ಶೀತಲ್ ಶೆಟ್ಟಿ ಆ.ತ್ಮಹತ್ಯೆ, ಕಣ್ಣೀರಿನಲ್ಲಿ ಮುಳುಗಿದ ಪೋಷಕರು

 | 
Nd

ಯಾರು ಯಾವಾಗ ಸಾವಿನ ಮನೆಯ ಕದ ತಟ್ಟುತ್ತಾರೋ ಯಾರು ಕೂಡ ಬಲ್ಲವರಿಲ್ಲ ಹೌದು ಉದ್ಯಮಿ ಜಯಶೀಲ್ ಶೆಟ್ಟಿ ಸೊಸೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ನಡೆದಿದೆ. ಶೀತಲ್ ಶೆಟ್ಟಿ ಮೃತ ದುರ್ದೈವಿ.

ಶೀತಲ್ ಶೆಟ್ಟಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್​ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶೀತಲ್ ಶೆಟ್ಟಿ ಅವರು ಉದ್ಯಮಿ ಜಯಶೀಲ್ ಶೆಟ್ಟಿ ಪುತ್ರ ಮನಿಶ್ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯಾಗಿ ಕೇವಲ ಒಂದುವರೆ ವರ್ಷ ಆಗಿತ್ತು.

ಮನಿಷ್ ಹಾಗೂ ಶೀತಲ್ ಶೆಟ್ಟಿ ದಂಪತಿಗೆ ಒಂದುವರೆ ವರ್ಷದ ಹೆಣ್ಣು ಮಗುವಿದೆ. ಗಂಡ ಟೂರ್​ಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕುಟುಂಬಸ್ಥರು ವಿದೇಶ ಪ್ರವಾಸದಲ್ಲಿದ್ದಾರೆ ಎಂಬ ಮಾಹಿತಿ ಲಭಿಸಿದ್ದು ತಮ್ಮನ್ನು ಕರೆದುಕೊಂಡು ಹೋಗಿಲ್ಲ ಎಂಬ ಬೇಸರದಲ್ಲಿ ಇದು ಸಂಭವಿಸಿದೆ ಎನ್ನಲಾಗ್ತಿದೆ.

ಇನ್ನೂ ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಘಟಪ್ರಭಾ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಟುಂಬಸ್ಥರ ಹಾಗೂ ನೆರೆಮನೆಯವರ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಿದ್ದಾರೆ.