನು ಮುಚ್ಚಿಟ್ಟಿದ್ದಾರಂತೆ, ಒಂದು ವೇಳೆ ಈ ರಹಸ್ಯ ಗೊತ್ತಾದರೆ, ಆಕೆ ನನ್ನನ್ನು ಸಾಯಿಸಿಬಿಡುತ್ತಾಳೆ ಎಂದು ಸ್ವತಃ ಅವರೇ ಹೇಳಿದ್ದಾರೆ.


31ರ ಹರೆಯದ ಕೆಎಲ್ ರಾಹುಲ್ ಇತ್ತೀಚೆಗಷ್ಟೇ ಗಾಯಕ್ಕೆ ತುತ್ತಾಗಿದ್ದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಈ ಅವಧಿಯಲ್ಲಿ ರಾಹುಲ್‌ಗೆ ಪತ್ನಿ ಅಥಿಯಾ ಶೆಟ್ಟಿ ಅವರಿಂದ ಸಾಕಷ್ಟು ಬೆಂಬಲ ಸಿಕ್ಕಿತು.ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕ ಸಿಡಿಸಿದ್ದು, ಈ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 


ಆದರೆ, ಇನಿಂಗ್ಸ್ ಮತ್ತು 32 ರನ್‌ಗಳಿಂದ ಭಾರತದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ, ಅನುಭವಿ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅಗ್ರ 10 ಶತಕಗಳಲ್ಲಿ ರಾಹುಲ್ ಶತಕವನ್ನು ಸೇರಿಸಿ ಮೆಚ್ಚುಗೆ ಸೂಚಿಸಿದ್ದರು.ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಹುಲ್, ಅಥಿಯಾ ಕಷ್ಟದ ಸಮಯದಲ್ಲಿ ನನ್ನೊಂದಿಗೆ ಇದ್ದಳು. ಯಾವಾಗಲೂ ಇರುತ್ತಾಳೆ. 


ಹೆಚ್ಚಿನ ದಿನಗಳಲ್ಲಿ ನನಗಿಂತ ಹೆಚ್ಚು ಕೋಪಗೊಳ್ಳೋದು ಅವರು, ಆಗ ನಾನು ಆಕೆಯನ್ನು ಸಮಾಧಾನ ಪಡಿಸುತ್ತಿದ್ದೆ. ಆದರೆ ಅಂತಹ ಪರಿಸ್ಥಿತಿ ನಾನು ಎದುರಿಸಿದ್ದನ್ನು ಅಥಿಯಾ ನೋಡಿದ್ದು ಅದೇ ಮೊದಲು ಎಂದಿದ್ದಾರೆ.ನಮ್ಮಿಬ್ಬರಿಗೂ ಕಷ್ಟವಾಗಿತ್ತು. ಆದರೆ ನಮಗೆ ಬೇಕಾದ ಸಮಯವನ್ನೂ ನೀಡುತ್ತಿದ್ದೆ,  ನೆಗೆಟಿವಿಟಿ ಇದ್ದರೂ ಸಹ, ಸಂತೋಷದಿಂದ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳನ್ನು ಆನಂದಿಸಿದೆ. ಈ ಸಮಯದಲ್ಲಿ ನನ್ನ ಜೊತೆ ನನ್ನ ಪತ್ನಿ ಸಮಯ ಕಳೆಯುತ್ತಿದ್ದಳು ಎಂದು ಹೇಳಿದ್ದಾರೆ.


ಮೈದಾನದಲ್ಲಿದ್ದಾಗ ಆಕೆಯ ಬಗ್ಗೆ ನಾನು ಯೋಚನೆಯೇ ಮಾಡುವುದಿಲ್ಲ. ಈ ವಿಷಯ ತಿಳಿದರೆ, ಆಕೆ ನನ್ನನ್ನು ನಿಜವಾಗಿಯೂ ಸಾಯಿಸುತ್ತಾಳೆ. ಇದು ಕೇವಲ ಕ್ರಿಕೆಟ್ ಬಗ್ಗೆ ಮಾತ್ರ. ಆದರೆ ಅವಳು ತನ್ನ ಜೀವನವನ್ನು ನನಗಾಗಿ ಅರ್ಪಿಸುತ್ತಾಳೆ. ಬಹಳಷ್ಟು ಪ್ರೀತಿಯನ್ನು ನೀಡುತ್ತಾಳೆ. ಎಂದು ಹೆಂಡತಿಯನ್ನು ಕೊಂಡಾಡಿದ್ದಾರೆ.


(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.