ಶೆಫಾಲಿ ಹೃ ದಯಾಘಾತಕ್ಕೆ ಸಾ ವನ್ನಪ್ಪಿಲ್ಲ, ಮನೆಯ ಸೆಕ್ಯೂರಿಟಿ ಮಾಡಿದ ಕೆಲಸ ಇದೀಗ ಬೆಳಕಿಗೆ
Jul 1, 2025, 12:44 IST
|

ಬಾಲಿವುಡ್ಗೆ ಇವತ್ತು ಮತ್ತೊಂದು ಬರಸಿಡಿಲು ಬಂದು ಬಡಿದಿದೆ. ಸಿದ್ಧಾಥ್ ಶುಕ್ಲಾ ಬೆನ್ನಲ್ಲೇ ಇವತ್ತು ನಟಿಯೊಬ್ಬರು ಕಾರ್ಡಿಯಾಕ್ ಅರೆಸ್ಟ್ಗೆ ಬಲಿಯಾಗಿದ್ದಾರೆ. ಕಾಂಟಾ ಲಗಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜರಿವಾಲಾ ಕೊನೆಯುಸಿರೆಳೆದಿದ್ದಾರೆ. ಹೌದು ನಿಜಕ್ಕೂ ಈ ಸಾವು ನೋವನ್ನು ನೀಡುತ್ತದೆ.
ಕಾಂಟಾ ಲಗಾ ಅಂತ 2002ರಲ್ಲಿ ಮೈಬಳುಕಿಸಿದ್ದ ಈ ಬಳುಕೋ ಬಳ್ಳಿ ಪಡ್ಡೆ ಹುಡುಗರ ನಿದ್ದೆಗೆಡೆಸಿದ್ಲು. ಬಳಿಕ ಬೋರ್ಡ್ ಇರದ ಬಸ್ ಹತ್ತಿ ಕನ್ನಡಕ್ಕೆ ಬಂದಿದ್ದ ಈ ಪಂಕಜಾ ಇಂದು ಯಾರಿಗೂ ಹೇಳದೆಯೇ ಹೃದಯ ಬಡಿತ ನಿಲ್ಲಿಸಿಬಿಟ್ಟಿದ್ದಾಳೆ. ಕಾಂಟಾ ಲಗಾ, ಪಂಕಜಾ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದಾರೆ.
42ನೇ ವಯಸ್ಸಿನಲ್ಲೇ ಶೆಫಾಲಿ ಕಾರ್ಡಿಯಾಕ್ ಅರೆಸ್ಟ್ಗೆ ಕೊನೆಯುಸಿರೆಳೆದಿದ್ದಾರೆ. ನಿನ್ನೆ ರಾತ್ರಿ ಶೆಫಾಲಿ ಜರಿವಾಲಾಗೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಕೂಡಲೇ ಪತಿ, ನಟ ಪರಾಗ್ ತ್ಯಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದ್ರೆ ಆಸ್ಪತ್ರೆ ತಲುಪುವಾಗಲೇ ಶೆಫಾಲಿ ಕೊನೆಯುಸಿರೆಳೆದಿದ್ದರು. ಬ್ರಾಟ್ ಡೆಡ್ ಅಂತ ಆಸ್ಪತ್ರೆಯ ವೈದ್ಯರು ಘೋಷಣೆ ಮಾಡಿದ್ದರು.
ನಟಿ ಶೆಫಾಲಿ ಸಾವಿನ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದ್ದು, ಶೆಫಾಲಿ ಜರಿವಾಲಾ ಪತಿಯನ್ನ ವಿಚಾರಣೆಗೊಳಪಡಿಸಿದ್ದಾರೆ. ಶೆಫಾಲಿ ವೈಯಕ್ತಿಕ ಜೀವನದ ಬಗ್ಗೆಯೂ ಹಲವು ಮಾಹಿತಿ ಕಲೆ ಹಾಕಿದ್ದಾರೆ. ನಟಿ ಶೆಫಾಲಿ ಜರಿವಾಲಾ ಸಾವಿಗೆ ಆ್ಯಂಟಿ ಏಜಿಂಗ್ ಟ್ರೀಟ್ಮೆಂಟ್ ಕಾರಣವಾಯ್ತಾ ಅನ್ನೋ ಶಂಕೆ ಕೂಡ ವ್ಯಕ್ತವಾಗಿತ್ತು. ಆದ್ರೆ, ಆ್ಯಂಟಿ ಏಜಿಂಗ್ ಚಿಕಿತ್ಸೆ, ಹೃದಯ ಸ್ತಂಭನಕ್ಕೆ ಸಂಬಂಧವಿಲ್ಲ ಎಂದು ಜರಿವಾಲಾಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಸ್ಪಷ್ಟನೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.